ಸೀರೆಗಳನ್ನೇ ನೀರಿಗೆಸೆದು ಡ್ಯಾಂ ನಲ್ಲಿ ಮುಳುಗುತ್ತಿದ್ದ ಯುವಕರನ್ನು ರಕ್ಷಿಸಿದ ದಿಟ್ಟ ಮಹಿಳೆಯರು!

ಪೆರಂಬಲೂರು ಜಿಲ್ಲೆಯ ಕೊಟ್ಟಾರೈ ಡ್ಯಾಂ ನ ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಯುವಕರನ್ನು ರಕ್ಷಿಸಲು ಸ್ಥಳದಲ್ಲಿದ್ದ ಮೂವರು ಮಹಿಳೆಯರು  ಸೀರೆಯನ್ನೇ ನೀರಿಗೆ ಎಸೆದಿದ್ದು ಯುವಕರನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯರ ಈ ಕಾರ್ಯ ರಾಜ್ಯಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ.

Published: 09th August 2020 11:12 PM  |   Last Updated: 09th August 2020 11:12 PM   |  A+A-


ಅಡನುರೈ ನ ಮೂವರು ಮಹಿಳೆಯರು

Posted By : Raghavendra Adiga
Source : The New Indian Express

ಪೆರಂಬಲೂರ್(ತಮಿಳುನಾಡು): ಪೆರಂಬಲೂರು ಜಿಲ್ಲೆಯ ಕೊಟ್ಟಾರೈ ಡ್ಯಾಂ ನ ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಯುವಕರನ್ನು ರಕ್ಷಿಸಲು ಸ್ಥಳದಲ್ಲಿದ್ದ ಮೂವರು ಮಹಿಳೆಯರು  ಸೀರೆಯನ್ನೇ ನೀರಿಗೆ ಎಸೆದಿದ್ದು ಯುವಕರನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯರ ಈ ಕಾರ್ಯ ರಾಜ್ಯಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ.

ಆಗಸ್ಟ್ 6 ರಂದು ಸಿರೂವಾಚೂರ್ ಗ್ರಾಮದ 12 ಯುವಕರ ಗುಂಪು ಕೊಟಾರೈ ಡ್ಯಾಂ ನ ಸಮೀಪ  ಕ್ರಿಕೆಟ್ ಆಡಲು  ಮುಂದಾಗಿದೆ, ಆಟದ ನಂತರ ಡ್ಯಾಂ ನೀರಿನಲ್ಲಿ ಸ್ನಾನಕ್ಕೆ ಮುಂದಾಗಿದ್ದಾರೆ. ಗ್ರಾಮದ ಸಮೀಪದಲ್ಲಿರುವ ಮರುಐಯಾರು ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದು ಕಳೆದ ವಾರದಲ್ಲಿ ಭಾರಿ ಮಳೆಯಿಂದಾಗಿ ಅಣೆಕಟ್ಟಿನ ನೀರಿನ ಆಳ 15 ರಿಂದ 20 ಅಡಿಗಳಷ್ಟಿತ್ತು.

ಅಡನುರೈ ನ ಮೂವರು ಮಹಿಳೆಯರಾದ ಸೆಂಥಮಿಜ್  ಸೆಲ್ವಿ (38), ಮುತಮಾಲ್ (34) ಮತ್ತು ಅನಂತವಲ್ಲಿ (34) ಯುವಕರು ಸ್ನಾನಕ್ಕೆ ಬಂದಾಗ ಆಗಷ್ಟೇ ತಮ್ಮ ಸ್ನಾನ ಹಾಗೂ ಬಟ್ಟೆ ಒಗೆಯುವ ಕೆಲಸ ಮುಗಿಸಿದ್ದರು.

"ಯುವಕರ ಗುಂಪು ಆಗಮಿಸಿದಾಗ  ನಾವು ಮನೆಗೆ ಹೊರಟಿದ್ದೆವು.  ಅವರು ಡ್ಯಾಂ ನ ಸುತ್ತಲೂ ನೋಡಿದರು ಮತ್ತು ಇಲ್ಲಿ ಸ್ನಾನ ಮಾಡುವ ಬಗ್ಗೆ ಕೇಳಿದರು. ನೀರು ಆಳವಾಗಿರುತ್ತದೆ ಎಂದು ನಾವು ಅವರಿಗೆ ಎಚ್ಚರಿಕೆ ನೀಡಿದ್ದೆವು. ಆದರೆ ನಾಲ್ವರು ಯುವಕರು ಹಾಗಿದ್ದರೂ ನೀರಿಗೆ ಇಳಿದಿದ್ದಾರೆ.  ಆಗ ನಾವು ಮತ್ತೆನೂ ತೋಚದೆ ಆಗಷ್ಟೇ ಒಗೆದಿದ್ದ ಸೀರೆಗಳನ್ನೇ ನೀರಿಗೆ ಎಸೆದಿದ್ದೆವು. ನಾವು ಇಬ್ಬರು ಯುವಕರನ್ನು ಉಳಿಸಲು ಯಶಸ್ವಿಯಾಗಿದ್ದೇವೆ ಆದರೆ ಇತರ ಇಬ್ಬರು ನೀರುಪಾಲಾಗುವುದನ್ನು ನಾವು ತಪ್ಪಿಸಲು ಸಾಧ್ಯವಾಗಿಲ್ಲ. ನಾವು ನೀರಿನೊಳಗೆ ಇದ್ದೆವು ಆದರೆ ಅವರನ್ನು ತಲುಪಲು ಸಾಧ್ಯವಾಗಲಿಲ್ಲ" ಎಂದು  ಸೆಂಥಮಿಜ್  ಸೆಲ್ವಿ ಹೇಳಿದ್ದಾರೆ.

ಬದುಕುಳಿದ ಯುವಕರನ್ನು ಕಾರ್ತಿಕ್ ಮತ್ತು ಸೆಂಥಿವೆಲನ್ ಎಂದು ಗುರುತಿಸಲಾಗಿದ್ದು, ಮೃತರು ಪವಿತ್ರನ್ (17) ಮತ್ತು ತರಬೇತಿ ನಿರತ ವೈದ್ಯ ರಂಜಿತ್ (25). ಎನ್ನಲಾಗಿದೆ.

ಪೆರಂಬಲೂರ್ ಅಗ್ನಿಶಾಮಕ ದಳದವರು ಸ್ಥಳಕ್ಕೆ ತಲುಪಿ ಅವರ ಶವಗಳನ್ನು ವಶಕ್ಕೆ ಪಡೆದಿದ್ದು  ಶವಪರೀಕ್ಷೆಗಾಗಿ ಪೆರಂಬಲೂರ್ ಜಿಲ್ಲಾ ಕೇಂದ್ರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ನೀರು ತುಂಬಾ ಆಳವಾಗಿರುವುದರಿಂದ ಈ ಸ್ಥಳವು ಅಪಾಯದ್ದಾಗಿತ್ತು ಎಂದು ಸೆಲ್ವಿ ಹೇಳಿದರು.
 

Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp