ಸುಶಾಂತ್ ಸಿಂಗ್ ಪ್ರಕರಣ: ರಿಯಾ ಚಕ್ರವರ್ತಿ ಮೇಲೆ ಒತ್ತಡ ಹೇರಲು ಐಪಿಎಸ್ ಅಧಿಕಾರಿಯಿಂದ ಕೋರಿಕೆ ಬಂದಿತ್ತು- ಡಿಸಿಪಿ ದಹಿಯಾ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿಯನ್ನು ಪೊಲೀಸ್ ಠಾಣೆಗೆ ಕರೆದು ಅವರ ಮೇಲೆ ಒತ್ತಡ ಹೇರುವಂತೆ ಮೃತ ನಟನ ಸೋದರಮಾವನಾಗಿದ್ದ ಐಪಿಎಸ್ ಅಧಿಕಾರಿ ತಮಗೆ ಹೇಳಿದ್ದರು ಎಂಬುದಾಗಿ ಮುಂಬೈ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದಾರೆ. 
ಸುಶಾಂತ್ ಸಿಂಗ್ ಪ್ರಕರಣ: ರಿಯಾ ಚಕ್ರವರ್ತಿ ಮೇಲೆ ಒತ್ತಡ ಹೇರಲು ಐಪಿಎಸ್ ಅಧಿಕಾರಿಯಿಂದ ಕೋರಿಕೆ ಬಂದಿತ್ತು- ಡಿಸಿಪಿ ದಹಿಯಾ

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿಯನ್ನು ಪೊಲೀಸ್ ಠಾಣೆಗೆ ಕರೆದು ಅವರ ಮೇಲೆ ಒತ್ತಡ ಹೇರುವಂತೆ ಮೃತ ನಟನ ಸೋದರಮಾವನಾಗಿದ್ದ ಐಪಿಎಸ್ ಅಧಿಕಾರಿ ತಮಗೆ ಹೇಳಿದ್ದರು ಎಂಬುದಾಗಿ ಮುಂಬೈ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದಾರೆ. 

ಫೆಬ್ರವರಿಯಲ್ಲಿ ರಜಪೂತ್ ಅವರ ಸೋದರ ಮಾವ ಮತ್ತು ಹರಿಯಾಣ ಪೊಲೀಸರ ಹಿರಿಯ ಐಪಿಎಸ್ ಅಧಿಕಾರಿ ಒ ಪಿ ಸಿಂಗ್ ರಿಯಾ ಅವರನ್ನು ಠಾಣೆಗೆ ಕರೆಸುವಂತೆ ತಮ್ಮಲ್ಲಿ ಕೋರಿದ್ದರೆಂದು  ಉಪ ಪೊಲೀಸ್ ಆಯುಕ್ತ ಪರಂಜಿತ್ ಸಿಂಗ್ ದಹಿಯಾ ಟಿವಿ ಚಾನೆಲ್‌ ಒಂದಕ್ಕೆ ಹೇಳಿದ್ದಾರೆ.

ನಟ ರಜಪೂತ್ (34) ಜೂನ್ 14 ರಂದು ಮುಂಬೈ ಉಪನಗರ ಬಾಂದ್ರಾದಲ್ಲಿರುವ ತನ್ನ ಅಪಾರ್ಟ್ ಮೆಂಟಿನಲ್ಲಿ  ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು 

"ರಿಯಾ ಚಕ್ರವರ್ತಿಯನ್ನು ಅನೌಪಚಾರಿಕವಾಗಿ ಪೊಲೀಸ್ ಠಾಣೆಗೆ ಕರೆದು ಆಕೆಯ ಮೇಲೆ  ಒತ್ತಡ ಹೇರಲು ಸಿಂಗ್ ನನ್ನನ್ನು ಕೇಳಿಕೊಂಡರು" ಎಂದು ಏಪ್ರಿಲ್ 1 ರವರೆಗೆ ಬಾಂದ್ರಾ ವಲಯದ ವಲಯ ಪೊಲೀಸ್ ಮುಖ್ಯಸ್ಥರಾಗಿದ್ದ ದಹಿಯಾ ಹೇಳಿದ್ದಾರೆ. ರಿಯಾ ನಟನನ್ನು "ನಿಯಂತ್ರಿಸುತ್ತಿದ್ದಾಳೆ"ಎಂದು ರಜಪೂತ್ ಅವರ ಕುಟುಂಬ ಭಾವಿಸಿದೆ ಮತ್ತು ಅವಳನ್ನು ತನ್ನ ಜೀವನದಿಂದ ಹೊರಹಾಕಬೇಕೆಂದು ನಟ ಹೇಳಿದುದಾಗಿ ದಹಿಯಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಆದರೆ ಈ ಕುರಿತು ನಟನ ಕುಟುಂಬ ಲಿಖಿತ ದೂರು ನೀಡಿಲ್ಲ ಎಂದು ದಹಿಯಾಸ್ಪಷ್ಟಪಡಿಸಿದ್ದಾರೆ. ಫೆಬ್ರವರಿ 18 ಮತ್ತು 25 ರಂದು ಒ ಪಿ ಸಿಂಗ್ ಅವರು ವಾಟ್ಸಾಪ್ ಸಂದೇಶಗಳ ಮೂಲಕ ಅನೌಪಚಾರಿಕ ವಿನಂತಿಯನ್ನು ಮಾಡಿದ್ದಾರೆ ಎಂದು ಅವರು ಹೇಳಿದರು. ಸಿಂಗ್ ಫೆಬ್ರವರಿ 5 ರಂದು ಮುಂಬೈಗೆ ಭೇಟಿ ನೀಡಿದ್ದು ಆ ಸಮಯ ನಟ ಸುಶಾಂತ್ ಸಿಂಗ್ ಸಹ ಮುಂಬೈನಲ್ಲಿದ್ದರೆಂದು ತಿಳಿಸಿದ್ದರು.

