ಕಮಾಂಡರ್ ಮಟ್ಟದ ಮಾತುಕತೆ: ಪಾಂಗೊಂಗ್ ತ್ಸೋ ಲೇಕ್ ನಿಂದ ಸೇನೆ ಹಿಂಪಡೆಯಲು ಚೀನಾಗೆ ಭಾರತ ಒತ್ತಡ

ಭಾರತ ಮತ್ತು ಚೀನಾ ಮಧ್ಯೆ ಪೂರ್ವ ಲಡಾಕ್ ಗಡಿಭಾಗದಿಂದ ಸೇನಾಪಡೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವ ವಿಚಾರವಾಗಿ 5ನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ ನಡೆಯಿತು.
ಭಾರತ-ಚೀನಾ ಗಡಿಭಾಗದಲ್ಲಿ ಸೈನಿಕರು ಕಾಯುತ್ತಿರುವುದು
ಭಾರತ-ಚೀನಾ ಗಡಿಭಾಗದಲ್ಲಿ ಸೈನಿಕರು ಕಾಯುತ್ತಿರುವುದು

ನವದೆಹಲಿ: ಭಾರತ ಮತ್ತು ಚೀನಾ ಮಧ್ಯೆ ಪೂರ್ವ ಲಡಾಕ್ ಗಡಿಭಾಗದಿಂದ ಸೇನಾಪಡೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವ ವಿಚಾರವಾಗಿ 5ನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ ನಡೆಯಿತು.

ನಿನ್ನೆ ಬೆಳಗ್ಗೆ 11.30ಕ್ಕೆ ಗಡಿ ವಾಸ್ತವ ರೇಖೆಯ ಚೀನಾ ಕಡೆಯ ಮೊಲ್ಡೊದಲ್ಲಿ ಆರಂಭವಾದ ಸಭೆ ಸತತ 10 ಗಂಟೆಗಳ ಕಾಲ ಮುಂದುವರಿದು ಮುಕ್ತಾಯವಾಗಿದ್ದು ರಾತ್ರಿ 9.30ಕ್ಕೆ. ಸಭೆಯಲ್ಲಿ, ಪಾಂಗೊಂಗ್ ತ್ಸೋ ಸರೋವರ ಪ್ರದೇಶದಿಂದ ಚೀನಾ ಸಂಪೂರ್ಣವಾಗಿ ತನ್ನ ಸೇನಾಪಡೆಯನ್ನು ಹಿಂತೆಗೆದುಕೊಳ್ಳಬೇಕೆಂದು ಭಾರತ ಒತ್ತಾಯಿಸಿದೆ ಎಂದು ತಿಳಿದುಬಂದಿದೆ.

ಭಾರತದ ಕಡೆಯಿಂದ ಲೇಹ್ ಮೂಲದ 14 ಕಾರ್ಪ್ಸೊ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ಮೇಜರ್ ಜನರಲ್ ಲಿಯು ಲಿನ್, ಚೀನಾದ ಕಡೆಯಿಂದ ಕ್ಸಿಂಜಿಯಾಂಗ್ ಮಿಲಿಟರಿ ಜಿಲ್ಲಾ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು. ಭಾರತ-ಚೀನಾ ಗಡಿಯ ಮಧ್ಯೆ ಈಗ ಬಹಳ ಮುಖ್ಯ ಸಮಸ್ಯೆಯಿರುವುದು ಪಾಂಗೊಂಗ್ ತ್ಸೋ ಸರೋವರ ಕೇಂದ್ರವಾಗಿದೆ.

ಇನ್ನುಳಿದ ಮೂರು ಪ್ರದೇಶಗಳಾದ ದೆಪ್ಸಂಗ್, ಗೊಗ್ರ-ಹಾಟ್ ಸ್ಪ್ರಿಂಗ್ ಮತ್ತು ಗಲ್ವಾನ್ ಕಣಿವೆಯಲ್ಲಿ ಕಳೆದ ಜೂನ್ 15ರಂದು ನಡೆದ ಘರ್ಷಣೆಯಲ್ಲಿ ಕರ್ನಲ್ ಸೇರಿದಂತೆ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದು.ಅದಕ್ಕೆ ಪ್ರತಿಯಾಗಿ ಚೀನಾ ಸೇನೆಯ ಹಲವು ಯೋಧರು ಕೂಡ ಪ್ರಾಣ ಕಳೆದುಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com