ಲಾಕ್'ಡೌನ್: ಪಾಸ್ ಕೇಳಿ ಕರ್ತವ್ಯ ನಿಭಾಯಿಸಿದ ಪೊಲೀಸ್'ಗೆ ಬಸ್ಕಿ ಹೊಡೆಸಿ ಶಿಕ್ಷೆ ನೀಡಿದ ಅಧಿಕಾರಿ!

ಕೊರೋನಾ ಲಾಕ್'ಡೌನ್ ಹಿನ್ನೆಲೆಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಪೊಲೀಸ್ ಪೇದೆಯೊಬ್ಬರು ವಾಹನ ಚಲಾಯಿಸಲು ಅಗತ್ಯವಿದ್ದ ಪಾಸ್ ತೋರಿಸುವಂತೆ ಅಧಿಕಾರಿಯನ್ನು ಕೇಳಿದ ಕಾರಣಕ್ಕೆ 50 ಬಸ್ಕಿ ಹೊಡೆಸಿ ಶಿಕ್ಷೆ ನೀಡಿರುವ ವಿಚಿತ್ರ ಘಟನೆಯೊಂದು ನಡೆದಿದೆ. 
ಲಾಕ್'ಡೌನ್: ಪಾಸ್ ಕೇಳಿ ಕರ್ತವ್ಯ ನಿಭಾಯಿಸಿದ ಪೊಲೀಸ್'ಗೆ ಬಸ್ಕಿ ಹೊಡೆಸಿ ಶಿಕ್ಷೆ ನೀಡಿದ ಅಧಿಕಾರಿ!
ಲಾಕ್'ಡೌನ್: ಪಾಸ್ ಕೇಳಿ ಕರ್ತವ್ಯ ನಿಭಾಯಿಸಿದ ಪೊಲೀಸ್'ಗೆ ಬಸ್ಕಿ ಹೊಡೆಸಿ ಶಿಕ್ಷೆ ನೀಡಿದ ಅಧಿಕಾರಿ!

ಅರಾರಿಯಾ: ಕೊರೋನಾ ಲಾಕ್'ಡೌನ್ ಹಿನ್ನೆಲೆಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಪೊಲೀಸ್ ಪೇದೆಯೊಬ್ಬರು ವಾಹನ ಚಲಾಯಿಸಲು ಅಗತ್ಯವಿದ್ದ ಪಾಸ್ ತೋರಿಸುವಂತೆ ಅಧಿಕಾರಿಯನ್ನು ಕೇಳಿದ ಕಾರಣಕ್ಕೆ 50 ಬಸ್ಕಿ ಹೊಡೆಸಿ ಶಿಕ್ಷೆ ನೀಡಿರುವ ವಿಚಿತ್ರ ಘಟನೆಯೊಂದು ನಡೆದಿದೆ. 

ಲಾಕ್'ಡೌನ್ ವೇಳೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಅಧಿಕಾರಿಗಳು ಯಾವ ರೀತಿಯ ಕಿರುಕುಳ ನೀಡುತ್ತಿದ್ದಾರೆಂಬುದಕ್ಕೆ ಈ ಘಟನೆ ಪ್ರತ್ಯಕ್ಷ ನಿದರ್ಶನವಾಗಿದೆ. 

ಜೋಕಿಹಾತ್ ಠಆಣಾ ವ್ಯಾಪ್ತಿಯ ಸೂರಜ್ ಪುರ ಸೇತುವೆ ಬಳಿ ಸೋಮವಾರ ಈ ಘಟನೆ ನಡೆದಿದ್ದು, ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಸ್ ಆಗುತ್ತಿದೆ. 

ಗಣೇಶ್ ಲಾಲ್ ತತ್ಮಾ ಎಂಬ ಚೌಕಿದಾರ್ ಜಿಲ್ಲಾ ಕೃಷಿ ಅಧಿಕಾರಿ ಮನೋಜ್ ಕುಮಾರ್ ಎಂಬುವವರ ವಾಹನ ತಡೆದ ಪೊಲೀಸ್ ಪೇದೆ, ಪಾಸ್ ತೋರಿಸುಂತೆ ಕೇಳಿದ್ದಾರೆ. ಇದರಿಂದ ತೀವ್ರವಾಗಿ ಕೆಂಡಾಮಂಡಲಗೊಂಡ ಅಧಿಕಾರಿ ಪೇದೆಯನ್ನು ಬೈದಿದ್ದೂ ಅಲ್ಲದೆ, ಬಲವಂತವಾಗಿ 50 ಬಾರಿ ಬಸ್ಕಿ ಹೊಡೆಸಿ, ಶಿಕ್ಷೆ ನೀಡಿದ್ದಾರೆ.
 
ಇಷ್ಟೇ ಅಲ್ಲದೆ, ವಿಡಿಯೋ ಕಾನ್ಫರೆನ್ಸ್ ನಲ್ಲಿ ಪಾಲ್ಗೊಳ್ಳಬೇಕಾಗಿದೆ. ಇಲ್ಲದೇ ಹೋಗಿದ್ದರೆ, ಜೈಲಿಗೆ ಕಳುಹಿಸುತ್ತಿದ್ದೇ ಎಂದು ಅಬ್ಬರಿಸಿದ್ದಾರೆ. ಈ ವೇಳೆ ಸ್ಥಳದಲ್ಲೇ ಇದ್ದ ಮತ್ತೊಬ್ಬ ಪೊಲೀಸ್ ಅಧಿಕಾರಿ ಕೂಡ ಪೇದೆಯನ್ನೇ ಬೈದಿದ್ದು, ಅಧಿಕಾರಿ ಮುಂದೆ ನನಗೆ ಅವಮಾನ ಮಾಡಿದೆ ಎಂದು ಹೇಳಿರುವುದು ಕಂಡು ಬಂದಿದೆ. 

ಘಟನೆಯನ್ನು ಬಿಹಾರ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಗುಪ್ತೇಶ್ವರ ಪಾಂಡೆ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಸೂಚಿಸಿದ್ದಾರೆ. ತನಿಖಾ ವರದಿ ಸಲ್ಲಿಸಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ, ಅಲ್ಲದೆ ಕರ್ತವ್ಯನಿರತ ಪೊಲೀಸ್ ಪೇದೆಯನ್ನು ಅವಮಾನಿಸಿದ ಅಧಿಕಾರಿಯ ಕ್ರಮಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com