ಕೋವಿಡ್-19: ಪರಿಸ್ಥಿತಿ ಅವಲೋಕನಕ್ಕೆ ಬಂದಿದ್ದ ಕೇಂದ್ರ ತಂಡದ ವಿರುದ್ಧ ಟಿಎಂಸಿ ಅಸಮಾಧಾನ

ಪಶ್ಚಿಮ ಬಂಗಾಳದಲ್ಲಿ ಕೊರೋನಾ ವೈರಸ್ ಪರಿಸ್ಥಿತಿ ಅವಲೋಕನಕ್ಕಾಗಿ ಆಗಮಿಸಿದ್ದ ಕೇಂದ್ರೀಯ ತಂಡದ ವಿರುದ್ಧ ತೃಣಮೂಲ ಕಾಂಗ್ರೆಸ್ ಪಕ್ಷ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಬಂಗಾಳಕ್ಕೆ ಆಗಮಿಸಿದ್ದ ಕೇಂದ್ರ ತಂಡ
ಬಂಗಾಳಕ್ಕೆ ಆಗಮಿಸಿದ್ದ ಕೇಂದ್ರ ತಂಡ

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಕೊರೋನಾ ವೈರಸ್ ಪರಿಸ್ಥಿತಿ ಅವಲೋಕನಕ್ಕಾಗಿ ಆಗಮಿಸಿದ್ದ ಕೇಂದ್ರೀಯ ತಂಡದ ವಿರುದ್ಧ ತೃಣಮೂಲ ಕಾಂಗ್ರೆಸ್ ಪಕ್ಷ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಡೆರೆಕೆ ಒಬ್ರಿಯಾನ್ ಅವರು, ರಾಜ್ಯದಲ್ಲಿ ಕೊರೋನಾ ವೈರಸ್ ಕುರಿತ ಪರಿಸ್ಥಿತಿ ಅವಲೋಕನಕ್ಕಾಗಿ ಆಗಮಿಸಿದ್ದ ಎರಡು ತಂಡಗಳು ರಾಜಕೀಯ ಶತುತ್ವ ಬಿತ್ತಲು ಬಂದಂತೆ ಕಾಣುತ್ತಿವೆ. ಹಾಟ್ ಸ್ಪಾಟ್ ಗಳೇ ಇಲ್ಲದ ಜಿಲ್ಲೆಗಳಿಗೆ ಭೇಟಿ ನೀಡುವ ಮೂಲಕ ಈ ತಂಡ ಅದೆಂತಹ ವರದಿ ನೀಡಲಿದೆ. ಈ ತಂಡದ ಕಾರ್ಯ ವೈಖರಿ ಅನುಮಾನ ಮೂಡಿಸುವಂತಿದ್ದು, ನಿಜಕ್ಕೂ ಅವರ ಗುರಿ ಏನು..? ಯಾವ ಕಾರಣಕ್ಕೆ ಅವರು ಬಂಗಾಳಕ್ಕೆ ಬಂದಿದ್ದಾರೆ? ಕೊರೋನಾ ವೈರಸ್ ಪರಿಸ್ಥಿತಿಯ ವರದಿ ನೀಡಲು ಬಂದಿದ್ದಾರೆಯೋ ಅಥವಾ ರಾಜಕೀಯ ಶತೃತ್ವ ಪಸರಿಸಲು ಬಂದಿದ್ದಾರೆಯೋ ಎಂದು ಪ್ರಶ್ನೆ ಮಾಡಿದ್ದಾರೆ.

ಅಂತೆಯೇ IMCTಯನ್ನು India's Most Callous Team (ಭಾರತದ ಅತ್ಯಂತ ಕಠಿಣ ಅಥವಾ ಪಕ್ಷಪಾತೀ ತಂಡ) ಎಂದು ಹೀಗಳೆದಿದ್ದಾರೆ. ಇತ್ತೀಚೆಗಷ್ಟೇ ಇದೇ ಕೊರೋನಾ ವೈರಸ್ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು, ರಾಜ್ಯಕ್ಕೆ ಕಳಪೆ ಗುಣಮಟ್ಟದ ಕೋವಿಡ್-19 ಕಿಟ್ ಗಳನ್ನು ರವಾನೆ ಮಾಡುವ ಮೂಲಕ ಬಿಜೆಪಿ ಸರ್ಕಾರ ಸಾಂಕ್ರಾಮಿಕ ಪರಿಸ್ಥಿತಿಯಲ್ಲೂ ತನ್ನ ಅಸಹ್ಯ ರಾಜಕೀಯ ಮುಂದುವರೆಸಿದೆ ಎಂದು ಕಿಡಿಕಾರಿದ್ದರು.

ಇನ್ನು ಶುಕ್ರವಾರ ಕೇಂದ್ರದ ಎರಡು ಐಎಂಸಿಟಿ ತಂಡಗಳು ಕೋಲ್ಕತಾ ಮತ್ತು ಸಿಲ್ಗುರಿ ಜಿಲ್ಲೆಗಳಲ್ಲಿನ ಕೊರೋನಾ ಆಸ್ಪತ್ರೆ ಮತ್ತು ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com