ಮಧ್ಯಪ್ರದೇಶ: ಕ್ವಾರಂಟೈನ್'ನಲ್ಲಿದ್ದ ವ್ಯಕ್ತಿ ಐಸೊಲೇಷನ್ ಕೇಂದ್ರದಲ್ಲಿ ಆತ್ಮಹತ್ಯೆಗೆ ಶರಣು

ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬ ಐಸೊಲೇಷನ್ ಕೇಂದ್ರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಭೋಪಾಲ್: ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬ ಐಸೊಲೇಷನ್ ಕೇಂದ್ರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. 

ಪನ್ನ ಜಿಲ್ಲೆಯ ಅಮನ್ಗಂಜ್ ಎಂಬ ಪ್ರದೇಶದಲ್ಲಿರುವ ವ್ಯಕ್ತಿಯನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ. ಆತ್ಮಹತ್ಯೆಗೆ ಶರಣಾಗುವುದಕ್ಕೂ ಕೆಲವೇ ಗಂಟೆಗಳ ಹಿಂದಷ್ಟೇ ವ್ಯಕ್ತಿ ತನ್ನ ಪೋಷಕರನ್ನು ಭೇಟಿಯಾಗಿ ಮಾತುಕತೆ  ನಡೆಸಿದ್ದ ಎಂದು ಹೇಳಲಾಗುತ್ತಿದೆ. 

ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಪನ್ನಾ ಜಿಲ್ಲೆಯ ಮಹೇವಾ ಗ್ರಾಮ ಮೂಲದ ನಿವಾಸಿಯಾಗಿದ್ದು, ಕೆಲ ದಿನಗಳ ಹಿಂದಷ್ಟೇ ಸಾಗರ ಜಿಲ್ಲೆಯ ಗರ್ಹಕೋಟಾದಿಂದ ತನ್ನ ಐವರು ಗೆಳೆಯರೊಂದಿಗೆ ಗ್ರಾಮಕ್ಕೆ ವಾಪಸ್ಸಾಗಿದ್ದರು. ಈ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ವ್ಯಕ್ತಿಯನ್ನು ಕ್ವಾರಂಟೈನ್ ನಲ್ಲಿರಿಸಲಾಗಿತ್ತು. ವ್ಯಕ್ತಿ ಸಾವನ್ನಪ್ಪುವ ಕೆಲವೇ ಗಂಟೆಗಳ ಹಿಂದಷ್ಟೇ ಆತನ ಪೋಷಕರು ಭೇಟಿ ಮಾಡಿ ಮಾತನಾಡಿಸಿದ್ದರು. ಇದಾದ ಬಳಿಕ ಐಸೋಲೇಷನ್ ಕೇಂದ್ರದಲ್ಲಿಯೇ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಪೊಲೀಸ್ ಅಧಿಕಾರಿ ರಾಕೇಶ್ ತಿವಾರಿಯವರು ಹೇಳಿದ್ದಾರೆ. 

ಕಳೆದ ನಾಲ್ಕು ದಿನಗಳಲ್ಲಿ ಇದು ಎರಡನೇ ಪ್ರಕರಣವಾಗಿದೆ. ಏಪ್ರಿಲ್ 24 ರಂದೂ ಕೂಡ 30 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com