ನರ್ಸ್'ನಲ್ಲಿ ಕೊರೋನಾ ಪಾಸಿಟಿವ್: ದೆಹಲಿಯ ಅತೀದೊಡ್ಡ ಆಸ್ಪತ್ರೆ ಸೀಲ್!

ರಾಷ್ಟ್ರರಾಜಧಾನಿ ದೆಹಲಿಯ ಅತೀದೊಡ್ಡ ಆಸ್ಪತ್ರೆ ಎಂದೇ ಹೇಳಲಾಗುವ ಹಿಂದೂ ರಾವ್ ಆಸ್ಪತ್ರೆಯಲ್ಲಿ ನರ್ಸ್ ಒಬ್ಬರಲ್ಲಿ ಕೊರೋನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನೇ ಸೀಲ್ ಮಾಡಲಾಗಿದೆ ಎಂದು ಭಾನುವಾರ ವರದಿಗಳಿಂತ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯ ಅತೀದೊಡ್ಡ ಆಸ್ಪತ್ರೆ ಎಂದೇ ಹೇಳಲಾಗುವ ಹಿಂದೂ ರಾವ್ ಆಸ್ಪತ್ರೆಯಲ್ಲಿ ನರ್ಸ್ ಒಬ್ಬರಲ್ಲಿ ಕೊರೋನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನೇ ಸೀಲ್ ಮಾಡಲಾಗಿದೆ ಎಂದು ಭಾನುವಾರ ವರದಿಗಳಿಂತ ತಿಳಿದುಬಂದಿದೆ. 

ಪ್ರಸ್ತುತ ವೈರಸ್ ದೃಢಪಟ್ಟಿರುವ ನರ್ಸ್, ಆಸ್ಪತ್ರೆಯಲ್ಲಿ ವಿವಿಧ ಕಟ್ಟಡಗಳಲ್ಲಿ ಕಳೆದ 2 ವಾರಗಳಿಂದ ಕರ್ತವ್ಯ ನಿರ್ವಹಿಸುದ್ದರು ಎಂದು ಹೇಳಲಾಗುತ್ತಿದೆ. ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಇದೀಗ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಆಸ್ಪತ್ರೆಯನ್ನು ಸೀಲ್ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಎಲ್ಲಾ ಕಟ್ಟಡಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿದ ಬಳಿಕವಷ್ಟೇ ಆಸ್ಪತ್ರೆಯನ್ನು ತೆರೆಯಲಾಗುತ್ತದೆ. ನರ್ಸ್ ಜೊತೆಗೆ ಸಂಪರ್ಕ ಹೊಂದಿದ್ದ ಪ್ರತೀಯೊಬ್ಬರನ್ನು ಹುಡುಕಲಾಗುತ್ತದೆ ಎಂದಿದ್ದಾರೆ.
 
ನಿನ್ನೆ ಸಂಜೆಯಷ್ಟೇ ನರ್ಸ್ ನಲ್ಲಿ ವೈರಸ್ ಇರುವುದು ದೃಢಪಟ್ಟಿತ್ತು. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ. ನಿರ್ಲಕ್ಷ್ಯದಿಂದಾಗಿ ಘಟನೆ ಸಂಭವಿಸಿದೆ. ಈ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ಪ್ರಕರಣ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ನಾಗರೀಕ ಸಂಸ್ಥೆ ಇದೀಗ ಹೊಸ ಆದೇಶಗಳನ್ನು ನೀಡಿದ್ದು, ವೈರಸ್ ಪ್ರಕರಣಗಳನ್ನು ಹೇಗೆ ನಿಭಾಯಿಸಬೇಕು ಮತ್ತು ಸೋಂಕಿತನ್ನು ಹೇಗೆ ಕಂಡು ಹಿಡಿಯಬೇಕು. ಕ್ವಾರಂಟೈನ್ ನಲ್ಲಿರುವ ಜನರನ್ನು ಹೇಗೆ ನಿಭಾಯಿಸಬೇಕೆಂಬುದನ್ನು ತನ್ನ ಸಿಬ್ಬಂದಿಗಳಿಗೆ ವಿವರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com