ಮಣಿಪುರ:ವಿಶ್ವಾಸ ಮತದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಜಯ

ಮಣಿಪುರದ ಬಿಜೆಪಿ ನೇತೃತ್ವದ ಎನ್ ಬಿರೇನ್ ಸಿಂಗ್ ಸರ್ಕಾರ ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ  ಮತ ಜಯಿಸಿದೆ. ಬಿಜೆಪಿ ಸರ್ಕಾರಕ್ಕೆ 28-16ರಿಂದ ವಿಶ್ವಾಸ ಮತದಲ್ಲಿ ಜಯ ಲಭಿಸಿದೆ.
ಎನ್ ಬಿರೇನ್ ಸಿಂಗ್
ಎನ್ ಬಿರೇನ್ ಸಿಂಗ್

ಇಂಪಾಲ್: ಮಣಿಪುರದ ಬಿಜೆಪಿ ನೇತೃತ್ವದ ಎನ್ ಬಿರೇನ್ ಸಿಂಗ್ ಸರ್ಕಾರ ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ  ಮತ ಜಯಿಸಿದೆ. ಬಿಜೆಪಿ ಸರ್ಕಾರಕ್ಕೆ 28-16ರಿಂದ ವಿಶ್ವಾಸ ಮತದಲ್ಲಿ ಜಯ ಲಭಿಸಿದೆ.

ಒಂದು ದಿನದ  ವಿಶೇಷ ಅಧಿವೇಶನದಲ್ಲಿ ಸುದೀರ್ಘ ಚರ್ಚೆಯ ನಂತರ ಸಿಂಗ್ ಅವರು ಮಂಡಿಸಿದ ವಿಶ್ವಾಸ ಮತ ಮಸೂದೆಗೆ ಸದನದಲ್ಲಿ ಮತ ಚಲಾವಣೆಯಾಗಿದೆ, ಹಾಗೂ ಅವರ ಸರ್ಕಾರ ಜಯ ಗಳಿಸಿದೆ.

ಎಂಟು ಕಾಂಗ್ರೆಸ್ ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿ ವಿಶ್ವಸ ಮತ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ.

60 ಸದಸ್ಯರ ಸದನದಲ್ಲಿ  ಕಾಂಗ್ರೆಸ್ 24 ಶಾಸಕರನ್ನು ಹೊಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com