ಇನ್ನೊಂದೆಡೆ ಮಿರಾಂಡಾ ಎಂಬ ವ್ಯಕ್ತಿಯನ್ನು ಯಾವುದೇ ದೂರು ಅಥವಾ ತನಿಖೆ ಇಲ್ಲದೆ ಒಂದು ದಿನದ ಪೊಲೀಸ್ ಕಸ್ಟಡಿಯಲ್ಲಿ ಇಡಬೇಕೆಂದು ಅವರು ವಿನಂತಿಸಿದ್ದಾರೆ ಎಂದೂ  ದಹಿಯಾ ಹೇಳಿದ್ದಾರೆ.

ಯಾರನ್ನೂ ವಿನಾಕಾರಣ ಪೊಲೀಸ್ ಠಾಣೆಗೆ ಕರೆಸಿಕೊಳ್ಳುವುದು ಪೋಲೀಸ್ ಕಾರ್ಯಾಚರಣೆ ನಿಯಮಕ್ಕೆ ವಿರುದ್ಧವಾಗಿದ್ದು ಇದರಿಂದ  ಆತನನ್ನು ಬಂಧನದಲ್ಲಿಡುವುದು ಸಾಧ್ಯವಿಲ್ಲ ಎಂದು ಡಿಸಿಪಿ ಅವರು "ನಯವಾಗಿ ಮತ್ತು ದೃಢವಾಗಿ" ತಳ್ಳಿ ಹಾಕಿದ್ದರು. ಅಲ್ಲದೆ ಈ ಸಂಬಂಧ ಲಿಖಿತ ದೂರು ದಾಖಲಿಸುವಂತೆ ಸಿಂಗ್ ಅವರನ್ನು ಕೇಳಿಕೊಂಡಿದ್ದೇನೆ ಎಂದು ದಹಿಯಾ ಹೇಳಿದ್ದಾರೆ. ಆದರೆ ಇದುವರೆಗೆ ಆ ಕುರಿತು ಲಿಖಿತ ದೂರು ಸಲ್ಲಿಕೆಯಾಗಿಲ್ಲ. 

ತನ್ನ ಮಗನ ಪ್ರಾಣಕ್ಕೆ ಅಪಾಯವಿದೆ ಎಂದು ಫೆಬ್ರವರಿ 25 ರಂದು ಮುಂಬೈ ಪೊಲೀಸರನ್ನು ಎಚ್ಚರಿಸಿದ್ದಾಗಿ ರಜಪೂತ್ ತಂದೆ ಕೆ.ಕೆ.ಸಿಂಗ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಸೋಮವಾರ, ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ಜೂನ್ 16 ರಂದು ನಗರ ಪೊಲೀಸರು ತಮ್ಮ ಹೇಳಿಕೆಗಳನ್ನು ದಾಖಲಿಸಿದಾಗ ಕುಟುಂಬವು ಯಾವುದೇ ಅನುಮಾನವನ್ನು ವ್ಯಕ್ತಪಡಿಸಿಲ್ಲ ಎಂದು ಹೇಳಿದರು."ಆ ಸಮಯದಲ್ಲಿ, ಅವರು ಯಾವುದೇ ಅನುಮಾನವನ್ನು ವ್ಯಕ್ತಪಡಿಸಿಲ್ಲ. ನಮ್ಮ ತನಿಖೆಯಲ್ಲಿ ಯಾವುದೇ ತಪ್ಪನ್ನು ಕುರಿತು ದೂರಿಲ್ಲ" ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com