ಪಂಜಾಬ್ ಕಳ್ಳಭಟ್ಟಿ ದುರಂತ 86 ಜನರ ಸಾವು; ಅಬಕಾರಿ ಇಲಾಖೆಯ 7, 6 ಪೊಲೀಸರು ಅಮಾನತು
ಪಂಜಾಬ್ ನ ಹೂಚ್ ನಲ್ಲಿ ವಿಷಕಾರಿ ಮದ್ಯ (ಕಳ್ಳಭಟ್ಟಿ) ಸೇವನೆ ಮಾಡಿ ಸಾವನ್ನಪ್ಪಿದವರ ಸಂಖ್ಯೆ 86 ಕ್ಕೆ ಏರಿಕೆಯಾಗಿದ್ದು, ಅಬಕಾರಿ ಇಲಾಖೆಯ 7 ಅಧಿಕಾರಿಗಳನ್ನು ಹಾಗೂ ಪೊಲೀಸ್ ಇಲಾಖೆಯ 6 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
Published: 01st August 2020 11:45 PM | Last Updated: 01st August 2020 11:45 PM | A+A A-

ಪಂಜಾಬ್ ಕಳ್ಳಭಟ್ಟಿ ದುರಂತ 86 ಜನರ ಸಾವು; ಅಬಕಾರಿ ಇಲಾಖೆಯ 7, 6 ಪೊಲೀಸರು ಅಮಾನತು
ಹೂಚ್: ಪಂಜಾಬ್ ನ ಹೂಚ್ ನಲ್ಲಿ ವಿಷಕಾರಿ ಮದ್ಯ (ಕಳ್ಳಭಟ್ಟಿ) ಸೇವನೆ ಮಾಡಿ ಸಾವನ್ನಪ್ಪಿದವರ ಸಂಖ್ಯೆ 86 ಕ್ಕೆ ಏರಿಕೆಯಾಗಿದ್ದು, ಅಬಕಾರಿ ಇಲಾಖೆಯ 7 ಅಧಿಕಾರಿಗಳನ್ನು ಹಾಗೂ ಪೊಲೀಸ್ ಇಲಾಖೆಯ 6 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಶನಿವಾರದಂದು 48 ಜನರು ಸಾವನ್ನಪ್ಪಿದ್ದು ಒಟ್ಟಾರೆ ಸಂಖ್ಯೆ 86 ಕ್ಕೆ ಏರಿಕೆಯಾಗಿದೆ.
ಈ ದುರ್ಘಟನೆಗೆ ಸಂಬಂಧಿಸಿದಂತೆ ಈವರೆಗೂ 25 ಜನರನ್ನು ಬಂಧಿಸಲಾಗಿದ್ದು ವಿಪಕ್ಷಗಳು ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸುತ್ತಿವೆ. ವಿಷಕಾರಿ ಮದ್ಯ ಅಥವಾ ಕಳ್ಳಭಟ್ಟಿ ಸೇವನೆ ಮಾಡಿ ಆಸ್ಪತ್ರೆಗೆ ದಾಖಲಾಗಿರುವವರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ಚಂಡೀಗಢದ ಅಧಿಕಾರಿಗಳು ಹೇಳಿದ್ದಾರೆ.
ಕಳ್ಳಭಟ್ಟಿ ತಯಾರಿಸುವವರನ್ನು ಹಿಡಿಯುವುದಕ್ಕಾಗಿ ಪೊಲೀಸರು ಹಲವೆಡೆ ದಾಳಿ ನಡೆಸಿದ್ದರು. 3 ಜಿಲ್ಲೆಗಳಲ್ಲಿ ನಡೆದ 100 ಕ್ಕೂ ಹೆಚ್ಚು ರೈಡ್ ನಲ್ಲಿ 17 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪದಡಿ ಇಬ್ಬರು ಪೊಲೀಸ್ ಡೆಪ್ಯುಟಿ ಸೂಪರಿಂಟೆಂಡೆಂಟ್ ಗಳನ್ನು ಹಾಗೂ ನಾಲ್ವರು ಸ್ಟೇಷನ್ ಹೌಸ್ ಆಫೀಸರ್ ಗಳನ್ನು ಅಮಾನತುಗೊಳಿಸಲಾಗಿದೆ.