ಕೋವಿಡ್ 19 ಪರೀಕ್ಷೆ ನಡೆಸುವಲ್ಲಿ ಇತರೆ ರಾಷ್ಟ್ರಗಳಿಗಿಂತ ಭಾರತ ಹಿಂದಿದೆ: ಡಾ.ಸೌಮ್ಯಾ ಸ್ವಾಮಿನಾಥನ್

ಕೋವಿಡ್ -19 ಪರೀಕ್ಷೆಗಳ ವಿಚಾರದಲ್ಲಿ ಭಾರತ ಒಟ್ಟಾರೆಯಾಗಿ ಇತರ ದೇಶಗಳಿಗಿಂತ ಹಿಂದೆ ಬಿದ್ದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಮಂಗಳವಾರ, ಹೇಳಿದ್ದಾರೆ.  ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಳ ಮಾಡುವ ಅಗತ್ಯ ವನ್ನು ಒತ್ತಿಹೇಳುತ್ತಾ ಸ್ವಾಮಿನಾಥನ್ ಈ ಮೇಲಿನ ಮಾತುಗಳನ್ನಾಡಿದ್ದಾರೆ. 
ಡಾ ಸೌಮ್ಯಾ ಸ್ವಾಮಿನಾಥನ್
ಡಾ ಸೌಮ್ಯಾ ಸ್ವಾಮಿನಾಥನ್

ಹೈದರಾಬಾದ್: ಕೋವಿಡ್ -19 ಪರೀಕ್ಷೆಗಳ ವಿಚಾರದಲ್ಲಿ ಭಾರತ ಒಟ್ಟಾರೆಯಾಗಿ ಇತರ ದೇಶಗಳಿಗಿಂತ ಹಿಂದೆ ಬಿದ್ದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಮಂಗಳವಾರ, ಹೇಳಿದ್ದಾರೆ.  ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಳ ಮಾಡುವ ಅಗತ್ಯ ವನ್ನು ಒತ್ತಿಹೇಳುತ್ತಾ ಸ್ವಾಮಿನಾಥನ್ ಈ ಮೇಲಿನ ಮಾತುಗಳನ್ನಾಡಿದ್ದಾರೆ. 

ಸ್ವಾಮಿನಾಥನ್ ತೆಲಂಗಾಣ ಐಟಿ ಮತ್ತು ಎಂಎಯುಡಿ ಸಚಿವ ಕೆ.ಟಿ.ರಾಮರಾವ್ ಅವರೊಂದಿಗೆ "ವ್ಯಾಕ್ಸಿನ್ ರೇಸ್” ಕುರಿತು ವೆಬ್‌ನಾರ್‌ನಲ್ಲಿ ಸಂಭಾಷಣೆ ನಡೆಸಿದ್ದರು. ಜಿನೀವಾದಿಂದ ನಡೆದ ಈ ಕಾರ್ಯಕ್ರಮದಲ್ಲಿ ಪರೀಕ್ಷಾ ಸಕಾರಾತ್ಮಕತೆ ಶೇ.  5 ಕ್ಕಿಂತ ಕಡಿಮೆ ಇದ್ದಾಗ ಅತ್ಯಂತ ಹೆಚ್ಚು ಪರೀಕ್ಷೆಗಳ ಅಗತ್ಯವಿರುತ್ತದೆ. ಈಗಿನ ಕೋವಿಡ್ ಪರೀಕ್ಷೆಗಳೇನೂ ಸಾಕಾಗುವುದಿಲ್ಲ. 

"ಒಟ್ಟಾರೆಯಾಗಿ, ಜರ್ಮನಿ, ತೈವಾನ್, ದಕ್ಷಿಣ ಕೊರಿಯಾ, ಜಪಾನ್ ಮತ್ತು ಯುಎಸ್ಎಗಳಂತಹ ಉತ್ತಮ ಪ್ರತಿಕ್ರಿಯೆ ತೋರಿದ  ಕೆಲವು ದೇಶಗಳಿಗಿಂತ ಭಾರತವು ಕಡೊಮೆ ಸಂಖ್ಯೆಯ ಪರೀಕ್ಷೆಯನ್ನು ನಡೆಸುತ್ತಿದೆ. ಪ್ರತಿ ಸಾರ್ವಜನಿಕ ಆರೋಗ್ಯ ಇಲಾಖೆಯು ಪ್ರತಿ ಲಕ್ಷ ಅಥವಾ ಮಿಲಿಯನ್‌ಗೆ ಎಷ್ಟು ಪರೀಕ್ಷೆಗಳನ್ನು ನಡೆಸಬೇಕು ಎಂಬುದರ ಕುರಿತು ಕೆಲವು ಮಾನದಂಡಗಳನ್ನು ನಿಗದಿಪಡಿಸುವುದು ಅಗತ್ಯವಾಗಿದೆ."

