ಚಂದ್ರಯಾನ-2 ಪ್ರಗ್ಯಾನ್ ರೋವರ್ ಬಗ್ಗೆ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದರು ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಿದ್ದ ಷಣ್ಮುಗ!

ಚಂದ್ರಯಾನ-2 ಯೋಜನೆಯಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಪತ್ತೆಗೆ ಸಹಕರಿಸಿದ್ದ ಚೆನ್ನೈ ಮೂಲದ ಮೆಕ್ಯಾನಿಕಲ್ ಇಂಜಿನಿಯರ್ ಷಣ್ಮುಗ ಸುಬ್ರಹ್ಮಣಿಯನ್ ಈಗ ಚಂದ್ರಯಾನ-2 ನ ಪ್ರಗ್ಯಾನ್ ರೋವರ್ ಬಗ್ಗೆ ಮತ್ತೊಂದು ಅಚ್ಚರಿಯ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. 
ಚಂದ್ರಯಾನ-2 ಬಗ್ಗೆ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದರು ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಿದ್ದ ಷಣ್ಮುಗ
ಚಂದ್ರಯಾನ-2 ಬಗ್ಗೆ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದರು ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಿದ್ದ ಷಣ್ಮುಗ

ಚೆನ್ನೈ: ಚಂದ್ರಯಾನ-2 ಯೋಜನೆಯಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಪತ್ತೆಗೆ ಸಹಕರಿಸಿದ್ದ ಚೆನ್ನೈ ಮೂಲದ ಮೆಕ್ಯಾನಿಕಲ್ ಇಂಜಿನಿಯರ್ ಷಣ್ಮುಗ ಸುಬ್ರಹ್ಮಣಿಯನ್ ಈಗ ಚಂದ್ರಯಾನ-2 ನ ಪ್ರಗ್ಯಾನ್ ರೋವರ್ ಬಗ್ಗೆ ಮತ್ತೊಂದು ಅಚ್ಚರಿಯ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. 

ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ನಲ್ಲಿ ಸ್ಮೂತ್ ಲ್ಯಾಂಡಿಂಗ್ ಆಗುವುದಕ್ಕೆ ವಿಫಲಗೊಂಡು ಲ್ಯಾಂಡರ್​ ಪತನಗೊಂಡಿದೆಯಾದರೂ ಪ್ರಗ್ಯಾನ್ ರೋವರ್ ನ್ನೂ ಜೀವಂತವಾಗಿದೆ ಹಾನಿಗೊಳಗಾಗಿಲ್ಲ ಎಂಬ ಸಂತಸ-ಅಚ್ಚರಿಯ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. 

ಲ್ಯಾಂಡರ್​ ಪತನಗೊಂಡ ಸ್ಥಳದಿಂದ ಪ್ರಗ್ಯಾನ್ ರೋವರ್ ಕೆಲವು ಮೀಟರ್ ಗಳಷ್ಟು ದೂರ ಸಾಗಿದೆ. ಆದರೆ ಯೋಜಿತ ರೀತಿಯಲ್ಲಿ ನಡೆಯದೇ ವಿಕ್ರಮ್ ಲ್ಯಾಂಡರ್ smooth landing ನಲ್ಲಿ ವಿಫಲವಾದ ಕಾರಣ ಅದರ ಪೇಲೋಡ್ ಕಳಚಿಕೊಂಡಿದೆ ಎಂದು ಷಣ್ಮುಗ ತಿಳಿಸಿದ್ದಾರೆ. 

ತಾವು ಕಂಡಂತಹ ಅವಶೇಷಗಳು ವಿಕ್ರಮ್ ಲ್ಯಾಂಡರ್ ನ ಲ್ಯಾಂಗ್‌ಮುಯಿರ್ ಪ್ರೋಬ್ ನದ್ದಾಗಿದ್ದು, ನಾಸಾ ಕಂಡಿರುವ ಅವಶೇಷಗಳು ಬಹುಶಃ ಬೇರೆ ಪೇಲೋಡ್-ಮುಖ್ಯವಾಗಿ ಆಂಟೆನಾ, ರೆಟ್ರೋ ಬಾರ್ಕಿಂಗ್ ಇಂಜಿನ್ ಗಳು, ಸೋಲಾರ್ ಪ್ಯಾನಲ್ ಗಳದ್ದಾಗಿರಬೇಕು ಎಂದು ಷಣ್ಮುಗ ಅಭಿಪ್ರಾಯಪಟ್ಟಿದ್ದಾರೆ. 

ಚಂದ್ರನ ದಕ್ಷಿಣ ಧ್ರುವ ಬೆಳಕನ್ನು ಚೆನ್ನಾಗಿ ಹೊಂದಿಲ್ಲ. ಅಷ್ಟೇ ಅಲ್ಲದೇ ಲ್ಯಾಂಡರ್ ಸಹ ಮೇಲ್ಮೈ ನಿಂದ 2ms ನಷ್ಟು ಆಳದಲ್ಲಿತ್ತು ಆದ್ದರಿಂದ ಆಂಗಲ್ ಆಫ್ ಇನ್ಸಿಡೆನ್ಸ್ ಕಾರಣದಿಂದಾಗಿ ಅದು ನವೆಂಬರ್ 11 (2019) ರ ನಾಸಾ ಫ್ಲೈಬೈ ಕಣ್ಣಿಗೆ ಬಿದ್ದಿಲ್ಲ, ಸೂರ್ಯನ ಬೆಳಕು ನೇರವಾಗಿ ಆ ಜಾಗದ ಮೇಲ್ಮೈ ಗೆ ಬಿಳದೇ ಇದ್ದರೆ ಅಲ್ಲಿನ ವಸ್ತುವನ್ನು ಕಾಣುವುದು ಬಹಳ ಕಷ್ಟ ಎಂದು ಷಣ್ಮುಗ ಹೇಳಿದ್ದಾರೆ. 

ಆದರೆ ನಿರಂತರವಾಗಿ ಲ್ಯಾಂಡರ್ ಗೆ ಕಮಾಂಡ್ ಗಳನ್ನು ಕಳಿಸಲಾಗಿತ್ತು, ಲ್ಯಾಂಡರ್ ಆ ಕಮಾಂಡ್ ನ್ನು ಸ್ವೀಕರಿಸಿ ಅದನ್ನು ರೋವರ್ ಗೆ ತಲುಪಿಸಿರುವ ವಿಶಿಷ್ಟ, ಅಪರೂಪದ ಸಾಧ್ಯತೆ ಇದೆ ಆದರೆ ಲ್ಯಾಂಡರ್ ಅದನ್ನು ಭೂಮಿಗೆ ಮರಳಿ ಸಂಪರ್ಕಿಸಲು ಸಾಧ್ಯವಾಗಿರುವುದಿಲ್ಲವಷ್ಟೇ ಎಂದು ಷಣ್ಮುಗ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com