ಮಸೀದಿ ನಿರ್ಮಾಣದ ಶಿಲಾನ್ಯಾಸಕ್ಕೆ ಹೋಗುತ್ತೀರಾ? ಎಂಬ ಪ್ರಶ್ನೆಗೆ ಯೋಗಿ ಆದಿತ್ಯನಾಥ್ ಉತ್ತರ ಹೀಗಿದೆ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಯೋಗಿ ಆದಿತ್ಯನಾಥ್ ಎಬಿಪಿ ನ್ಯೂಸ್ ಲೈವ್ ನೊಂದಿಗೆ ಮಾತನಾಡಿದ್ದಾರೆ. 
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

ಲಖನೌ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಯೋಗಿ ಆದಿತ್ಯನಾಥ್ ಎಬಿಪಿ ನ್ಯೂಸ್ ಲೈವ್ ನೊಂದಿಗೆ ಮಾತನಾಡಿದ್ದಾರೆ. 

ಅಯೋಧ್ಯೆಯಲ್ಲಿಯೇ ಮುಂದೊಂದು ದಿನ ಮಸೀದಿ ನಿರ್ಮಾಣವಾದರೆ ಅದರ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಹೋಗುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಯೋಗಿ ಆದಿತ್ಯನಾಥ್, ನನ್ನನ್ನು ಯಾರೂ ಮಸೀದಿ ನಿರ್ಮಾಣ ಭೂಮಿಪೂಜೆ ಕಾರ್ಯಕ್ರಮಕ್ಕೆ ಆಹ್ವಾನಿಸುವುದಿಲ್ಲ, ನಾನು ಹೋಗುವುದೂ ಇಲ್ಲ. ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ ದಿನ ಜಾತ್ಯಾತೀತತೆ ಅಪಾಯದಲ್ಲಿರಲಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

ಈ ಕಾರಣದಿಂದಾಗಿ ಓರ್ವ ಯೋಗಿ ಆಗಿದ್ದುಕೊಂಡು ಮಸೀದಿಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ. 

"ಓರ್ವ ಮುಖ್ಯಮಂತ್ರಿಯಾಗಿದ್ದುಕೊಂಡು ನನಗೆ ಯಾವುದೇ ಧರ್ಮ, ಪಂಥಗಳ ಬಗ್ಗೆ ಸಮಸ್ಯೆ ಇಲ್ಲ, ಆದರೆ ಓರ್ವ ಯೋಗಿಯಾಗಿದ್ದುಕೊಂಡು ನಾನು ಹೋಗುವುದಿಲ್ಲ, ನನಗೆ ನನ್ನ ಮತವನ್ನು ಅಭಿವ್ಯಕ್ತಿಗೊಳಿಸುವ ಎಲ್ಲಾ ಹಕ್ಕು ಇದೆ. ಓರ್ವ ರಾಜಕೀಯ ಪ್ರೇರಿತ ನಾಯಕ ಟೋಪಿ ಧರಿಸಿ, ರೋಝಾ- ಇಫ್ತಾರ್ ಆಯೋಜಿಸಿದರೆ ಅದು ಜಾತ್ಯಾತೀತತೆಯಲ್ಲ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ, ಮಸೀದಿ ಭೂಮಿ ಪೂಜೆಗೆ ಯಾರೂ ನನ್ನನ್ನು ಕರೆಯುವುದಿಲ್ಲ, ನಾನೂ ಹೋಗುವುದಿಲ್ಲ. ನನ್ನನ್ನು ಆಹ್ವಾನಿಸಿದ ದಿನ ಜಾತ್ಯಾತೀತತೆ ಅಪಾಯದಲ್ಲಿರಲಿದೆ" ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com