ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ನಲ್ಲಿ ರಾಮ ಮಂದಿರದ ಡಿಜಿಟಲ್ ಬಿಲ್ ಬೋರ್ಡ್! 

ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿದ್ದು, ಇತ್ತ ಅಮೆರಿಕಾದಲ್ಲಿಯೂ ರಾಮ ಸ್ಮರಣೆ ಮಾಡಲಾಗುತ್ತಿದೆ. 
ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ನಲ್ಲಿ ರಾಮ ಮಂದಿರದ ಡಿಜಿಟಲ್ ಬಿಲ್ ಬೋರ್ಡ್!
ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ನಲ್ಲಿ ರಾಮ ಮಂದಿರದ ಡಿಜಿಟಲ್ ಬಿಲ್ ಬೋರ್ಡ್!

ನ್ಯೂಯಾರ್ಕ್: ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿದ್ದು, ಇತ್ತ ಅಮೆರಿಕಾದಲ್ಲಿಯೂ ರಾಮ ಸ್ಮರಣೆ ಮಾಡಲಾಗುತ್ತಿದೆ. 

ರಾಮ ಮಂದಿರದ ವಿನ್ಯಾಸವನ್ನು ನ್ಯೂಯಾರ್ಕ್ ನ ಪ್ರತಿಷ್ಠಿತ ಟೈಮ್ಸ್ ಸ್ಕ್ವೇರ್ ನ ಬಿಲ್ ಬೋರ್ಡ್ ನಲ್ಲಿ ಪ್ರದರ್ಶಿಸಲಾಗುತ್ತಿದೆ. 

ಅಮೆರಿಕಾದ ಕಾಲಮಾನದ ಪ್ರಕಾರ  ಆ.05 ರಂದು ಬೆಳಿಗ್ಗೆ 8 ರಿಂದ 10 ವರೆಗೆ ಆಂಗ್ಲ, ಹಿಂದಿ ಭಾಷೆಗಳಲ್ಲಿರುವ ಜೈ ಶ್ರೀರಾಮ್ ಎಂಬ ಪದದ ಚಿತ್ರಗಳು ಹಾಗೂ ರಾಮನ 3ಡಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ. 

ವಿಶ್ವದ ಅತಿ ಐಕಾನಿಕ್ ಸ್ಕ್ರೀನ್ ನಲ್ಲಿ ಭಾರತದ ಪ್ರಭು ಶ್ರೀರಾಮ, ತ್ರಿವರ್ಣ ಧ್ವಜ ಪ್ರದರ್ಶನಗೊಳ್ಳುತ್ತಿರುವುದು ಭಾರತ ಜಾಗತಿಕ ಮಟ್ಟದಲ್ಲಿ ಮಹತ್ವದ ಸ್ಥಾನದಲ್ಲಿದೆ ಎಂಬುದನ್ನು ಸೂಚಿಸುತ್ತದೆ. 21 ನೇ ಶತಮಾನ ಭಾರತದ್ದಾಗಿದೆ ಈ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಅಮೆರಿಕನ್ ಇಂಡಿಯನ್ ಪಬ್ಲಿಕ್ ಅಫೇರ್ಸ್ ಕಮಿಟಿಯ ಅಧ್ಯಕ್ಷ ಜಗದೀಶ್ ಸೆಹ್ವಾನಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com