ಸರ್ಕಾರಿ ಆಪ್ ಇನ್ನೋವೇಷನ್ ಸವಾಲು: ಪ್ರಶಸ್ತಿ ಗೆದ್ದ ಬಿಹಾರ ಮೂಲದ ಐಟಿ ಇಂಜಿನಿಯರ್ ನ ಕ್ಯಾಪ್ಷನ್ ಪ್ಲಸ್!

ಆತ್ಮನಿರ್ಭರ ಭಾರತ ಆಪ್ ಇನ್ನೋವೇಷನ್ ಚಾಲೆಂಜ್ ನಲ್ಲಿ ಬಿಹಾರದ ಮೂಲದ ಐಟಿ ಇಂಜಿನಿಯರ್ ಅನುರಾಗ್ ಕುಮಾರ್ ತಮ್ಮ ಕ್ಯಾಪ್ಷನ್ ಪ್ಲಸ್ ಎಂಬ ಆಪ್ ಗೆ ಉನ್ನತ ಪ್ರಶಸ್ತಿಯನ್ನು ಗೆದ್ದಿದ್ದಾರೆ. 
ಸರ್ಕಾರಿ ಆಪ್ ಇನ್ನೋವೇಷನ್ ಸವಾಲು: ಪ್ರಶಸ್ತಿ ಗೆದ್ದ ಬಿಹಾರ ಮೂಲದ ಐಟಿ ಇಂಜಿನಿಯರ್ ನ ಕ್ಯಾಪ್ಷನ್ ಪ್ಲಸ್!
ಸರ್ಕಾರಿ ಆಪ್ ಇನ್ನೋವೇಷನ್ ಸವಾಲು: ಪ್ರಶಸ್ತಿ ಗೆದ್ದ ಬಿಹಾರ ಮೂಲದ ಐಟಿ ಇಂಜಿನಿಯರ್ ನ ಕ್ಯಾಪ್ಷನ್ ಪ್ಲಸ್!

ನವದೆಹಲಿ: ಆತ್ಮನಿರ್ಭರ ಭಾರತ ಆಪ್ ಇನ್ನೋವೇಷನ್ ಚಾಲೆಂಜ್ ನಲ್ಲಿ ಬಿಹಾರದ ಮೂಲದ ಐಟಿ ಇಂಜಿನಿಯರ್ ಅನುರಾಗ್ ಕುಮಾರ್ ತಮ್ಮ ಕ್ಯಾಪ್ಷನ್ ಪ್ಲಸ್ ಎಂಬ ಆಪ್ ಗೆ ಉನ್ನತ ಪ್ರಶಸ್ತಿಯನ್ನು ಗೆದ್ದಿದ್ದಾರೆ. 

ಜಾಗತಿಕವಾಗಿ ಭಾರತವನ್ನು ಆಪ್ ಅಭಿವೃದ್ಧಿಪಡಿಸುವ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿರುವ ರಾಷ್ಟ್ರವನ್ನಾಗಿಸುವ ಕ್ರಮ ಈ ಆತ್ಮನಿರ್ಭರ ಭಾರತ ಆಪ್ ಇನ್ನೋವೇಷನ್ ಚಾಲೆಂಜ್ ಆಗಿದ್ದು, ಮನರಂಜನಾ ಕ್ಷೇತ್ರದಲ್ಲಿ ಮೊದಲ ಬಹುಮಾನ ಪಡೆದಿದೆ. 

ಸಾಮಾಜಿಕ ಜಾಲತಾಣದಲ್ಲಿ ಆಪ್ ಲೋಡ್ ಮಾಡುವ ಫೋಟೊಗಳಿಗೆ ಈ ಆಪ್ ಕೆಲವೇ ನಿಮಿಷ್ಗಳಲ್ಲಿ ಸುಂದರವಾದ ಕ್ಯಾಪ್ಷನ್ ಬರೆಯಲಿರುವುದು ಈ ಆಪ್ ನ ವೈಶಿಷ್ಟ್ಯವಾಗಿದೆ. 

ಬಿಹಾರದ ಬೆಗುಸರಾಯ್ ಜಿಲ್ಲೆಯ ಇಬ್ಬರು ಸ್ನೇಹಿತರೊಂದಿಗೆ 27 ವರ್ಷದ ಅನುರಾಗ್ ಕುಮಾರ್ ಈ ಆಪ್ ನ್ನು ಅಭಿವೃದ್ಧಿಪಡಿಸಿದ್ದಾರೆ. ಶೀಘ್ರವೇ ನಗದು ಬಹುಮಾನ, ಪ್ರಮಾಣ ಪತ್ರ, ಟ್ರೋಫಿಗಳನ್ನು ಮೂವರು ಪ್ರತಿಭಾನ್ವಿತರು ಪಡೆಯಲಿದ್ದಾರೆ. 

ಕುಮಾರ್ ದೆಹಲಿ ವಿವಿಯಿಂದ ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ದೆಹಲಿ ಮೂಲದ ಫರ್ನಿಚರ್ ರೆಂಟಲ್ ಸಂಸ್ಥೆಯಾಗಿರುವ ಫ್ಯಾಬ್ ರೆಂಟೋ ಎಂಬ ಸಂಸ್ಥೆಯಲ್ಲಿ ಮುಖ್ಯ ತಾಂತ್ರಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಟಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅನುರಾಗ್ 2018-19 ರಲ್ಲಿ ಈ ಆಪ್ ಅಭಿವೃದ್ಧಿಪಡಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com