ಚೆನ್ನೈ: ರಾಜೀವ್ ಗಾಂಧಿ ಆಸ್ಪತ್ರೆಯ ಮತ್ತಷ್ಟು ವೈದ್ಯರಿಗೆ ಕೊರೋನಾ ಪಾಸಿಟಿವ್; ಹಾಸ್ಟೆಲ್ ಬಂದ್

ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮತ್ತಷ್ಟು ವೈದ್ಯರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮದ್ರಾಸ್ ಮೆಡಿಕಲ್ ಕಾಲೇಜು  ಪುರುಷರ ಪಿಜಿ ಹಾಸ್ಟೆಲ್ ಮುಚ್ಚಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮತ್ತಷ್ಟು ವೈದ್ಯರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮದ್ರಾಸ್ ಮೆಡಿಕಲ್ ಕಾಲೇಜು  ಪುರುಷರ ಪಿಜಿ ಹಾಸ್ಟೆಲ್ ಮುಚ್ಚಲಾಗಿದೆ.

ಹಾಸ್ಟೆಲ್ ನಲ್ಲಿದ್ದ 102 ವೈದ್ಯರಿಗೂ ಪರೀಕ್ಷೆ ಮಾಡಿಸಲಾಗಿದ್ದು ಅದರಲ್ಲಿ ಇಬ್ಬರು ವೈದ್ಯರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ ಎಂದು ಹಾಸ್ಟೆಲ್ ಡೀನ್ ಆರ್ ಜಯಂತಿ ತಿಳಿಸಿದ್ದಾರೆ.

ಕಾರ್ಡಿಯಾಲಜಿ ವಿಭಾಗದ 4 ವೈದ್ಯರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ಆ ವಿಭಾಗವನ್ನು ಮುಚ್ಚಲಾಗಿತ್ತು.  ಶನಿವಾರ ಆರು ಕ್ಯಾನ್ಸರ್ ರೋಗಿಗಳಿಗೆ, ಇಬ್ಬರು ನರ್ಸ್ ಗಳಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿತ್ತು. ರಾಜೀವ್ ಗಾಂಧಿ ಆಸ್ಪತ್ರೆಗೆ ಬಂದಿದ್ದ ಕೊರೋನಾ ಸೋಂಕಿತನಿಂದ ಇವರಿಗೆಲ್ಲಾ ಸೋಂಕು ಹರಡಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com