ಮಗನೊಂದಿಗೆ 10ನೇ ತರಗತಿ ಪರೀಕ್ಷೆ ಬರೆದ ತಾಯಿ, ಗಳಿಸಿದ ಅಂಕಗಳೆಷ್ಟು ಗೊತ್ತಾ?

ಮಗನೊಂದಿಗೆ ತಾಯಿಯೂ 10ನೇ ತರಗತಿ ಪರೀಕ್ಷೆ ಬರೆದು ಉತ್ತಮ ಅಂಕಗಳೊಂದಿಗೆ ಇಬ್ಬರೂ ಪಾಸ್ ಆಗಿರುವ ಅಪರೂಪದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

Published: 01st August 2020 03:37 PM  |   Last Updated: 01st August 2020 03:37 PM   |  A+A-


SSC exams-Mother-son

ಸಂಗ್ರಹ ಚಿತ್ರ

Posted By : Srinivasamurthy VN
Source : The New Indian Express

ಪುಣೆ: ಮಗನೊಂದಿಗೆ ತಾಯಿಯೂ 10ನೇ ತರಗತಿ ಪರೀಕ್ಷೆ ಬರೆದು ಉತ್ತಮ ಅಂಕಗಳೊಂದಿಗೆ ಇಬ್ಬರೂ ಪಾಸ್ ಆಗಿರುವ ಅಪರೂಪದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಹೌದು.. ಸಾಮಾನ್ಯವಾಗಿ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲಿ ಎಂದು ಪ್ರಾರ್ಥಿಸುವ ಮತ್ತು ಅದಕ್ಕಾಗಿ ಹಗಲಿರುಳೂ ಶ್ರಮಿಸುವ ಪೋಷಕರನ್ನು ನಾವು ನೋಡಿದ್ದೇವೆ. ಆದರೆ ಮಹಾರಾಷ್ಟ್ರದ ಪುಣೆಯಲ್ಲಿ ಎಸ್ಎಸ್ ಸಿ ಪರೀಕ್ಷೆ ಬರೆಯಬೇಕಿದ್ದ ಮಗನೊಂದಿಗೆ ತಾಯಿಯೂ ಕೂಡ ಪರೀಕ್ಷೆ ಬರೆದಿದ್ದು, ಅಷ್ಟು ಮಾತ್ರವಲ್ಲದೇ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಪುಣೆಯ ಬಾರಾಮತಿ ನಿವಾಸಿಗಳಾದ ಬೇಬಿ ಗುರವ್ ಎಂಬ ಗೃಹಿಣಿ ತನ್ನ ಮಗನೊಂದಿಗೆ ಎಸ್ಎಸ್ ಸಿ ಪರೀಕ್ಷೆ ಬರೆದಿದದ್ದರು. 

ಇದೀಗ ಆ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, 36 ವರ್ಷದ ಗುರವ್ ಅವರು ಶೇ.64.40ರಷ್ಚು  ಅಂಕಗಳನ್ನು ಗಳಿಸಿದ್ದೆ, ಪುತ್ರ ಸದಾನಂದ್ ಶೇ. 73.20ರಷ್ಚು ಅಂಕಗಳನ್ನು ಪಡೆದು ತಾಯಿಯನ್ನು ಮೀರಿಸಿದ್ದಾನೆ. 

ಈ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ತಾಯಿ ಗುರವ್ ಅವರು, ತುಂಬಾ ಚಿಕ್ಕ ವಯಸ್ಸಿನಲ್ಲೇ ನನಗೆ ಮದುವೆ ಮಾಡಿಬಿಟ್ಟರು. ಹೀಗಾಗಿ ನನ್ನ ವಿದ್ಯಾಭ್ಯಾಸ ಪೂರ್ಣಗೊಳಿಸಲಾಗಲಿಲ್ಲ. ಆದರೆ ನನ್ನ ಪತಿ ನನ್ನನ್ನು ಹುರಿದುಂಬಿಸಿ ಸ್ಪೂರ್ತಿ ನೀಡಿದರು. ಹೀಗಾಗಿ ನಾನು ನನ್ನ ಪುತ್ರನೊಂದಿಗೇ 10ನೇ ತರಗತಿ ಪರೀಕ್ಷೆ ಬರೆದೆ. ಪರೀಕ್ಷಾ ಸಂದರ್ಭದಲ್ಲಿ ನನ್ನ ಪುತ್ರ ಹಾಗೂ ನನ್ನ ಪತಿ ಸಾಕಷ್ಟು ನೆರವು ನೀಡಿದರು. ಹೀಗಾಗಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದೆನು. ಫಲಿತಾಂಶದ ಬಳಿಕ ನಿಜಕ್ಕೂ ನಾನು ಸಂತೋಷಗೊಂಡಿದ್ದೇನೆ ಎಂದು ಹೇಳಿದ್ದಾರೆ.

ಬೇಬಿ ಗುರವ್ ಅವರು ಇಲ್ಲಿನ ಬಟ್ಟೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಬೇಬಿ ಗುರವ್ ಅವರು ನಿತ್ಯ ಕೆಲಸದ ಸ್ಥಳಕ್ಕೇ ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಅಲ್ಲಿಯೇ ಕೆಲಸ ಮಾಡುತ್ತಲೇ ಓದುತ್ತಿದ್ದರು. ಇದು ಅವರಲ್ಲಿ ಸಾಕಷ್ಟು ಧೈರ್ಯ ತುಂಬಿದೆ. ಮುಂದಿನ 12ನೇ ತರಗತಿ ಮೇಲೆ ಬೇಬಿ ಗುರವ್ ಅವರು ಕಣ್ಣಿಟ್ಟಿದ್ದಾರೆ. ಅದೂ ಕೂಡ ಸಾಕಾರವಾಗಲಿ.

Stay up to date on all the latest ರಾಷ್ಟ್ರೀಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp