ಕೊವಿಡ್ -19: ಕಳೆದ ಎರಡು ತಿಂಗಳಲ್ಲಿ ಐಸಿಯು, ವೆಂಟಿಲೇಟರ್‌ಗಳ ಅವಶ್ಯಕತೆ ಗಣನೀಯ ಕುಸಿತ

ದೇಶದಲ್ಲಿ ಮಹಾಮಾರಿ ಕೊರೋನಾ ವೈರಸ್ ಸಕ್ರಿಯ ಪ್ರಕರಣಗಳ ಸಂಖ್ಯೆ ದಿನದಿಂದ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ಆದರೆ ಐಸಿಯು ಬೆಡ್, ವೆಂಟಿಲೇಟರ್‌, ಆಕ್ಸಿಜನ್‌ ಬೆಡ್‌ಗಳ ಅಗತ್ಯತೆ ಕಡಿಮೆಯಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.
ಅಂಕಿ - ಅಂಶ
ಅಂಕಿ - ಅಂಶ

ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೋನಾ ವೈರಸ್ ಸಕ್ರಿಯ ಪ್ರಕರಣಗಳ ಸಂಖ್ಯೆ ದಿನದಿಂದ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ಆದರೆ ಐಸಿಯು ಬೆಡ್, ವೆಂಟಿಲೇಟರ್‌, ಆಕ್ಸಿಜನ್‌ ಬೆಡ್‌ಗಳ ಅಗತ್ಯತೆ ಕಡಿಮೆಯಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.

ಮೇ 20 ರಂದು, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 61,149 ಇದ್ದಾಗ ಶೇ. 3 ರಷ್ಟು ಅಥವಾ 1,834 ರೋಗಿಗಳು ಐಸಿಯುನಲ್ಲಿದ್ದರೆ, ಶೇ.0.45 ರಷ್ಟು ಅಥವಾ 275 ರೋಗಿಗಳು ವೆಂಟಿಲೇಟರ್‌ನಲ್ಲಿದ್ದರೆ, ಶೇ. 2.94 ರಷ್ಟು ಅಥವಾ 1,797 ರೋಗಿಗಳು ಆಮ್ಲಜನಕದ ಬೆಂಬಲದಲ್ಲಿದ್ದರು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಮುಂಚಿನ ಸಂಖ್ಯೆಗೆ ಹೋಲಿಸಿದರೆ, ಜುಲೈ 31 ರಂದು, ದೇಶದಲ್ಲಿ 5,28,242 ಸಕ್ರಿಯ ಪ್ರಕರಣಗಳು ಇದ್ದಾಗ ಶೇ.1.61 ಅಥವಾ 8,504 ಜನ ಐಸಿಯುನಲ್ಲಿದ್ದರೆ, ಶೇ. 0.28 ಅಥವಾ 1,580 ರೋಗಿಗಳು ವೆಂಟಿಲೇಟರ್‌ನಲ್ಲಿದ್ದರೆ ಶೇ. 2.3 ಅಥವಾ 12,255 ಆಮ್ಲಜನಕದ ಬೆಂಬಲದಲ್ಲಿದ್ದಾರೆ.

ಗಂಭೀರ ಪ್ರಕರಣಗಳ ಸಂಖ್ಯೆಯಲ್ಲಿನ ಈ ಕುಸಿತವು ಕ್ಷೀಣಿಸುತ್ತಿರುವ ಸಾವಿನ ಪ್ರಮಾಣವನ್ನು ಪ್ರತಿಬಿಂಬಿಸುತ್ತದೆ. ಈ ಅಂಕಿ-ಅಂಶವು ಮೇ-ಅಂತ್ಯದಲ್ಲಿ ಶೇ 3ಕ್ಕಿಂತ ಹೆಚ್ಚಿದ್ದರೆ, ಅದು ಈಗ ಶೇ.2.15ಕ್ಕೆ ಇಳಿದಿದೆ. ದೇಶದ ವಿವಿಧ ಭಾಗಗಳಲ್ಲಿ ಕೊವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರ ವೈದ್ಯಕೀಯ ಅನುಭವದಿಂದ ಇದು ಸಾಧ್ಯವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ರೋಗಿಗಳ ಉತ್ತಮ ವೈದ್ಯಕೀಯ ನಿರ್ವಹಣೆ, ಸ್ಟೀರಾಯ್ಡ್‌ಗಳ ಆರಂಭಿಕ ಬಳಕೆ, ಹೆಚ್ಚಿದ ಪರೀಕ್ಷಾ ಪ್ರಮಾಣ, ಪಾಸಿಟಿವ್ ಪ್ರಕರಣಗಳನ್ನು ತ್ವರಿತವಾಗಿ ಪತ್ತೆಹಚ್ಚುವುದರಿಂದ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ವೆಂಟಿಲೇಟರ್‌ಗೆ ಹೋಗುವುದನ್ನು ತಪ್ಪಿಸಲು ಸಾಧ್ಯವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com