ಬಿಎಸ್ಎಫ್ ಆರಂಭಿಕ ದಿನಗಳ ಚಿತ್ರ
ಬಿಎಸ್ಎಫ್ ಆರಂಭಿಕ ದಿನಗಳ ಚಿತ್ರ

ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಸಾಮಾಜಿಕ ಜಾಲತಾಣದಲ್ಲಿ ಬಿಎಸ್ ಎಫ್ 'ರೆಟ್ರೋ ಸ್ಟೈಲ್' ಅನಾವರಣ!

ಕೊರೋನಾ ಸಾಂಕ್ರಾಮಿಕ ನಡುವೆಯೇ ಭಾರತ ದೇಶ 74ನೇ ಸ್ವಾತಂತ್ರ್ಯ ದಿನೋತ್ಸವದ ಸಿದ್ಧತೆಯಲ್ಲಿ ತೊಡಗಿದ್ದು, ಈ ವಿಶೇಷ ದಿನದಂದು ಭಾರತೀಯ ಸೇನೆಯ ಪ್ರಮುಖ ವಿಭಾಗವಾಗಿರುವ ಗಡಿ ಭದ್ರತಾ ಪಡೆ (ಬಿಎಸ್ಎಫ್) ತನ್ನ ರೆಟ್ರೋ ಲುಕ್ ಅನಾವರಣಗೊಳಿಸುವುದಾಗಿ ಹೇಳಿದೆ.

ನವದೆಹಲಿ: ಕೊರೋನಾ ಸಾಂಕ್ರಾಮಿಕ ನಡುವೆಯೇ ಭಾರತ ದೇಶ 74ನೇ ಸ್ವಾತಂತ್ರ್ಯ ದಿನೋತ್ಸವದ ಸಿದ್ಧತೆಯಲ್ಲಿ ತೊಡಗಿದ್ದು, ಈ ವಿಶೇಷ ದಿನದಂದು ಭಾರತೀಯ ಸೇನೆಯ ಪ್ರಮುಖ ವಿಭಾಗವಾಗಿರುವ ಗಡಿ ಭದ್ರತಾ ಪಡೆ (ಬಿಎಸ್ಎಫ್) ತನ್ನ ರೆಟ್ರೋ ಲುಕ್ ಅನಾವರಣಗೊಳಿಸುವುದಾಗಿ ಹೇಳಿದೆ.

ಸ್ವಾತಂತ್ರ್ಯದ ಬಳಿಕ ಭಾರತ ಮತ್ತು ಪಾಕಿಸ್ತಾನ ಗಡಿಗಳಲ್ಲಿ ಭಾರತೀಯ ಸೈನಿಕರು ಇದ್ದ ಕ್ಷಣಗಳನ್ನು ಸೆರೆ ಹಿಡಿಯಲಾಗಿದ್ದು, ಈ ಫೋಟೋಗಳನ್ನು ಬಿಎಸ್ಎಫ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಹೇಳಿದೆ. ಈ ಸಂಬಂಧ ಈಗಾಗಲೇ ಬಿಎಸ್ ಎಫ್ ನ ಆರಂಭಿಕ ದಿನಗಳ ಫೋಟೋವೊಂದನ್ನು ಬಿಎಸ್ಎಫ್ ಟ್ವೀಟ್ ಮಾಡಿದ್ದು, ಕಪ್ಪು ಬಿಳುಪಿನ ಫೋಟೋದಲ್ಲಿ ಸೈನಿಕರು ಸಮವಸ್ತ್ರ ಧರಿಸಿ ಗಡಿ ಕಾಯುತ್ತಿರುವ ಚಿತ್ರ ಇದೀಗ ವೈರಲ್ ಆಗಿದೆ.

ಅಲ್ಲದೆ ಆಗಸ್ಟ್ 15ರ 74ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಭಾರತದ ಮೊದಲ ಸಾಲಿನ ರಕ್ಷಣಾ ಪಡೆಯಾಗಿರುವ ಬಿಎಸ್‌ಎಫ್‌ನ ಐತಿಹಾಸಿಕ ಭವ್ಯತೆಯನ್ನು ತೋರಿಸುವ ಉದ್ದೇಶದಿಂದ, ಬಿಎಸ್ ಎಫ್ ಆರಂಭಿಕ ಕಾಲದ ಚಿತ್ರಗಳನ್ನು ಹೊರತರಲಾಗುತ್ತಿದೆ ಎಂದು ಬಿಎಸ್ ಎಫ್ ಟ್ವೀಟ್ ಮಾಡಿದೆ.

1965ರ ಬಳಿಕ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಬಿಎಸ್ಎಫ್ ಪಾತ್ರ ಗಣನೀಯವಾಗಿದ್ದು, ದೇಶದ ಸಾರ್ವಭೌಮತ್ವವನ್ನು ಎತ್ತಿಹಿಡಿಯುವುದರಲ್ಲಿ ಬಿಎಸ್ಎಫ್ ಪಾತ್ರ ನಿರ್ಣಾಯಕವಾಗಿದೆ.  1971ರ ಯುದ್ಧ, ಜಮ್ಮು ಮತ್ತು ಕಾಶ್ಮೀರ, ಕಾರ್ಗಿಲ್ ಯುದ್ಧದಲ್ಲಿನ ಪ್ರತಿ-ಬಂಡಾಯದ ಸನ್ನಿವೇಶದಿಂದ ನಮ್ಮ ದೇಶದ ಗಡಿಗಳನ್ನು ರಕ್ಷಿಸುತ್ತಿದ್ದೇವೆ ಎಂದು ಬಿಎಸ್ಎಫ್ ಹೇಳಿದೆ.

ಇದೇ ಸಂದರ್ಭದಲ್ಲಿ ಬಿಎಸ್ಎಫ್ ಸಾರ್ವಜನಿಕರೊಂದಿಗೆ ಚರ್ಚೆ ಕೂಡ ನಡೆಸಲಿದ್ದು ಬಿಎಸ್ಎಫ್ ಕುರಿತಂತೆ ಜನಸಾಮಾನ್ಯರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಬಹುದು.

Related Stories

No stories found.

Advertisement

X
Kannada Prabha
www.kannadaprabha.com