ಜೈಪುರ: ಕೊರೋನಾಗೆ ಸೆಡ್ಡು ಹೊಡೆದ 90ರ ವೃದ್ಧ; ಗುಣಮುಖರಾಗಿ ಡಿಸ್ಚಾರ್ಜ್

ದೇಶದ್ಯಾಂತ ಕೊರೋನಾ ಮಹಾಮಾರಿಗೆ ಹಲವರು ಬಲಿಯಾಗುತ್ತಿದ್ದಾರೆ, ಇದೇ ವೇಳೆ ಜೈಪುರದ 90 ವರ್ಷದ ವೃದ್ಧ ಕೊರೋನಾ ದಿಂದ ಮುಕ್ತಿ ಹೊಂದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜೈಪುರ: ದೇಶದ್ಯಾಂತ ಕೊರೋನಾ ಮಹಾಮಾರಿಗೆ ಹಲವರು ಬಲಿಯಾಗುತ್ತಿದ್ದಾರೆ, ಇದೇ ವೇಳೆ ಜೈಪುರದ 90 ವರ್ಷದ ವೃದ್ಧ ಕೊರೋನಾ ದಿಂದ ಮುಕ್ತಿ ಹೊಂದಿದ್ದಾರೆ.

ಭವಾನಿ ಶಂಕರ್ ಶರ್ಮಾ ಅವರಿಗೆ ಕೊರೋನಾ ಚಿಕಿತ್ಸೆ ಕೊಡಲಾಗಿತ್ತು, ನಂತರ ಎರಡು ಬಾರಿ ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ.  ಆಸ್ಪತ್ರೆಯಿಂದ ಡಿಸ್ಟಾರ್ಜ್ ಆದ ಶರ್ಮಾ ಅವರಿಗೆ ವೈದ್ಯರು ಹೂಗುಚ್ಚ ನೀಡಿ ಅಭಿನಂದಿಸಿದ್ದಾರೆ. ಗುಣಮುಖವಾಗಿದ್ದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ.

ಧೂಲೇಶ್ವರ್ ನಗರ ನಿವಾಸಿಯಾದ ಶರ್ಮಾ ಏಪ್ರಿಲ್ 14 ರಂದು ಕೊರೋನಾ ಪಾಸಿಟಿವ್ ನಿಂದ ಆಸ್ಪತ್ರೆಗೆ ದಾಖಲಾಗಿದ್ದರು.  ಅಧಿಕ ರಕ್ತದೊತ್ತಡ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರು.

ಏಪ್ರಿಲ್ 25 ರಂದು ಮತ್ತು ಏಪ್ರಿಲ್ 27 ರಂದು 2 ಬಾರಿ ಪರೀಕ್ಷೆ ಮಾಡಿದಾಗಲು ಕೊರೋನಾ ನೆಗೆಟಿವ್ ಬಂದಿದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.

ವೈದ್ಯರು ಹೇಳಿದ ಸೂಚನೆಗಳನ್ನು ಪಾಲಿಸಿದ್ದಾರೆ ನಾವು ಶೀಘ್ರವೇ ಕೊರೋನಾ ದಿಂದ ಗುಣಮುಖರಾಗುತ್ತೇವೆ ಎಂದು ಭವಾನಿ ಶಂಕರ್ ಶರ್ಮಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com