ಕಾಶ್ಮೀರದಲ್ಲಿ ಉಗ್ರರಿಬ್ಬರನ್ನು ಎನ್‌ಕೌಂಟರ್ ಮಾಡಿ ಅಪಹರಣಕ್ಕೊಳಗಾಗಿದ್ದ ಪೊಲೀಸರನ್ನು ರಕ್ಷಿಸಿದ ಭಾರತೀಯ ಯೋಧರು!

ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರನ್ನು ಅಪಹರಿಸಿದ್ದ ಉಗ್ರರಿಬ್ಬರನ್ನು ಹೊಡೆದುರುಳಿಸಿ ಭಾರತೀಯ ಯೋಧರು ಪೊಲೀಸರನ್ನು ರಕ್ಷಿಸಿದ್ದಾರೆ.
ಭಾರತೀಯ ಯೋಧರು
ಭಾರತೀಯ ಯೋಧರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರನ್ನು ಅಪಹರಿಸಿದ್ದ ಉಗ್ರರಿಬ್ಬರನ್ನು ಹೊಡೆದುರುಳಿಸಿ ಭಾರತೀಯ ಯೋಧರು ಪೊಲೀಸರನ್ನು ರಕ್ಷಿಸಿದ್ದಾರೆ. 

ಕುಲ್ಗಾಂ ಜಿಲ್ಲೆಯ ಯಾರಿಪೋರಾದಲ್ಲಿ ಇಬ್ಬರು ಉಗ್ರರು ಪೊಲೀಸರನ್ನು ಅಪಹರಿಸಿ ಪ್ರಯಾಣಿಸುತ್ತಿದ್ದಾಗ ಭಾರತೀಯ ಸೇನೆ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಅಲರ್ಟ್ ಆದ ಯೋಧರು ಉಗ್ರರನ್ನು ಸ್ಥಳದಲ್ಲೇ ಎನ್ ಕೌಂಟರ್ ಮಾಡಿ ಪೊಲೀಸರನ್ನು ರಕ್ಷಿಸಿದ್ದಾರೆ. 

ಇನ್ನು ಎನ್ ಕೌಂಟರ್ ವೇಳೆ ಓರ್ವ ಪೊಲೀಸ್ ಗಾಯಗೊಂಡಿದ್ದಾರೆ. ಇನ್ನು ಕಳೆದ ಎರಡು ದಿಗಳಿಂದ ಕಾಶ್ಮೀರದಲ್ಲಿ ಪೊಲೀಸರ ಅಪಹರಣ ಇದು ಎರಡನೇ ಪ್ರಕರಣವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com