ಪನ್ನಾ ಮೈನ್ ನಲ್ಲಿ ಕಾರ್ಮಿಕನಿಗೆ ಸಿಕ್ಕಿತು 35 ಲಕ್ಷ ರೂಪಾಯಿ ಮೌಲ್ಯದ ವಜ್ರಗಳು! 

ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿರುವ ಗಣಿಯಲ್ಲಿ ಕಾರ್ಮಿಕನೋರ್ವನಿಗೆ ತಲಾ 30-30 ಲಕ್ಷ ಬೆಲೆ ಬಾಳುವ ಮೂರು ವಜ್ರಗಳು ದೊರೆತಿವೆ. 
ಪನ್ನಾ ಮೈನ್ ನಲ್ಲಿ ಕಾರ್ಮಿಕನಿಗೆ ಸಿಕ್ಕಿತು 35 ಲಕ್ಷ ರೂಪಾಯಿ ಮೌಲ್ಯದ ವಜ್ರಗಳು!
ಪನ್ನಾ ಮೈನ್ ನಲ್ಲಿ ಕಾರ್ಮಿಕನಿಗೆ ಸಿಕ್ಕಿತು 35 ಲಕ್ಷ ರೂಪಾಯಿ ಮೌಲ್ಯದ ವಜ್ರಗಳು!

ಪನ್ನಾ: ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿರುವ ಗಣಿಯಲ್ಲಿ ಕಾರ್ಮಿಕನೋರ್ವನಿಗೆ ತಲಾ 30-30 ಲಕ್ಷ ಬೆಲೆ ಬಾಳುವ ಮೂರು ವಜ್ರಗಳು ದೊರೆತಿವೆ. 

ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಗಣಿಯಲ್ಲಿ ಅಗೆಯುತ್ತಿದ್ದಾಗ ವಜ್ರಗಳು ಸಿಕ್ಕಿವೆ. ಸುಬಲ್ ಎಂಬ ವ್ಯಕ್ತಿಗೆ 7.5 ಕ್ಯಾರೆಟ್ ನಷ್ಟು  ಮೂರು ವಜ್ರಗಳು ದೊರೆತಿದೆ ಎಂದು ಪನ್ನಾ ಜಿಲ್ಲೆಯ ಡೈಮಂಡ್ ಅಧಿಕಾರಿ ಆರ್ ಕೆ ಪಾಂಡೆ ತಿಳಿಸಿದ್ದಾರೆ. 
 
ತಜ್ಞರ ಪ್ರಕಾರ ಒಂದೊಂದು ವಜ್ರವೂ 30-35 ಲಕ್ಷ ರೂಪಾಯಿ ಬೆಲೆ ಬಾಳಲಿದೆ. ಕಾರ್ಮಿಕ ತನಗೆ ದೊರೆತ ವಜ್ರಗಳನ್ನು ಜಿಲ್ಲಾ ಡೈಮಂಡ್ ಕಚೇರಿಯಲ್ಲಿಟ್ಟಿದ್ದು, ಸರ್ಕಾರಿ ನಿಯಮಗಳ ಪ್ರಕಾರ ಹರಾಜು ಹಾಕಲಾಗುತ್ತದೆ. ಶೇ.12 ರಷ್ಟು ತೆರಿಗೆಯನ್ನು ಕಡಿತಗೊಳಿಸಿದ ನಂತರ ಸುಬಲ್ ಗೆ ಶೇ.88 ರಷ್ಟು ಹಣ ಸಿಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com