ಕ್ವಿಟ್ ಇಂಡಿಯಾ ದಿನಾಚರಣೆ:  202 ಸ್ವಾತಂತ್ರ್ಯ ಹೋರಾಟಗಾರರಿಗೆ ರಾಷ್ಟ್ರಪತಿ ಗೌರವ

ಕ್ವಿಟ್ ಇಂಡಿಯಾ ದಿನಾಚರಣೆಯ 78 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾನುವಾರ ದೇಶಾದ್ಯಂತದ  202 ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಿದ್ದಾರೆ.

Published: 09th August 2020 08:58 PM  |   Last Updated: 09th August 2020 08:58 PM   |  A+A-


Posted By : Raghavendra Adiga
Source : PTI

ನವದೆಹಲಿ: ಕ್ವಿಟ್ ಇಂಡಿಯಾ ದಿನಾಚರಣೆಯ 78 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾನುವಾರ ದೇಶಾದ್ಯಂತದ  202 ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುವ ಸಲುವಾಗಿ ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿಕೋತ್ಸವದಂದು ರಾಷ್ಟ್ರಪತಿ ಭವನದಲ್ಲಿ ಪ್ರತಿ ವರ್ಷ ರಾಷ್ಟ್ರಪತಿ "ಮನೆ"ಯಲ್ಲಿ ವಿಶೇಷ ಕಾರ್ಯಕ್ರಮ  ಆಯೋಜಿಸುತ್ತಾರೆ ಎಂದು ರಾಷ್ಟ್ರಪತಿ ಭವನ ಪ್ರಕಟಣೆ ತಿಳಿಸಿದೆ. ಈ ವರ್ಷ ಕೋವಿಡ್ 19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜನೆ ಸಾಧಯಾಗುವುದಿಲ್ಲ  ಎಂದು ಹೇಳಿಕೆ ತಿಳಿಸಿದೆ.

"ಕಾರ್ಯಕ್ರಮ ಆಯೋಜನೆ ಸಾಧ್ಯವಾಗದ ಕಾರಣ ರಾಜ್ಯ / ಕೇಂದ್ರಾಡಳಿತ ಸರ್ಕಾರಗಳು ಸ್ವಾತಂತ್ರ್ಯ ಹೋರಾಟಗಾರರನ್ನು ಶಾಲು ಮತ್ತು ಗೌರವ ಸೂಚಕ ಫಲಕ ನೀಡಿ ಗೌರವಿಸಿ ಸನ್ಮಾನಿಸಲು ವಿನಂತಿಸಲಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ / ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ / ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಧ್ಯಕ್ಷರ ಪರವಾಗಿ ತಮ್ಮಸ್ಥಳಗಳಲ್ಲೇ ಈ ಕಾರ್ಯಕ್ರಮ ನಡೆಯಬೇಕು: ಹೇಳಿಕೆಯಲ್ಲಿ ತಿಳಿಸಲಾಗಿದೆ.

ರಾಷ್ಟ್ರಪತಿ ಭವನದ ಆಯುಕ್ತರ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯವಾದ ಪ್ರಶಸ್ತಿ ಪ್ರಧಾನ ಅಗತ್ಯ ವಸ್ತುಗಳು, " ಮತ್ತು ಶಾಲುಗಳನ್ನು ಒದಗಿಸಿದೆ ಎಂದು ಅದು ಹೇಳಿದೆ. 

ಭಾರತದಲ್ಲಿ ಬ್ರಿಟಿಷ್ ಆಡಳಿತವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ 1942 ರ ಆಗಸ್ಟ್ 9ರಂದು ಮಹಾತ್ಮ ಗಾಂಧಿಯವರು ಕ್ವಿಟ್ ಇಂಡಿಯಾ ಚಳವಳಿಯನ್ನು ಪ್ರಾರಂಭಿಸಿದರು.
 

Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp