ಪ್ರಧಾನಿ ಮೋದಿಯವರ 'ತಿರುಚಿದ ಫೋಟೋ' ಟ್ವೀಟ್, ಕಾಂಗ್ರೆಸ್ ಶಾಸಕನ ವಿರುದ್ಧ ಪ್ರಕರಣ!

ಪ್ರಧಾನಿ ನರೇಂದ್ರ ಮೋದಿಯವರ ತಿರುಚಿತ ಫೋಟೋವನ್ನು ಟ್ವೀಟ್ ಮಾಡಿದ್ದ ಮಧ್ಯಪ್ರದೇಶದ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಮತ್ತು ಶಾಸಕ ಜಿತು ಪಟ್ವಾರಿ ವಿರುದ್ಧ ಪ್ರಕರಣ ದಾಖಲಾಗಿಸಲಾಗಿದೆ.

Published: 09th August 2020 07:05 PM  |   Last Updated: 09th August 2020 07:13 PM   |  A+A-


Jitu Patwari

ಜಿತು ಪಟ್ವಾರಿ

Posted By : Vishwanath S
Source : PTI

ಇಂದೋರ್: ಪ್ರಧಾನಿ ನರೇಂದ್ರ ಮೋದಿಯವರ ತಿರುಚಿತ ಫೋಟೋವನ್ನು ಟ್ವೀಟ್ ಮಾಡಿದ್ದ ಮಧ್ಯಪ್ರದೇಶದ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಮತ್ತು ಶಾಸಕ ಜಿತು ಪಟ್ವಾರಿ ವಿರುದ್ಧ ಪ್ರಕರಣ ದಾಖಲಾಗಿಸಲಾಗಿದೆ.

ಪಟ್ವಾರಿ ಟ್ವೀಟ್ ಮಾಡಿರುವ ಚಿತ್ರದಲ್ಲಿ ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಭೂಮಿ ಪೂಜೆ ಸಮಾರಂಭದಲ್ಲಿ ಪ್ರಧಾನಿ ಮುಖವಾಡ ಧರಿಸಿ ಕೈಯಲ್ಲಿ ಬೌಲ್ ಹಿಡಿದುಕೊಂಡಂತೆ ಬಿಂಬಿಸಲಾಗಿದೆ. 

ಫೋಟೋ ಜೊತೆಗೆ ಟ್ವೀಟ್ ನಲ್ಲಿ "ದೇಶದ ಆರ್ಥಿಕತೆ, ವ್ಯವಹಾರ ಮತ್ತು ಆದಾಯ, ರೈತರ ಆರ್ಥಿಕ ಸ್ಥಿತಿ ಕುಸಿಯುವುದು, ನಿರುದ್ಯೋಗ, ಆರ್ಥಿಕತೆಯ ಕುಸಿತ, ಕಾರ್ಮಿಕರು ಹೋರಾಟ. ಇವು ದೂರದರ್ಶನ ಚರ್ಚೆಯ ವಿಷಯಗಳಲ್ಲ ಕಿಡಿಕಾರಿದ್ದಾರೆ.

ಆಡಳಿತಾರೂಢ ಬಿಜೆಪಿ ಪ್ರಧಾನಮಂತ್ರಿಯ ಘನತೆ ಮತ್ತು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದೆ. ಅಲ್ಲದೆ ನಗರದ ಬಿಜೆಪಿ ಅಧ್ಯಕ್ಷ ಗೌರವ್ ರಾಂಡಿವ್ ದೂರು ನೀಡಿದ್ದು ಈ ದೂರಿನನ್ವಯ ಪಟ್ವಾರಿ ವಿರುದ್ಧ ಸೆಕ್ಷನ್ 188 ಮತ್ತು ಐಪಿಸಿ 464ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತ್ರಿಪುರ ಪೊಲೀಸ್ ಠಾಣೆ ಉಸ್ತುವಾರಿ ಪವನ್ ಸಿಂಘಾಲ್ ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp