ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು

'ಕರುಣೆ, ಅನುಕಂಪ': ಜಗತ್ತಿಗೆ ರಾಮಾಯಣದ ಮಹತ್ವ ಸಾರಿದ ವೆಂಕಯ್ಯ ನಾಯ್ಡು

ಪುರಾಣಗ್ರಂಥ ರಾಮಾಯಣ ಕರುಣೆ , ಅನುಕಂಪ, ಸಮಗ್ರತೆ, ಶಾಂತಿಯುತ ಸಹಬಾಳ್ವೆ ಮತ್ತು ಪ್ರಜಾಪ್ರಭುತ್ವಕ್ಕೆ ತಳಹದಿಯಾಗಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.

ನವದೆಹಲಿ: ಪುರಾಣಗ್ರಂಥ ರಾಮಾಯಣ ಕರುಣೆ , ಅನುಕಂಪ, ಸಮಗ್ರತೆ, ಶಾಂತಿಯುತ ಸಹಬಾಳ್ವೆ ಮತ್ತು ಪ್ರಜಾಪ್ರಭುತ್ವಕ್ಕೆ ತಳಹದಿಯಾಗಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಹಿನ್ನೆಲೆಯಲ್ಲಿ ಫೇಸ್‌ಬುಕ್‌ನಲ್ಲಿ ಬರೆದ ಲೇಖನವೊಂದರಲ್ಲಿ ನಾಯ್ಡು, ಶ್ರೀರಾಮನ ಪುರಾತನ ದೇಗುಲದ ನಿರ್ಮಾಣ ಆ.5ರಂದು ಆರಂಭಗೊಳ್ಳಲಿದೆ. ಈ ಅದ್ಭುತ ದೇಗುಲವನ್ನು ಜನರ ಅಭಿಲಾಷೆಗೆ ತಕ್ಕಂತೆ ನಿರ್ಮಿಸಲಾಗುವುದು ಎಂದಿದ್ದಾರೆ

ನಾವೆಲ್ಲರೂ ರಾಮಾಯಣ ಗ್ರಂಥದ ಸಾರ್ವತ್ರಿಕ ಮತ್ತು ಅಜರಾಮರ ಸಂದೇಶಗಳನ್ನು ಅರಿತು ಅವುಗಳ ಮೌಲ್ಯಗಳು ಮತ್ತು ಘನತೆಯಿಂದ ನಮ್ಮ ಜೀವನವನ್ನು ಸಮೃದ್ಧವಾಗಿಸೋಣ ಎಂದು ಅವರು ಕರೆ ನೀಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com