ವುಹಾನ್ ನ ಎಲ್ ಆಕಾರದ ಕೊರೋನಾ ವೈರಸ್ ನಿಂದ ಗುಜರಾತ್ ನಲ್ಲಿ ಸಾವಿನ ಸಂಖ್ಯೆ ಅಧಿಕ: ತಜ್ಞರು

ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ ಕಂಡುಬಂದ ಎಲ್ ಆಕಾರದ ಕೊರೋನಾ ವೈರಸ್ ನಂತಹ ಕೊರೋನಾ ಗುಜರಾತ್ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿರುವುದರಿಂದ ಆ ರಾಜ್ಯದಲ್ಲಿ ಸಾವಿನ ಸಂಖ್ಯೆ ಅಧಿಕವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವುಹಾನ್ ನ ಎಲ್ ಆಕಾರದ ಕೊರೋನಾ ವೈರಸ್ ನಿಂದ ಗುಜರಾತ್ ನಲ್ಲಿ ಸಾವಿನ ಸಂಖ್ಯೆ ಅಧಿಕ: ತಜ್ಞರು

ಅಹಮದಾಬಾದ್:ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ ಕಂಡುಬಂದ ಎಲ್ ಆಕಾರದ ಕೊರೋನಾ ವೈರಸ್ ನಂತಹ ಕೊರೋನಾ ಗುಜರಾತ್ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿರುವುದರಿಂದ ಆ ರಾಜ್ಯದಲ್ಲಿ ಸಾವಿನ ಸಂಖ್ಯೆ ಅಧಿಕವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎಸ್ ಆಕಾರದ ಕೊರೋನಾ ವೈರಸ್ ಗೆ ಹೋಲಿಸಿದರೆ ಎಲ್ ಆಕಾರದ ಕೊರೋನಾ ವೈರಸ್ ಹೆಚ್ಚಿನ ಸಂಖ್ಯೆಯಲ್ಲಿ ಗುಜರಾತ್ ರಾಜ್ಯದಲ್ಲಿ ಕಂಡುಬರುತ್ತಿದೆ. ಹೀಗಾಗಿ ಸಾವಿನ ಸಂಖ್ಯೆ ಅಧಿಕವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ದೃಢಪಡಿಸಲು ಯಾವುದೇ ಸಂಶೋಧನೆ ನಡೆದಿಲ್ಲ. ರಾಜ್ಯದಲ್ಲಿ ಇದುವರೆಗೆ 133 ಕೊರೋನಾ ಸಾವು ಸಂಭವಿಸಿದೆ.

ವಿದೇಶಗಳಲ್ಲಿ ವಿಜ್ಞಾನಿಗಳು ಮಾಡಿರುವ ವಿಶ್ಲೇಷಣೆ ಪ್ರಕಾರ ಎಲ್ ಆಕಾರದ ಕೊರೋನಾ ವೈರಸ್ ನಿಂದ ಹೆಚ್ಚಿನ ಸಾವು ಸಂಭವಿಸುತ್ತಿದೆ. ಈ ವೈರಸ್ ಚೀನಾದ ವುಹಾನ್ ನಲ್ಲಿ ಹೆಚ್ಚು ಕಂಡುಬಂದಿತ್ತು ಎಂದು ಗುಜರಾತ್ ನ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರದ ನಿರ್ದೇಶಕ ಸಿಜಿ ಜೋಷಿ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com