ಒಂದೇ ಒಂದು ಬಾರಿ ಸುಶಾಂತ್ ಪ್ರಕರಣದತ್ತ ಗಮನ ಹರಿಸಿ: ನಟನ ಸಹೋದರಿಯಿಂದ ಪ್ರಧಾನಿಗೆ ಬಹಿರಂಗ ಪತ್ರ

ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿನ ಗೊಂದಲ ಮುಂದುವರೆದಿರುವಂತೆಯೇ ಸುಶಾಂತ್ ಸಾವಿನ ಪ್ರಕರಣ ಕುರಿತು ಒಂದು ಒಂದು ಬಾರಿ ಕೂಲಂಕುಶ ಪರಿಶೀಲನೆ ನಡೆಸುವಂತೆ ಸುಶಾಂತ್ ಸಿಂಗ್ ಸಹೋದರಿ ಶ್ವೇತಾ ಸಿಂಗ್ ಹೇಳಿದ್ದಾರೆ.
ಸುಶಾಂತ್ ಸಿಂಗ್
ಸುಶಾಂತ್ ಸಿಂಗ್

ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿನ ಗೊಂದಲ ಮುಂದುವರೆದಿರುವಂತೆಯೇ ಸುಶಾಂತ್ ಸಾವಿನ ಪ್ರಕರಣ ಕುರಿತು ಒಂದು ಒಂದು ಬಾರಿ ಕೂಲಂಕುಶ ಪರಿಶೀಲನೆ ನಡೆಸುವಂತೆ ಸುಶಾಂತ್ ಸಿಂಗ್ ಸಹೋದರಿ ಶ್ವೇತಾ ಸಿಂಗ್ ಹೇಳಿದ್ದಾರೆ.

ಈ ಬಗ್ಗೆ ಇನ್ ಸ್ಟಾಗ್ರಾಮ್ ನಲ್ಲಿ ಪತ್ರವನ್ನು ಪೋಸ್ಟ್ ಮಾಡಿರುವ ಶ್ವೇತಾ ಸಿಂಗ್, 'ಡಿಯರ್‌ ಸರ್‌... ನೀವು ಸತ್ಯದ ಪರವಾಗಿ ನಿಲ್ಲುತ್ತೀರಿ ಎಂದು ನನ್ನ ಮನಸ್ಸು ಹೇಳುತ್ತಿದೆ. ನಾವು ತುಂಬ ಸರಳ ಕುಟುಂಬದವರು. ನನ್ನ ತಮ್ಮ ಬಾಲಿವುಡ್‌ಗೆ ಬಂದಾಗ ಅವನಿಗೆ ಯಾವುದೇ ಗಾಡ್‌ಫಾದರ್‌ ಇರಲಿಲ್ಲ. ಈಗಲೂ ಇಲ್ಲ. ನೀವು ಕೂಡಲೇ ಈ ಪ್ರಕರಣದ ಬಗ್ಗೆ ಗಮನ ಹರಿಸಬೇಕು ಎಂಬುದು ನನ್ನ ಮನವಿ. ಯಾವುದೇ ಸಾಕ್ಷಿ ನಾಶ ಆಗಲು ಅವಕಾಶ ಕೊಡಬೇಡಿ. ಸತ್ಯಕ್ಕೆ ಜಯವಾಗಲಿ' ಎಂದು ಶ್ವೇತಾ ಪತ್ರ ಬರೆದಿದ್ದಾರೆ. 

ಇಡೀ ದೇಶದ ಗಮನ ಸೆಳೆದಿದೆ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣ. ಜೂ. 14ರಂದು ಮುಂಬೈನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿದ್ದರು ಸುಶಾಂತ್‌.  ಒಂದೆಡೆ ಮುಂಬೈ ಪೊಲೀಸರು, ಮತ್ತೊಂದೆಡೆ ಪಾಟ್ನಾ ಪೊಲೀಸರು ಈ ಕೇಸ್‌ ಜಾಲಾಡುತ್ತಿದ್ದಾರೆ. ಪ್ರತಿ ಹಂತದ ತನಿಖೆಯಲ್ಲಿಯೂ ಹೊಸ ಹೊಸ ವಿಷಯಗಳು ಬಹಿರಂಗ ಆಗುತ್ತಿವೆ. ಪ್ರಭಾವಿ ವ್ಯಕ್ತಿಗಳ ಹಸ್ತಕ್ಷೇಪ ಕೂಡ ಆಗುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇತ್ತೀಚೆಗೆ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧವೂ ದೂರು ದಾಖಲಾಯಿತು. ಈಗ ಅವರು ದೇಶದ ಅತಿ ದುಬಾರಿ ಲಾಯರ್‌ಗಳಲ್ಲಿ ಒಬ್ಬರಾದ ಸತೀಶ್‌ ಮಾನೆಶಿಂದೆಯನ್ನು ನೇಮಿಸಿಕೊಂಡಿದ್ದಾರೆ. ಹಾಗಾದರೆ ಅವರಿಗೆ ಯಾರದ್ದೋ ಪ್ರಭಾವಿ ವ್ಯಕ್ತಿಯ ಬೆಂಬಲ ಇದೆ ಎಂಬುದು ಖಚಿತ ಆಗಿದೆ ಎಂದು ಆರೋಪಿಸಲಾಗುತ್ತಿದೆ.

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿರುವ ಸುಶಾಂತ್‌ ಸಿಂಗ್‌ ರಜಪೂತ್‌ ಸಹೋದರಿ ಶ್ವೇತಾ ಸಿಂಗ್‌ ಕೀರ್ತಿ ಈಗ ನೇರವಾಗಿ ಪ್ರಧಾನಿ ಮೋದಿಗೆ ಮನವಿ ಮಾಡಿಕೊಂಡಿದ್ದಾರೆ. ಬಹಿರಂಗವಾಗಿಯೇ ಪತ್ರ ಬರೆದಿರುವ ಅವರು ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com