ಗಡಿಯಲ್ಲಿ ಮತ್ತೆ ಪಾಕ್ ಅಪ್ರಚೋದಿತ ದಾಳಿ; ಶೆಲ್ಲಿಂಗ್ ನಲ್ಲಿ ಯುವಕ ಸಾವು, ಭಾರತದಿಂದ ತಕ್ಕ ತಿರುಗೇಟು!

ಇಂಡೋ-ಪಾಕ್ ಗಡಿಯಲ್ಲಿ ಪಾಕಿಸ್ತಾನಿ ಸೈನಿಕರ ಉದ್ಧಟತನ ಮುಂದುವರೆದಿದ್ದು, ಅಪ್ರಚೋದಿತ ದಾಳಿಯಲ್ಲಿ ಇಂದು ಓರ್ವ ಯುವಕ ಸಾವನ್ನಪ್ಪಿದ್ದಾನೆ ಎಂದು ಸೇನಾ ಮೂಲಗಳು ತಿಳಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಇಂಡೋ-ಪಾಕ್ ಗಡಿಯಲ್ಲಿ ಪಾಕಿಸ್ತಾನಿ ಸೈನಿಕರ ಉದ್ಧಟತನ ಮುಂದುವರೆದಿದ್ದು, ಅಪ್ರಚೋದಿತ ದಾಳಿಯಲ್ಲಿ ಇಂದು ಓರ್ವ ಯುವಕ ಸಾವನ್ನಪ್ಪಿದ್ದಾನೆ ಎಂದು ಸೇನಾ ಮೂಲಗಳು ತಿಳಿಸಿವೆ.

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಈ ಘಟನೆ ನಡೆದಿದ್ದು, ಪಾಕಿಸ್ತಾನ ಸೇನೆಯ ಮಾರ್ಟರ್ ಶೆಲ್ಲಿಂಗ್ ದಾಳಿ ಪರಿಣಾಮ ಗಡಿ ಗ್ರಾಮದ ಓರ್ವ ಯುವಕ ಸಾವನ್ನಪ್ಪಿದ್ದಾನೆ. ಅಂತೆಯೇ ಇಂದು ಕದನ ವಿರಾಮ ಉಲ್ಲಂಘನೆಯಲ್ಲಿ ಓರ್ವ  ಸ್ಥಳೀಯ ನಾಗರಿಕ ಗಾಯಗೊಂಡಿದ್ದಾನೆ. ಸಂಜೆ ಸುಮಾರು 7 ಗಂಟೆಗೆ ಪಾಕಿಸ್ತಾನ ಸೇನೆ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಮಾಡಿ ಭಾರತೀಯ ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು ಗುಂಡಿನ ಸುರಿಮಳೆ ಗರೆದಿದೆ. ಅಲ್ಲದೆ ಶೆಲ್ಲಿಂಗ್ ದಾಳಿ ನಡೆಸಿದೆ. ಪರಿಣಾಮ ಮಂಕೋಟೆ  ಸೆಕ್ಟರ್ ನಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದಾನೆ.

ಭಾರತ ತಿರುಗೇಟು
ಪಾಕಿಸ್ತಾನದ ಈ ಅಪ್ರಚೋದಿತ ದಾಳಿಗೆ ಭಾರತೀಯ ಸೈನಿಕರೂ ಕೂಡ ತಿರುಗೇಟು ನೀಡುತ್ತಿದ್ದು, ಗುಂಡಿನ ಸುರಿಮಳೆ ಗರೆಯುತ್ತಿದ್ದಾರೆ. ಈ ವೇಳೆ ಸ್ಥಳೀಯ ಯುವಕನಿಗೆ ಗಾಯವಾಗಿದ್ದು, ಕೂಡಲೇ ಆತನನ್ನು ಸ್ಥಳೀಯ ಸೇನಾಸ್ಪತ್ರೆಗೆ ದಾಖಲು ಮಾಡಲಾಗಿದೆ. ೇಕಳೆದ ಒಂದು ತಿಂಗಳ  ಅವಧಿಯಲ್ಲಿ ಪಾಕ್ ಸೇನೆ 24 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಭಾರತದ ಖಸ್ಬಾ, ಕಿರ್ನಿ, ಶಾಪುರ್ ಮತ್ತು ಮಂಕೋಟ್ ಸೆಕ್ಟರ್ ಗಳಲ್ಲಿ ತೀವ್ರ ಗುಂಡಿನ ಸುರಿಮಳೆಯಾಗುತ್ತಿದೆ. ಪೂಂಚ್ ಮಾತ್ರವಲ್ಲದೇ ಇದೀಗ ರಜೌರಿ ಮತ್ತು ಕುಪ್ವಾ ಗಡಿಯಲ್ಲಿ ಹೈ ಅಲರ್ಟ್ ಘೋಷಣೆ  ಮಾಡಲಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com