ದೆಹಲಿಯಲ್ಲಿ ಪ್ಲಾಸ್ಮಾ ಥೆರಪಿ ಪ್ರಯೋಗಗಳು ಭರವಸೆಯ ಫಲಿತಾಂಶಗಳನ್ನು ನೀಡಿವೆ: ಸಿಎಂ ಕೇಜ್ರಿವಾಲ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ಲಾಸ್ಮಾ ಥೆರಪಿ ಪ್ರಯೋಗಗಳು ಭರವಸೆಯ ಫಲಿತಾಂಶಗಳನ್ನು ನೀಡಿವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶುಕ್ರವಾರ ಹೇಳಿದ್ದಾರೆ.
ಕೇಜ್ರಿವಾಲ್
ಕೇಜ್ರಿವಾಲ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ಲಾಸ್ಮಾ ಥೆರಪಿ ಪ್ರಯೋಗಗಳು ಭರವಸೆಯ ಫಲಿತಾಂಶಗಳನ್ನು ನೀಡಿವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶುಕ್ರವಾರ ಹೇಳಿದ್ದಾರೆ. 

ಈ ಕುರಿತು ಸುದ್ದಿಗಾರರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿರುವ ಅವರು, ಲೋಕ್ ನಾಯಕ್ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ನೀಡಲಾಗುತ್ತಿರುವ ಪ್ಲಾಸ್ಮಾ ಥೆರಪಿ ಪ್ರಯೋಗಗಳು ಭರವಸೆಯ ಫಲಿತಾಂಶಗಳನ್ನು  ನೀಡುತ್ತಿವೆ ಎಂದು ಹೇಳಿದ್ದಾರೆ. 

ಎನ್ಎನ್ಜೆಪಿ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಗಳಿಗೆ ಮಾತ್ರ ಪ್ಲಾಸ್ಮಾ ಥೆರಪಿ ನಡೆಸುವಂತೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಕೇಂದ್ರ ಅನುಮತಿ ನೀಡಿದ ಕೆಲವೇ ದಿನಗಳಲ್ಲಿ ನಾವು ಪ್ಲಾಸ್ಮಾ ಥೆರಪಿ ಆರಂಭಿಸಿದ್ದೆವು. ಒಟ್ಟು ನಾಲ್ಕು ರೋಗಿಗಳ ಮೇಲೆ ಪ್ರಯೋಗ ಆರಂಭಿಸಲಾಗಿತ್ತು. ಈ ವರೆಗೂ ಫಲಿತಾಂಶ ಉತ್ತಮವಾಗಿ ಬಂದಿದೆ ಎಂದು ತಿಳಿಸಿದ್ದಾರೆ. 

ವಿಡಿಯೋ ಕಾನ್ಫರೆನ್ಸ್ ನಲ್ಲಿ ಇನ್ಸ್ಟಿಟ್ಯೂಟ್ ಆಫ್ ಲಿವರ್ ಆ್ಯಂಡ್ ಬಿಲಿಯರಿ ಸೈನ್ಸ್ ನಿರ್ದೇಶಕ ಡಾ.ಎಸ್.ಕೆ. ಸ್ಯಾರಿನ್ ಅವರೂ ಕೂಡ ಮಾತನಾಡಿದ್ದು, ಪ್ಲಾಸ್ಮಾ ಥೆರಪಿಯಿಂದ ಬರುತ್ತಿರುವ ಫಲಿತಾಂಶ ಭರವಸೆಯನ್ನು ಮೂಡಿಸುತ್ತಿದೆ. ಶುಕ್ರವಾರದಿಂದ ಮತ್ತೆ 2-3 ರೋಗಿಗಳಿಗೂ ಈ ಥೆರಪಿಯನ್ನು ಆರಂಭಿಸಲಾಗುತ್ತಿದೆ. ನಾಲ್ಕು ರೋಗಿಗಳ ಫಲಿತಾಂಶ ಉತ್ತಮವಾಗಿ ಬಂದಿದ್ದು, ಸಂತೋಷವಾಗುತ್ತಿದೆ. ಇದೀಗ ಆಸ್ಪತ್ರೆಯಲ್ಲಿರುವ 2-3 ರೋಗಿಗಳಿಗೂ ಚಿಕಿತ್ಸೆ ನೀಡಲು ರಕ್ತ ಹಾಗೂ ಪ್ಲಾಸ್ಮಾ ಸಿದ್ಧವಿದೆ. ಇಂದಿನಿಂದಲೇ ಥೆರಪಿ ಆರಂಭಿಸಲಾಗುತ್ತದೆ ಎಂದಿದ್ದಾರೆ. 

ಇನ್ನೂ 2-3 ವಾರಗಳ ಕಾರ ಇದೇ ರೀತಿಯ ಫಲಿತಾಂಶ ಬಂದಿದ್ದೇ ಆದರೆ, ದೆಹಲಿ ಆಸ್ಪತ್ರೆಗಳಲ್ಲಿರುವ ಎಲ್ಲಾ ಕೊರೋನಾ ಸೋಂಕಿತರಿಗೂ ಪ್ಲಾಸ್ಮಾ ಥೆರಪಿ ನೀಡಲು ಅವಕಾಶ ನೀಡುವಂತೆ ಕೇಂದ್ರ ಸರ್ಕಾರದ ಬಳಿ ಅನುಮತಿ ಕೇ್ಳಲಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com