ಆನ್ ಲೈನ್ ನಲ್ಲಿ ಪೋರ್ನ್ ವಿಡಿಯೊ ವೀಕ್ಷಿಸುವ ಮಕ್ಕಳ ಸಂಖ್ಯೆ ಶೇ.95 ಹೆಚ್ಚಳ:ಗೂಗಲ್, ವಾಟ್ಸಾಪ್ ಗಳಿಗೆ ಆಯೋಗ ನೊಟೀಸ್

ಆನ್ ಲೈನ್ ನಲ್ಲಿ ಪೋರ್ನ್ ವಿಡಿಯೊ ವೀಕ್ಷಿಸುವ ಮಕ್ಕಳ ಸಂಖ್ಯೆ ಶೇ.95 ಹೆಚ್ಚಳ:ಗೂಗಲ್, ವಾಟ್ಸಾಪ್ ಗಳಿಗೆ ಆಯೋಗ ನೊಟೀಸ್

ರಾಷ್ಟ್ರವ್ಯಾಪಿ ಲಾಕ್ ಡೌನ್ ಸಮಯದಲ್ಲಿ ಆನ್ ಲೈನ್ ನಲ್ಲಿ ಪೋರ್ನ್ ವಿಡಿಯೊ ನೋಡುವ ಮಕ್ಕಳ ಸಂಖ್ಯೆ ಶೇಕಡಾ 95ರಷ್ಟು ಹೆಚ್ಚಾಗಿದ್ದು ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ಗೂಗಲ್, ವಾಟ್ಸಾಪ್ ಮಟ್ಟು ಟ್ವಿಟ್ಟರ್ ಗಳಿಗೆ ನೊಟೀಸ್ ಕಳುಹಿಸಿದೆ.

ನವದೆಹಲಿ: ರಾಷ್ಟ್ರವ್ಯಾಪಿ ಲಾಕ್ ಡೌನ್ ಸಮಯದಲ್ಲಿ ಆನ್ ಲೈನ್ ನಲ್ಲಿ ಪೋರ್ನ್ ವಿಡಿಯೊ ನೋಡುವ ಮಕ್ಕಳ ಸಂಖ್ಯೆ ಶೇಕಡಾ 95ರಷ್ಟು ಹೆಚ್ಚಾಗಿದ್ದು ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ಗೂಗಲ್, ವಾಟ್ಸಾಪ್ ಮತ್ತು ಟ್ವಿಟ್ಟರ್ ಗಳಿಗೆ ನೊಟೀಸ್ ಕಳುಹಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಮಕ್ಕಳ ಹಕ್ಕುಗಳ ಆಯೋಗ, ಆನ್ ಲೈನ್ ನಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ವಿಡಿಯೊಗಳು ಸಿಗುತ್ತಿರುವ ಬಗ್ಗೆ ಸ್ವತಂತ್ರ ತನಿಖೆ ನಡೆಸಿದ್ದು, ಮಕ್ಕಳಿಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸಿಗುತ್ತಿರುವ ಆಪ್ ನಲ್ಲಿ ಸುಲಭವಾಗಿ ಪೋರ್ನ್ ವಿಡಿಯೊಗಳು ಸಿಗುತ್ತಿವೆ.ಈ ಕುರಿತು ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಎಂದು ತಿಳಿದುಬಂದಿದೆ.

ಮಕ್ಕಳ ಲೈಂಗಿಕ ದೌರ್ಜನ್ಯದ ಮೇಲೆ ಅಧ್ಯಯನ ನಡೆಸುವ ಐಸಿಪಿಎಫ್ ನ ಸಂಶೋಧನಾ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ, ಲಾಕ್ ಡೌನ್ ಗಿಂತ ಮೊದಲಿಗೆ ಹೋಲಿಸಿದರೆ ಮಾರ್ಚ್ 24ರಿಂದ 26ರ ನಡುವೆ ಮಕ್ಕಳ ಪೋರ್ನ್ ವಿಡಿಯೊ ವೀಕ್ಷಣೆ ಭಾರತದಲ್ಲಿ ಶೇಕಡಾ 95ರಷ್ಟು ಹೆಚ್ಚಾಗಿದೆ ಎಂದು ಹೇಳುತ್ತದೆ.

ಲಕ್ಷಾಂತರ ಶಿಶುಕಾಮಿಗಳು ಲಾಕ್ ಡೌನ್ ಸಮಯದಲ್ಲಿ ಆನ್ ಲೈನ್ ನಲ್ಲಿ ಪೋರ್ನ್ ವಿಡಿಯೊ ವೀಕ್ಷಣೆ ಮಾಡುತ್ತಿದ್ದು ಮಕ್ಕಳಿಗೆ ಇಂಟರ್ನೆಟ್ ಅತ್ಯಂತ ಅಸುರಕ್ಷಿತವಾಗಿದೆ ಎಂದು ಅಧ್ಯಯನ ಹೇಳಿದೆ.

Related Stories

No stories found.

Advertisement

X
Kannada Prabha
www.kannadaprabha.com