ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿವಾದ ಪ್ರಸ್ತಾಪಿಸುವ ಚೀನಾ ಪ್ರಯತ್ನ: ಸ್ಪಷ್ಟವಾಗಿ ತಿರಸ್ಕರಿಸಿದ ಭಾರತ

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸುವ ಚೀನಾದ ಪ್ರಯತ್ನಕ್ಕೆ ಭಾರತ ಗುರುವಾರ ತಿರುಗೇಟು ನೀಡಿದ್ದು ದೇಶದ ಆಂತರಿಕ ವ್ಯವಹಾರಗಳಲ್ಲಿ ಚೀನಾದ ಮಧ್ಯ ಪ್ರವೇಶವನ್ನು ದೃಢವಾಗಿ ತಿರಸ್ಕರಿಸುವುದಾಗಿ ಹೇಳಿದೆ.
ಭಾರತ-ಚೀನಾ ಧ್ವಜಗಳು
ಭಾರತ-ಚೀನಾ ಧ್ವಜಗಳು

ನವದೆಹಲಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸುವ ಚೀನಾದ ಪ್ರಯತ್ನಕ್ಕೆ ಭಾರತ ಗುರುವಾರ ತಿರುಗೇಟು ನೀಡಿದ್ದು ದೇಶದ ಆಂತರಿಕ ವ್ಯವಹಾರಗಳಲ್ಲಿ ಚೀನಾದ ಮಧ್ಯ ಪ್ರವೇಶವನ್ನು ದೃಢವಾಗಿ ತಿರಸ್ಕರಿಸುವುದಾಗಿ ಹೇಳಿದೆ.

ಜಮ್ಮು-ಕಾಶ್ಮೀರ ವಿವಾದ ಕುರಿತಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಚೀನಾ ಚರ್ಚೆ ಆರಂಭಿಸಿದೆ ಎಂದು ತಿಳಿದುಬಂದಿದೆ. ಭಾರತದ ಆಂತರಿಕ ವಿಚಾರವಾಗಿರುವ ಜಮ್ಮು-ಕಾಶ್ಮೀರ ವಿವಾದದಲ್ಲಿ ಮಧ್ಯೆ ಪ್ರವೇಶಿಸುವುದು ಚೀನಾ ಇದು ಮೊದಲ ಸಲವೇನಲ್ಲ. ಈ ಹಿಂದೆ ಅದು ಮಾಡಿದ್ದ ಪ್ರಯತ್ನಕ್ಕೆ ಅಂತಾರಾಷ್ಟ್ರೀಯ ಸಮುದಾಯದಿಂದ ಬೆಂಬಲವೇನು ಸಿಕ್ಕಿಲ್ಲ. ಈ ಬಾರಿ ಸಹ ಸಿಗುವುದಿಲ್ಲ. ಅದರ ಪ್ರಯತ್ನ ಫಲಿಸದು, ಇದು ಸಂಪೂರ್ಣವಾಗಿ ಭಾರತಕ್ಕೆ ಸಂಬಂಧಿಸಿದ ವಿಷಯ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.

ಹೀಗೆ ಪದೇ ಪದೇ ಆಂತರಿಕ ವಿಚಾರಕ್ಕೆ ಕೈಹಾಕುವ ಮೊದಲು ಚೀನಾ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲಿ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com