ದೇಶಾದ್ಯಂತ ಒಂದೇ ದಿನ 57,117 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆ, ಸೋಂಕಿತರ ಸಂಖ್ಯೆ 16.9 ಲಕ್ಷ

ಹೊಸ ಕೊರೋನಾ ಕೇಸುಗಳ ಪ್ರಮಾಣದಲ್ಲಿ ಶನಿವಾರ ಮತ್ತೊಂದು ದಾಖಲೆ ನಿರ್ಮಾಣವಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 57,117 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಇದು ಈವರೆಗಿನ ದೈನಂದಿನ ದಾಖಲೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಹೊಸ ಕೊರೋನಾ ಕೇಸುಗಳ ಪ್ರಮಾಣದಲ್ಲಿ ಶನಿವಾರ ಮತ್ತೊಂದು ದಾಖಲೆ ನಿರ್ಮಾಣವಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 57,117 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಇದು ಈವರೆಗಿನ ದೈನಂದಿನ ದಾಖಲೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 16,95,988ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 

ಮತ್ತೊಂದೆಡೆ ಒಂದೇ ದಿನ 764 ಮಂದಿ ಸಾವನ್ನಪ್ಪಿದ್ದು, ಈ ವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 36,511ನ್ನು ಮುಟ್ಟಿದೆ. ಇದೇ ವೇಳೆ 16,95,988 ಮಂದಿ ಸೋಂಕಿತರ ಪೈಕಿ 10,94,374 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ದೇಶದಲ್ಲಿನ್ನೂ 5,65,103 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. 

ಇನ್ನು ಆಂಧ್ರಪ್ರದೇಶದಲ್ಲಿ ಹೊಸದಾಗಿ 10,376 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದೆ. ಇದರೊಂದಿಗೆ ಆಂಧ್ರಪ್ರದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,40,933 ಆಗಿದೆ. ಇನ್ನು ಮಹಾರಾಷ್ಟ್ರದಲ್ಲಿ 10,320, ತಮಿಳುನಾಡು 5881, ಕರ್ನಾಟಕ 5483, ಉತ್ತರಪ್ರದೇಶ 4442, ಬಿಹಾರ 2986, ಒಡಿಶಾ 1499, ಕೇರಳ 1310 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 

ಇನ್ನು ಮಹಾರಾಷ್ಟ್ರದಲ್ಲಿ ಶುಕ್ರವಾರ ಅತೀಹೆಚ್ಚು 265 ಮಂದಿ ಕೊರೋನಾಕ್ಕೆ ಬಲಿಯಾಗಿದ್ದರೆ, ತಮಿಳುನಾಡಿನಲ್ಲಿ 94,ಕರ್ನಾಟಕ 84, ಆಂಧ್ರಪ್ರದೇಶ 68, ಉತ್ತರಪ್ರದೇಶದಲ್ಲಿ 43 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com