ಕೇರಳದಲ್ಲಿ ಕೊವಿಡ್‍-19 ಸೋಂಕಿನಿಂದ ನಾಲ್ಕು ತಿಂಗಳ ಹೆಣ್ಣು ಮಗು ಸಾವು

ಕರೋನವೈರಸ್ ದೃಢಪಟ್ಟಿದ್ದ ನಾಲ್ಕು ತಿಂಗಳ ಹೆಣ್ಣು ಶಿಶು ಇಲ್ಲಿನ ವೈದ್ಯಕೀಯ ಕಳೆದ ಮಂಗಳವಾರ ತೀವ್ರ ನ್ಯುಮೋನಿಯಾದಿಂದ ಗಂಭೀರ ಸ್ಥಿತಿಯಲ್ಲಿದ್ದ ಶಿಶುವನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಜಿಕೋಡ್: ಕರೋನವೈರಸ್ ದೃಢಪಟ್ಟಿದ್ದ ನಾಲ್ಕು ತಿಂಗಳ ಹೆಣ್ಣು ಶಿಶು ಇಲ್ಲಿನ ವೈದ್ಯಕೀಯ ಕಳೆದ ಮಂಗಳವಾರ ತೀವ್ರ ನ್ಯುಮೋನಿಯಾದಿಂದ ಗಂಭೀರ ಸ್ಥಿತಿಯಲ್ಲಿದ್ದ ಶಿಶುವನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶಿಶುವಿಗೆ ಉಸಿರುಕಟ್ಟುವಿಕೆ ಸಮಸ್ಯೆ ಇದ್ದು, ಅನುವಂಶಿಕ ಹೃದಯ ಕಾಯಿಲೆ ಇನ್ನಿತರ ತೊಂದರೆಗಳಿಗೆ ಚಿಕಿತ್ಸೆ ಪಡೆಯುತ್ತಿತ್ತು ಎಂದು ಇಲ್ಲಿ ವೈದ್ಯಕೀಯ ಕಾಲೇಜು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಲ್ಲಾ ವೈದ್ಯಕೀಯ ಚಿಕಿತ್ಸೆ ಹೊರತಾಗಿಯೂ ಮಗು ಅನಾರೋಗ್ಯದಿಂದ ಚೇತರಿಸಿಕೊಂಡಿರಲಿಲ್ಲ ಎಂದು ಆಸ್ಪತ್ರೆಯ ಅಧೀಕ್ಷಕ ಡಾ.ಸಿ.ಶ್ರೀಕುಮಾರ್, ಕೋವಿಡ್- 19 ನೋಡಲ್ ಅಧಿಕಾರಿ ಡಾ.ಅಶ್ರಫ್, ಸಹಾಯಕ ನೋಡಲ್ ಅಧಿಕಾರಿ ಡಾ.ಸಿಂದು ಮತ್ತು ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಅಜಿತ್‌ಕುಮಾರ್ ಜಂಟಿಯಾಗಿ ಪ್ರಕಟಣೆಯಲ್ಲಿ ಸಹಿ ಮಾಡಿದ್ದಾರೆ. .

ಮಗುವಿಗೆ ಸೋಂಕಿತ ವ್ಯಕ್ತಿಯ ಸಂಪರ್ಕ ಇಲ್ಲವೇ ಸಾಂಕ್ರಾಮಿಕ ರೋಗವಿಲ್ಲದಿದ್ದರೂ, ಮಗುವನ್ನು ತೀವ್ರವಾದ ಉಸಿರಾಟದ ಸೋಂಕಿನ ಕಾರಣ ಶಿಶುವನ್ನು ಕೋವಿಡ್ ಐಸಿಯುನಲ್ಲಿ ದಾಖಲಿಸಲಾಗಿತ್ತು. ಗಂಟಲು ದ್ರವ ಪರೀಕ್ಷೆಯಲ್ಲಿ ಮಗುವಿಗೆ ಕೊವಿಡ್‍-19 ದೃಢಪಟ್ಟಿತ್ತು. ಮಗುವಿಗೆ ದ್ವಿತೀಯ ಸಂಪರ್ಕದಿಂದ ಸೋಂಕು ತಗುಲಿರುವ ಕುರಿತು ಪರಿಶೀಲಿಸಲಾಗುತ್ತಿದೆ. ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಮಗು ಹೃದಯಾಘಾತದಿಂದ ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಅಸುನೀಗಿದ್ದಾಳೆ ಎಂದು ಪ್ರಕಟಣೆ ತಿಳಿಸಿದೆ.

ಕೋವಿಡ್ -19 ಸೋಂಕು ಶಿಶುವಿಗೆ ಹೇಗೆ ಹರಡಿತು ಎಂಬುದರ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ಶಿಶುವಿನ ಪೋಷಕರು ಇಲ್ಲವೇ ಯಾವುದೇ ನಿಕಟ ಸಂಬಂಧಿಗಳಲ್ಲಿ ಕೋವಿಡ್ -19 ಗೆ ದೃಢಪಟ್ಟಿಲ್ಲ. ಶಿಶುವಿನ ಕುಟುಂಬ ಮಲಪ್ಪುರಂ ಜಿಲ್ಲೆಯ ಮಂಜೇರಿ ಬಳಿಯ ಪಯನಾಡ್ ಗ್ರಾಮದಲ್ಲಿ ವಾಸವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com