ಕೋವಿಡ್ ಸೋಂಕು ಅತ್ಯಂತ ವೇಗವಾಗಿ ಹಬ್ಬಬಹುದಾದ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಪರೀಕ್ಷೆಯು ವ್ಯಾಪಕವಾಗಿರಬೇಕು ಎಂದು ಅವರು ಅಭಿಪ್ರಾಯಪಟ್ಟರು. ಆದರೆ ಗ್ರಾಮೀಣ ಪ್ರದೇಶಗಳಿಗೆ ಐಎಲ್ಐ-ಸಾರಿ ಕಣ್ಗಾವಲು ವಿಧಾನವನ್ನು ಮಾಡಬಹುದು. “ಗ್ರಾಮೀಣ ಪ್ರದೇಶಗಳಲ್ಲಿ, ಐಎಲ್ಐ ಮತ್ತು ಸಾರಿ ರೋಗಲಕ್ಷಣಗಳನ್ನು ಹೊಂದಿರುವ ಯಾರನ್ನಾದರೂ ನಿರಂತರ ಕಣ್ಗಾವಲು ಮೂಲಕ ಸುರಕ್ಷಿತವಾಗಿರಿಸಿಕೊಳ್ಲಲು ಸಾಧ್ಯ.  ಆದರೆ ನಗರಗಳಿಗೆವ್ಯಾಪಕ ಪರೀಕ್ಷೆಯಿಂದೆ ಮಾರ್ಗ." ಅವರು ಹೇಳಿದರು.

ಲಸಿಕೆ ಎಂದಿಗೂ ಬರುವುದಿಲ್ಲ ಎಂದು ಡಬ್ಲ್ಯುಎಚ್‌ಒ ಇತ್ತೀಚಿನ ಕೆಲವು ಕಾಮೆಂಟ್‌ಗಳು ಹೇಳಿದಂತೆ ನಾವು ಎಷ್ಟು ಸಮಯದವರೆಗೆ ವೈರಸ್‌ನೊಂದಿಗೆ ಬದುಕಬೇಕಾಗಬಹುದು ಎಂಬ ಬಗ್ಗೆ ಸಚಿವ ಕೆಟಿಆರ್ ಪ್ರಶ್ನಿಸಿದಾಗ ಸರ್ಕಾರಗಳು ಉತ್ತಮ ಸಾರ್ವಜನಿಕ ಆರೋಗ್ಯಕ್ಕಾಗಿ 8-10 ಮಾರ್ಗದರ್ಶಿ ಸೂಚಕಗಳನ್ನು ರಚಿಸಬೇಕಾಗುವುದು.  "ಸರ್ಕಾರ, ಸಮುದಾಯ ಮತ್ತು ವೈಯಕ್ತಿಕ ಮಟ್ಟದಲ್ಲಿ ನಡೆಸುವ ಪ್ರಯತ್ನಗಳಿಂದ ವೈರಸ್ ಅನ್ನು ನಿಯಂತ್ರಿಸಬಹುದು. ಪರೀಕ್ಷೆಯ ನಂತರ, ಅವರನ್ನು ಪ್ರತ್ಯೇಕಿಸುವುದು, ಸಂಪರ್ಕದ ಟ್ರ್ಯಾಕ್ ಮಾಡುವುದು, ಆಕ್ಸಿಜನ್ ಮಟ್ಟದ ಪರಿಶೀಲನೆ ಮೂಲಕ ಪಾಸಿಟಿವ್ ಎಂದು ಕಂಡುಬಂದವರ ಆರೈಕೆ ಎಲ್ಲಾ ಅತ್ಯಂತ ಮುಖ್ಯವಾಗಲಿದೆ" ಸ್ವಾಮಿನಾಥನ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com