ಶೂನ್ಯ ಬಡ್ಡಿ ಸಾಲ ಯೋಜನೆ ಆರಂಭಿಸಿದ ಆಂಧ್ರ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು "ವೈಎಸ್ಆರ್ ಶೂನ್ಯ ಬಡ್ಡಿ ಸಾಲ" ಯೋಜನೆಯನ್ನು ದ್ವಾಕ್ರಾ ಸ್ವಸಹಾಯ ಗುಂಪುಗಳಿಗೆ (ಎಸ್‌ಎಚ್‌ಜಿ) ಶುಕ್ರವಾರ ಆರಂಭಿಸಿದ್ದಾರೆ
ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ
ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ

ವಿಜಯವಾಡ: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು "ವೈಎಸ್ಆರ್ ಶೂನ್ಯ ಬಡ್ಡಿ ಸಾಲ" ಯೋಜನೆಯನ್ನು ದ್ವಾಕ್ರಾ ಸ್ವಸಹಾಯ ಗುಂಪುಗಳಿಗೆ (ಎಸ್‌ಎಚ್‌ಜಿ) ಶುಕ್ರವಾರ ಆರಂಭಿಸಿದ್ದಾರೆ

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಸುಮಾರು 8.78 ಲಕ್ಷ ಗುಂಪುಗಳ ಬ್ಯಾಂಕ್ ಖಾತೆಗಳಿಗೆ 1,400 ಕೋಟಿ ಹಾಕಿದ್ದು, ಇದರಿಂದ 91 ಲಕ್ಷ ಮಹಿಳೆಯರಿಗೆ ಪ್ರಯೋಜನವಾಗಲಿದೆ. ಈ ಯೋಜನೆಯ ಮೂಲಕ ಪ್ರತಿ ಸ್ವಸಹಾಯ ಸಂಘಕ್ಕೆ ಬಡ್ಡಿ ಇಲ್ಲದೆ 20,000 ರಿಂದ 40,000 ರೂ.ಸಾಲ ದೊರೆಯಲಿದೆ.

8.78 ಲಕ್ಷ ಸ್ವಸಹಾಯ ಗುಂಪುಗಳ ಪೈಕಿ 6.95 ಗುಂಪುಗಳು ಗ್ರಾಮೀಣ ಪ್ರದೇಶದಲ್ಲಿದ್ದರೆ, ಉಳಿದವು ನಗರ ಪ್ರದೇಶಗಳಲ್ಲಿವೆ.
ಇಲ್ಲಿನ ತಡೆಪಲ್ಲಿಯಲ್ಲಿರುವ ತನ್ನ ಕಚೇರಿಯಿಂದ ಡಿಡಬ್ಲ್ಯುಸಿಆರ್‌ಎ ಮಹಿಳೆಯರೊಂದಿಗೆ ನಡೆಸಿದ ಸಂವಾದದಲ್ಲಿ ಮುಖ್ಯಮಂತ್ರಿ ಈ ಘೋಷಣೆ ಮಾಡಿದರು

ಸಂವಾದದ ಸಂದರ್ಭದಲ್ಲಿ, ಆರ್ಥಿಕ ಬಿಕ್ಕಟ್ಟಿನ ಹೊರತಾಗಿಯೂ, ವೈಎಸ್ಆರ್ ಶೂನ್ಯ ಬಡ್ಡಿ ಸಾಲ ಯೋಜನೆಯ ಮೂಲಕ ಮಹಿಳಾ ಉದ್ಯಮಿಗಳಿಗೆ ಆರ್ಥಿಕ ಸಹಾಯವನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ

“ಆರ್ಥಿಕ ಬಿಕ್ಕಟ್ಟಿನ ಹೊರತಾಗಿಯೂ, ಮಹಿಳೆಯರ ಕಲ್ಯಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಈ ಮೊದಲೇ ಘೋಷಿಸಿದಂತೆ, ಮನೆಗಳ ನೋಂದಣಿಯನ್ನು ಕೂಡ ಮಹಿಳೆಯರ ಹೆಸರಿನಲ್ಲಿ ಸಹ ಮಾಡಲಾಗುವುದು, ಅದನ್ನು ನಾವು ಜುಲೈ 8 ರಂದು ಪ್ರಾರಂಭಿಸಲು ಯೋಜಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು

ಸ್ವಸಹಾಯ ಸಂಘಗಳ ಹಲವಾರು ಸದಸ್ಯರು ರೆಡ್ಡಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ರೆಡ್ಡಿ ಪಾದಯಾತ್ರೆಯ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಉಳಿಸಿಕೊಂಡಿದ್ದಕ್ಕಾಗಿ ಮಹಿಳೆಯರು ಧನ್ಯವಾದ ಅರ್ಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com