ನಾಗರಿಕ ಸೇವಾ ಪರೀಕ್ಷೆಗಳ 2019ರ ಅಂತಿಮ ಫಲಿತಾಂಶ ಪ್ರಕಟ

ನಾಗರಿಕ ಸೇವಾ ಪರೀಕ್ಷೆಗಳ 2019 ರ ಅಂತಿಮ  ಫಲಿತಾಂಶವನ್ನು ಕೇಂದ್ರ ಸಾರ್ವಜನಿಕ ಸೇವಾ ಆಯೋಗ ಮಂಗಳವಾರ ಪ್ರಕಟಿಸಿದ್ದು, 829 ಆಕಾಂಕ್ಷಿಗಳು ಉತ್ತಿರ್ಣರಾಗಿದ್ದಾರೆ.

Published: 04th August 2020 01:49 PM  |   Last Updated: 04th August 2020 02:06 PM   |  A+A-


UPSC1

ಯುಪಿಎಸ್ ಸಿ

Posted By : Nagaraja AB
Source : UNI

ನವದೆಹಲಿ: ನಾಗರಿಕ ಸೇವಾ ಪರೀಕ್ಷೆಗಳ 2019 ರ ಅಂತಿಮ ಫಲಿತಾಂಶವನ್ನು ಕೇಂದ್ರ ಸಾರ್ವಜನಿಕ ಸೇವಾ ಆಯೋಗ ಮಂಗಳವಾರ ಪ್ರಕಟಿಸಿದ್ದು, 829 ಆಕಾಂಕ್ಷಿಗಳು ಉತ್ತಿರ್ಣರಾಗಿದ್ದಾರೆ. 

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ಸಿ) ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶ 2019 ಅನ್ನು ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದೆ.

ಪ್ರದೀಪ್ ಸಿಂಗ್ ಪ್ರಥಮ ರ್ಯಾಂಕ್ ಪಡೆದರೆ, ಜತಿನ್ ಕಿಶೋರ್ ಮತ್ತು ಪ್ರತಿಭಾ ವರ್ಮಾ ನಂತರದ  ಸ್ಥಾನದಲ್ಲಿದ್ದಾರೆ. ಟಾಪ್-ಟೆನ್ ಪಟ್ಟಿಯಲ್ಲಿ ಮೂವರು ಮಹಿಳೆಯರು ಮತ್ತು ಟಾಪ್ -25 ಶ್ರೇಯಾಂಕಗಳಲ್ಲಿ ಕನಿಷ್ಠ ಒಂಬತ್ತು ಮಂದಿ  ಇದ್ದಾರೆ. ಆಯ್ಕೆಯಾದ 829 ಜನರಲ್ಲಿ 304 ಮಂದಿ ಸಾಮಾನ್ಯ ವರ್ಗ, ಮತ್ತು 78 ಮಂದಿ ಆರ್ಥಿಕವಾಗಿ ಹಿಂದುಳಿದ ವರ್ಗದವರು, 251 ಮಂದಿ ಇತರ ಹಿಂದುಳಿದ ವರ್ಗದವರು (ಒಬಿಸಿ), 129 ಪರಿಶಿಷ್ಟ ಜಾತಿ ಮತ್ತು 67 ಮಂದಿ ಪರಿಶಿಷ್ಟ ಪಂಗಡದವರಿದ್ದಾರೆ.  ಐಎಎಸ್ ನಲ್ಲಿ  180, ಐಪಿಎಸ್ ನಲ್ಲಿ  150 ಮತ್ತು ಐಎಫ್ಎಸ್ ನಲ್ಲಿ 24 ಹುದ್ದೆಗಳು ಖಾಲಿ ಇವೆ. 

ಅಭ್ಯರ್ಥಿಗಳು ಪರೀಕ್ಷೆ ಗಳು ಮತ್ತು ನೇಮಕಾತಿಗಳ ಬಗ್ಗೆ ಯಾವುದೇ ಮಾಹಿತಿ ಅಥವಾ ಸ್ಪಷ್ಟೀಕರಣ ಬೇಕಿದ್ದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವೈಯಕ್ತಿಕವಾಗಿ ಅಥವಾ ದೂರವಾಣಿ ಮೂಲಕ  011-23385271 / 23381125/23098543 ಕ್ಕೆ ಕರೆ ಮಾಡಿ ಪಡೆಯಬುಹುದಾಗಿದೆ.

Stay up to date on all the latest ರಾಷ್ಟ್ರೀಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp