ಕೋವಿಡ್-19: ಭಾರತದಲ್ಲಿ ಕೇವಲ 35 ರೂ. ಗೆ ಫವಿಪಿರಾವಿರ್ ಮಾತ್ರೆ ಬಿಡುಗಡೆ ಮಾಡಿದ ಸನ್ ಫಾರ್ಮಾ

ಭಾರತದಲ್ಲಿ ಕಡಿಮೆ ಮತ್ತು ಮಧ್ಯಮ ಲಕ್ಷಣ ಹೊಂದಿರುವ ಕೋವಿಡ್ 19 ರೋಗಿಗಳ ಚಿಕಿತ್ಸೆಗಾಗಿ 'ಫ್ಲುಗಾರ್ಡ್' ಎಂಬ ಬ್ರಾಂಡ್ ಹೆಸರಿನಲ್ಲಿ ಆಂಟಿವೈರಲ್ ಔಷಧಿ ಫವಿಪಿರಾವಿರ್ ಅನ್ನು ಸನ್ ಫಾರ್ಮಾ ಬಿಡುಗಡೆ ಮಾಡಿದೆ.
ಸನ್ ಫಾರ್ಮಾ
ಸನ್ ಫಾರ್ಮಾ

ನವದೆಹಲಿ: ಭಾರತದಲ್ಲಿ ಕಡಿಮೆ ಮತ್ತು ಮಧ್ಯಮ ಲಕ್ಷಣ ಹೊಂದಿರುವ ಕೋವಿಡ್ 19 ರೋಗಿಗಳ ಚಿಕಿತ್ಸೆಗಾಗಿ 'ಫ್ಲುಗಾರ್ಡ್' ಎಂಬ ಬ್ರಾಂಡ್ ಹೆಸರಿನಲ್ಲಿ ಆಂಟಿವೈರಲ್ ಔಷಧಿ ಫವಿಪಿರಾವಿರ್ ಅನ್ನು ಸನ್ ಫಾರ್ಮಾ ಬಿಡುಗಡೆ ಮಾಡಿದೆ.

ಈ ವಾರದಿಂದಲೇ ಫವಿಪಿರಾವಿರ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದ್ದು ಪ್ರತಿ ಟ್ಯಾಬ್ಲೆಟ್ ಬೆಲೆ 35 ರೂಪಾಯಿ ಎಂದು ಸನ್ ಫಾರ್ಮಾ ತಿಳಿಸಿದೆ. 

ಕಡಿಮೆ ಮತ್ತು ಮಧ್ಯಮ ಲಕ್ಷಣ ಹೊಂದಿರುವ ಕೊರೋನಾ ವೈರಸರ್ ಸೋಂಕಿಗೆ ತುತ್ತಾಗಿರುವ ರೋಗಿಗಳ ಸಂಭಾವ್ಯ ಚಿಕಿತ್ಸೆಗಾಗಿ ಈ ಫವಿಪಿರಾವಿರ್ ಮಾತ್ರೆಗಳನ್ನು ಬಳಸಲಾಗುತ್ತದೆ. ಭಾರತದಲ್ಲಿ ಅಂಗೀಕರಿಸಲ್ಪಟ್ಟ ಏಕೈಕ ಮೌಖಿಕ ಆಂಟಿ-ವೈರಲ್ ಮಾತ್ರೆ ಫವಿಪಿರವಿರ್ ಆಗಿದೆ.

ನಾವು ಕಡಿಮೆ ಬೆಲೆಗೆ ಫ್ಲುಗಾರ್ಡ್ ಮಾತ್ರೆಯನ್ನು ನೀಡುತ್ತಿದೆ. ಇದರಿಂದಾಗಿ ರೋಗಿಗಳಿಗೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಇದು ಭಾರತದ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ನಮ್ಮ ನಿರಂತರ ಪ್ರಯತ್ನಗಳಿಗೆ ಅನುಗುಣವಾಗಿದೆ ಎಂದು ಸನ್ ಫಾರ್ಮಾ ಇಂಡಿಯಾ ಬಿಸಿನೆಸ್ ಸಿಇಒ ಕೀರ್ತಿ ಗಾನೋರ್ಕರ್ ಹೇಳಿದ್ದಾರೆ.

ಭಾರತದಲ್ಲಿ ಪ್ರತಿದಿನ 50,000 ಕ್ಕೂ ಹೆಚ್ಚು COVID-19 ಪ್ರಕರಣಗಳು ವರದಿಯಾಗುತ್ತಿರುವುದರಿಂದ, ಆರೋಗ್ಯ ವೃತ್ತಿಪರರಿಗೆ ಹೆಚ್ಚಿನ ಚಿಕಿತ್ಸಾ ಆಯ್ಕೆಗಳನ್ನು ಒದಗಿಸುವ ತುರ್ತು ಅವಶ್ಯಕತೆಯಿದೆ ಎಂದು ಅವರು ಹೇಳಿದರು.

ದೇಶಾದ್ಯಂತದ ರೋಗಿಗಳಿಗೆ ಫ್ಲುಗಾರ್ಡ್(ಫವಿಪಿರವಿರ್ 200 ಮಿಗ್ರಾಂ) ತಲುಪುವಂತೆ ಮಾಡಲು ಸಂಸ್ಥೆ ಸರ್ಕಾರ ಮತ್ತು ವೈದ್ಯಕೀಯ ಸಮುದಾಯದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ ಎಂದು ಸನ್ ಫಾರ್ಮಾ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com