ರಕ್ಷಾ ಬಂಧನ: ಪ್ರಧಾನಿ ಮೋದಿಗೆ ರಾಖಿ ಕಳುಹಿಸಿದ ಪಾಕಿಸ್ತಾನ ಮೂಲದ ಸೋದರಿ ಖಮರ್ ಮೊಹ್ಸಿನ್ ಶೇಖ್

ನಾಡಿದ್ದು ಸೋಮವಾರ ಆಗಸ್ಟ್ 3ರಂದು ರಕ್ಷಾ ಬಂಧನ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅನೇಕ ಮಂದಿ ಸೋದರಿಯರು ರಾಖಿ ಕಟ್ಟುತ್ತಾರೆ, ಆದರೆ ಇವರು ಪಾಕಿಸ್ತಾನ ಮೂಲದ ಮುಸ್ಲಿಂ ಮಹಿಳೆ ಖಮರ್ ಮೊಹ್ಸಿನ್ ಶೇಖ್.
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ

ಅಹಮದಾಬಾದ್: ನಾಡಿದ್ದು ಸೋಮವಾರ ಆಗಸ್ಟ್ 3ರಂದು ರಕ್ಷಾ ಬಂಧನ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅನೇಕ ಮಂದಿ ಸೋದರಿಯರು ರಾಖಿ ಕಟ್ಟುತ್ತಾರೆ, ಆದರೆ ಇವರು ಪಾಕಿಸ್ತಾನ ಮೂಲದ ಮುಸ್ಲಿಂ ಮಹಿಳೆ ಖಮರ್ ಮೊಹ್ಸಿನ್ ಶೇಖ್. ಕೋವಿಡ್-19 ಸಮಯದಲ್ಲಿ ದೆಹಲಿಗೆ ಖುದ್ದಾಗಿ ಬಂದು ರಾಖಿ ಕಟ್ಟಲು ಸಾಧ್ಯವಿಲ್ಲ ಎಂದು ಈ ಮಹಿಳೆ ಪೋಸ್ಟ್ ಮೂಲಕ ರಾಖಿಯನ್ನು ಮೋದಿಯವರಿಗೆ ಕಳುಹಿಸಿದ್ದಾರೆ.

ಪಾಕಿಸ್ತಾನ ಮೂಲದವರಾದ ಶೇಖ್ ಮದುವೆಯಾದ ನಂತರ ಗುಜರಾತ್ ರಾಜ್ಯದ ಅಹಮದಾಬಾದ್ ನಲ್ಲಿ ನೆಲೆಸಿದ್ದಾರೆ. ಮೋದಿಯವರ ಜೊತೆ ಅವರು ಈ ಬಾರಿ 25ನೇ ವರ್ಷದ ರಾಖಿ ಹಬ್ಬ ಆಚರಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಶೇಖ್, ಮೋದಿಯವರನ್ನು ನಾನು 30-35 ವರ್ಷಗಳಿಂದ ಬಲ್ಲೆ. ನಾನು ಅವರನ್ನು ಮೊದಲ ಬಾರಿಗೆ ದೆಹಲಿಯಲ್ಲಿ ಭೇಟಿ ಮಾಡಿದ್ದಾಗ ನಾನು ಕರಾಚಿಯಿಂದ ಬಂದವಳು, ಮದುವೆಯಾಗಿ ಇಲ್ಲಿ ಬಂದು ನೆಲೆಸಿದ್ದೇನೆ ಎಂದು ಪರಿಚಯ ಮಾಡಿಕೊಂಡೆ. ಆಗಿನಿಂದ ನನ್ನನ್ನು ಅವರು ಬೆಹೆನ್(ಸೋದರಿ) ಎಂದು ಕರೆಯುತ್ತಾರೆ. ನನಗೆ ಸ್ವಂತ ಸೋದರ ಇಲ್ಲ. ಎರಡು ಮೂರು ವರ್ಷ ಕಳೆದ ನಂತರ ಮತ್ತೆ ಅವರನ್ನು ನಾನು ದೆಹಲಿಯಲ್ಲಿ ರಕ್ಷಾ ಬಂಧನ ಸಮಯದಲ್ಲಿ ಭೇಟಿ ಮಾಡಿದೆ, ಆಗ ಅವರ ಕೈಗೆ ರಾಖಿ ಕಟ್ಟಿದೆ ಎನ್ನುತ್ತಾರೆ.

ಒಂದು ಬಾರಿ ರಕ್ಷಾ ಬಂಧನ ಸಮಯದಲ್ಲಿ ನೀವು ಗುಜರಾತ್ ಗೆ ಬರಬೇಕು, ನಮಗೆ ಮುಖ್ಯಮಂತ್ರಿಯಾಗಬೇಕು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದ್ದೆ. ಆಗ ಅವರು ನಕ್ಕರು, ನಂತರ ಗುಜರಾತ್ ಮುಖ್ಯಮಂತ್ರಿ ಕೂಡ ಆದರು. ಮತ್ತೊಂದು ರಕ್ಷಾಬಂಧನ ದಿನ ನನ್ನ ಪ್ರಾರ್ಥನೆಯನ್ನು ದೇವರು ಕೇಳುತ್ತಾರೆ ಎಂದೆ, ನಂತರ ಅವರು ಪ್ರಧಾನಿ ಕೂಡ ಆದರು.

ಈ ಬಾರಿ ದೆಹಲಿಗೆ ಕೊರೋನಾದಿಂದ ಹೋಗಲು ಸಾಧ್ಯವಾಗದೆ ಪೋಸ್ಟ್ ನಲ್ಲಿ ಕಳುಹಿಸಿದ್ದೇನೆ, ರಾಖಿ ಮತ್ತು ನಾನು ಕಳುಹಿಸಿರುವ ಪುಸ್ತಕ ಪ್ರಧಾನಿಗೆ ತಲುಪಿದೆ ಎಂದು ತಿಳಿದುಬಂದಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com