ಬ್ಯಾಂಕ್ ವಂಚನೆ ಪ್ರಕರಣ: ಜಮ್ಮು-ಕಾಶ್ಮೀರ ಮಾಜಿ ಸಚಿವ ಅಬ್ದುಲ್ ರಹೀಮ್ ಪುತ್ರನ ಮನೆ ಮೇಲೆ ಇಡಿ ದಾಳಿ

ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ)ವು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಅಬ್ದುಲ್ ರಹೀಮ್ ರಾಥರ್ ಪುತ್ರನ ಮನೆಯ ಮೇಲೆ ದಾಳಿ ನಡೆಸಿದ್ದಾರೆ. 

Published: 06th August 2020 03:13 PM  |   Last Updated: 06th August 2020 04:14 PM   |  A+A-


ED

ಜಾರಿ ನಿರ್ದೇಶನಾಲಯ

Posted By : Vishwanath S
Source : PTI

ಶ್ರೀನಗರ: ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ)ವು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಅಬ್ದುಲ್ ರಹೀಮ್ ರಾಥರ್ ಪುತ್ರನ ಮನೆಯ ಮೇಲೆ ದಾಳಿ ನಡೆಸಿದ್ದಾರೆ. 

ಕಾಶ್ಮೀರ, ಜಮ್ಮು, ದೆಹಲಿ ಮತ್ತು ಲುಧಿಯಾನದ 16 ಸ್ಥಳಗಳಲ್ಲಿ ಇಡಿ ದಾಳಿ ನಡೆಸಿದೆ. 177 ಕೋಟಿ ರೂಪಾಯಿ ವಂಚನೆ ಪ್ರಕರಣ ಸಂಬಂಧ ಕೇಂದ್ರ ತನಿಖಾ ಸಂಸ್ಥೆ(ಸಿಬಿಐ) ಹಿಲಾಲ್ ರಾಥರ್ ಮತ್ತು ಇತರರ ವಿರುದ್ಧ ಮನಿ ಲಾಂಡರಿಂಗ್ ತಡೆಗಟ್ಟುವ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿತ್ತು. ಈ ಸಂಬಂಧ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸುತ್ತಿದೆ. 

ದಾಳಿಗಳು ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಹಿಲಾಲ್ ರಾಥರ್ ಅವರು ಜೆ ಮತ್ತು ಕೆ ಬ್ಯಾಂಕಿನ ಅಂದಿನ ಅಧಿಕಾರಿಗಳೊಂದಿಗೆ ಕ್ರಿಮಿನಲ್ ಪಿತೂರಿ ನಡೆಸಿದರು ಎಂದು ಸಿಬಿಐ ಆರೋಪಿಸಿದೆ.

ಅಬ್ದುಲ್ ರಹೀಮ್ ರಾಥರ್ ಹಿಂದಿನ ಜಮ್ಮು ಮತ್ತು ಕಾಶ್ಮೀರದ ಮಾಜಿ ಹಣಕಾಸು ಸಚಿವರಾಗಿದ್ದರು. ಅಲ್ಲದೆ ರಾಷ್ಟ್ರೀಯ ಸಮ್ಮೇಳನದ (ಎನ್‌ಸಿ) ಮುಖಂಡರು ಆಗಿದ್ದರು. 

Stay up to date on all the latest ರಾಷ್ಟ್ರೀಯ news
Poll
SChool_Children1

ಕೆಲವು ರಾಜ್ಯಗಳಲ್ಲಿ ಶಾಲೆಗಳ ಭಾಗಶಃ ಪುನರಾರಂಭವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp