ಮನ್ ಕಿ ಬಾತ್: ಬಸವ ಜಯಂತಿಯಂದು ಬಸವೇಶ್ವರರ ತತ್ವಾದರ್ಶಗಳ ನೆನೆದ ಪ್ರಧಾನಿ ಮೋದಿ!

ಭಾನುವಾರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಬಸವೇಶ್ವರರ ತತ್ವಾದರ್ಶಗಳ ನೆನೆದು, ಮಾನವ ಕುಲಕ್ಕೆ ಬಸವಣ್ಣ ಅವರ ಕೊಡುಗೆ ಅಪಾರ ಎಂದು ಹೇಳಿದರು.
ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ನವದೆಹಲಿ: ಭಾನುವಾರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಬಸವೇಶ್ವರರ ತತ್ವಾದರ್ಶಗಳ ನೆನೆದು, ಮಾನವ ಕುಲಕ್ಕೆ ಬಸವಣ್ಣ ಅವರ ಕೊಡುಗೆ ಅಪಾರ ಎಂದು ಹೇಳಿದರು.

ಇಂದು ಬಸವ ಜಯಂತಿ.. ಹೀಗಾಗಿ ಬಸವ ಜಯಂತಿ ನಿಮಿತ್ತ ಇಂದು ಬೆಳಕ್ಕೆ ಪ್ರಧಾನಿ ಮೋದಿ ಟ್ವೀಟ್ ಮೂಲಕ ದೇಶದ ಜನತೆಗೆ ಬಸವ ಜಯಂತಿ ಶುಭಾಶಯ ಕೋರಿದ್ದರು. ಬಳಿಕ ತಮ್ಮ ವಾರದ ಮನ್ ಕಿ ಬಾತ್ ಕಾರ್ಯಕ್ರಮದಲ್ಲೂ ಬಸವಣ್ಣನವರ ತತ್ವ ಸಿದ್ದಾಂಥಗಳನ್ನು ನೆನೆದ  ಪ್ರಧಾನಿ ಮೋದಿ, 'ಇಂದು ಜಗಜ್ಯೋತಿ ಬಸವೇಶ್ವರರ ಜಯಂತಿ. ಮಾನವ ಕುಲಕ್ಕೆ ಅವರ ಕೊಡುಗೆ ಅಪಾರ. ಈ ಶುಭದಿನದಂದು ಎಲ್ಲರಿಗೂ ಬಸವೇಶ್ವರ ಜಯಂತಿಯ ಶುಭಾಶಯಗಳು ಎಂದು ಹೇಳಿದರು.

ಅಂತೆಯೇ ಬಸವೇಶ್ವರರ ಸಿದ್ಧಾಂತಗಳನ್ನು ಪದೇ ಪದೇ ಓದುವ ಮತ್ತು ಇತರರಿಗೆ ತಿಳಿಸುವ ಸೌಭಾಗ್ಯ ನನ್ನದಾಗಿದೆ. ವಿಶ್ವದಲ್ಲಿರುವ ಎಲ್ಲ ಬಸವೇಶ್ವರ ಅನುಯಾಯಿಗಳಿಗೆ ಬಸವ ಜಯಂತಿಯ ಶುಭಾಶಯಗಳು ಎಂದು ಪ್ರಧಾನಿ ಮೋದಿ ಹೇಳಿದರು.

ಇದೇ ವೇಳೆ ದೇಶದ ವಿವಿಧೆಡೆ ಕೊರೊನಾ ವಾರಿಯರ್ಸ್​ ಮೇಲೆ ದಾಳಿಯಾಗ್ತಿರೋದನ್ನ ಪ್ರಧಾನಿ ಖಂಡಿಸಿದರು. ಅಲ್ಲದೇ, ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಖಚಿತ ಎಂದರೆ. ಕೊರೊನಾ ಎಲ್ಲರ ಜೀವನ ಹಾಗೂ ಜೀವನ ಶೈಲಿ ಬದಲಿಸಿದೆ. ಇಡೀ ವಿಶ್ವವೇ ಕೊರೊನಾ ವಿರುದ್ಧದ  ಹೋರಾಟದಲ್ಲಿ ಭಾರತವನ್ನು ಗೌರವಿಸುತ್ತಿದೆ ಅಂತಾ ಮೋದಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com