ಲಾಕ್ ಡೌನ್ ನಿಯಮ ಉಲ್ಲಂಘನೆ: ಆರು ತಿಂಗಳ ಮಗು, ಮೂರು ವರ್ಷದ ಮಗುವಿನ ವಿರುದ್ಧ ಕೇಸ್

ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಆರು ತಿಂಗಳ ಶಿಸು ಮತ್ತು ಮೂರು ವರ್ಷದ ಮಗು ಸೇರಿದಂತೆ ಒಟ್ಟು 51 ಮಂದಿ ವಿರುದ್ಧ ಉತ್ತರ ಕಾಶಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉತ್ತರಾಖಂಡ್: ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಆರು ತಿಂಗಳ ಶಿಸು ಮತ್ತು ಮೂರು ವರ್ಷದ ಮಗು ಸೇರಿದಂತೆ ಒಟ್ಟು 51 ಮಂದಿ ವಿರುದ್ಧ ಉತ್ತರ ಕಾಶಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಹೊರಗೆ ಬರದಂತೆ ನಿಯಮ ಜಾರಿಗೊಳಿಸಲಾಗಿದೆ.

ಆದರೆ ಉತ್ತರ ಕಾಶಿಯಲ್ಲಿ ಜನರು ಗುಂಪು ಗುಂಪಾಗಿ ಓಡಾಟ ನಡೆಸಿದ ಕಾರಣದಿಂದಾಗಿ ಒಂದು ಕುಟುಂಬ ಸೇರಿದಂತೆ ಸುಮಾರು 51 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದರಲ್ಲಿ ಆರು ತಿಂಗಳ ಶಿಶು, 3 ವರ್ಷದ ಮಗು ಹಾಗೂ 8 ವರ್ಷದ ಬಾಲಕ ಎಂದು ಬರೆಯಲಾಗಿದೆ. ಈ ಪ್ರಕರಣ ಮಕ್ಕಳಿಗೂ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ. ಆದರೆ ಅಧಿಕಾರಿಗಳು ಬಾಲಪರಾಧ ಕಾಯ್ದೆ ಪ್ರಕಾರ ಮಕ್ಕಳ ವಿರುದ್ಧ ಪ್ರಕರಣ ದಾಖಲಿಸಿಲ್ಲ, ತನಿಖೆ ಮಾತ್ರ ನಡೆದಿದೆ ಎಂದು ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com