ಪ್ರೀತಿ ಕುರುಡಲ್ಲ: ಚಿತ್ರವೊಂದರ ಹಿರೋ ಆಗಿರುವ ಅಂಧ ಶಿಕ್ಷಕನನ್ನು ಪ್ರೀತಿಸಿ ಮದುವೆಯಾದ ಯುವತಿ!

ಅಂಧ ಶಿಕ್ಷಕರೊಬ್ಬರಿಗೆ ಸಿನಿಮಾದಲ್ಲಿ ಪಾತ್ರ ಸಿಕ್ಕಿದ್ದು, ಡಿಜಿಟಲ್ ಯುಗದಲ್ಲಿ ಚಿತ್ರದ  ಪ್ರೋಮೋ ಉತ್ತರ ಭಾರತದವರೆಗೂ ಸಾಗಿದೆ. ಇದನ್ನು ನೋಡಿದ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಶಿಕ್ಷಕಿಯಾಗಿರುವ ಮಲಯಾಳಂ ಯುವತಿಯೊಬ್ಬಳು ಹಿರೋನನ್ನು ಪ್ರೀತಿಸುತ್ತಾಳೆ. 
ಕ್ಲಿಂಟ್ ಮ್ಯಾಥ್ಯೂ,  ಜೋಸ್ಸಿ ಆಂಟನಿ
ಕ್ಲಿಂಟ್ ಮ್ಯಾಥ್ಯೂ,  ಜೋಸ್ಸಿ ಆಂಟನಿ

ಪಾಲಕ್ಕಡ್:  ಅಂಧ ಶಿಕ್ಷಕರೊಬ್ಬರಿಗೆ ಸಿನಿಮಾದಲ್ಲಿ ಪಾತ್ರ ಸಿಕ್ಕಿದ್ದು, ಡಿಜಿಟಲ್ ಯುಗದಲ್ಲಿ ಚಿತ್ರದ  ಪ್ರೋಮೋ ಉತ್ತರ ಭಾರತದವರೆಗೂ ಸಾಗಿದೆ. ಇದನ್ನು ನೋಡಿದ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಶಿಕ್ಷಕಿಯಾಗಿರುವ ಮಲಯಾಳಂ ಯುವತಿಯೊಬ್ಬಳು ಹಿರೋನನ್ನು ಪ್ರೀತಿಸುತ್ತಾಳೆ. 

ಕೊನೆಗೆ ತಮ್ಮ ಕುಟುಂಬದವರನ್ನು ಒಪ್ಪಿಸಿ ಕೋವಿಡ್ ನಿರ್ಬಂಧದಿಂದಾಗಿ ಕೆಲ ಮಂದಿಯ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಚಿತ್ರ ಕಥೆಯಲ್ಲ, ನಿಜ ಜೀವನದ ಕಥೆಯಾಗಿದೆ.

ತ್ರಿಶೂರ್ ನ ಶ್ರೀಕೃಷ್ಣಪುರಂನ ಸೆಂಟ್ ಜೋಸೆಪ್ ಚರ್ಚ್ ನಲ್ಲಿ  ಜುಲೈ 11 ರಂದು ಮಲಯಾಳಂ ಚಿತ್ರದ ತಹಿರಾದಲ್ಲಿ ಹಿರೋ ಪಾತ್ರ ಸಿಕ್ಕಿದ ನಂತರ ದೃಷ್ಟಿ ಹೀನ ಯುವಕ ಕ್ಲಿಂಟ್ ಮ್ಯಾಥ್ಯೂ, ಜೋಸ್ಸಿ ಆಂಟನಿಯನ್ನು ವರಿಸಿದ್ದಾರೆ.

ಮಲ್ಲಂಪುರಂ ಜಿಲ್ಲೆಯ ನೆನ್ ಮೆನಿ ಹಳ್ಳಿಯಲ್ಲಿ  ಕೃಷಿಕರ ಕುಟುಂಬವೊಂದರಲ್ಲಿ ಜನಿಸಿದ ಕ್ಲಿಂಟ್ ಮ್ಯಾಥ್ಯೂ,ಶ್ರೀಕೃಷ್ಣಪುರಂ ಬಳಿಯ ಕೊಟ್ಟಪುರಂನ ಹೆಲೆನ್ ಕೆಲರ್ ಅಂಧ ಶಾಲೆಯಲ್ಲಿ  2014ರಲ್ಲಿ ಸಹಾಯಕ ಶಿಕ್ಷಕ ಹುದ್ದೆ ದೊರೆತ ನಂತರ ಸಾಮಾನ್ಯ ಹುಡುಗಿಯನ್ನು ಮದುವೆಯಾಗಲು ಬಯಸಿದ್ದಾರೆ. ಆದಾಗ್ಯೂ, ದೃಷಿಹೀನ ಶಿಕ್ಷಕನನ್ನು ಮದುವೆಯಾಗಲು ಯಾವ ಹುಡುಗಿಯೂ ಇಷ್ಟಪಡಲಿಲ್ಲ ಎಂದು ಕ್ಲಿಂಟ್ ಮ್ಯಾಥ್ಯೂ  ಹೇಳಿದ್ದಾರೆ.

ತಹಿರಾ ಚಿತ್ರದ ಪ್ರೋಮೋ ವೀಕ್ಷಿಸಿದ ನಂತರ ಯಾವುದೇ ಸವಾಲನ್ನು ಸ್ವಿಕರಿಸಲು ಸಿದ್ದವಿರಬೇಕು ಅನ್ನಿಸಿತು. ತನ್ನ ಸಹೋದ್ಯೋಗಿಗಳು ಕೂಡಾ ನನ್ನನ್ನು ಬೆಂಬಲಿಸಿದರು. ಜೀವನಕ್ಕೆ ಒಂದು ಅರ್ಥವಿದೆ. ಇತರರಿಗೆ ಸಹಾಯ ಮಾಡಿದಾಗ ಇದು ಸಾಧ್ಯವಾಗಲಿದೆ ಎಂದು ಹೇಳುವ ಜೋಸ್ಸಿ ಆಂಟನಿ, ತನ್ನ ಗಂಡನೊಂದಿಗೆ ಪ್ರತಿಯೊಂದು  ಕ್ಷಣವನ್ನು ಎಂಜಾಯ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. 

ತಹಿರಾ ಚಿತ್ರದಲ್ಲಿನ ದೃಷ್ಟಿಹೀನ ಪಾತ್ರಕ್ಕಾಗಿ ಹುಡುಕುತ್ತಿದ್ದಾಗ ಕ್ಲಿಂಟ್ ಅವರನ್ನು ಕೇರಳ ಫೆಡರೇಷನ್ ಆಫ್ ಬ್ಲೈಂಡ್ ಸಲಹೆ ನೀಡಿತು. ತಮ್ಮ ಸಿನಿಮಾ ಕ್ಲಿಂಟ್ ಜೀವನವನ್ನು ಬದಲಾಯಿಸಿದೆ. ತಹಿರಾ ಕೂಡಾ 42ನೇ ವಯಸ್ಸಿನವರೆಗೂ ಮದುವೆಯಾಗದೆ ಇರುತ್ತಾನೆ ಎಂದು ಚಿತ್ರ ನಿರ್ದೇಶಕ ಸಿದ್ದಿಕ್ ಪರವೂರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com