ಬೈರುತ್ ಸ್ಫೋಟ ಹಿನ್ನೆಲೆ: 700 ಟನ್ ಅಮೋನಿಯಂ ನೈಟ್ರೇಟ್ ಚೆನ್ನೈ ನಿಂದ ಹೈದರಾಬಾದ್ ಗೆ ಸ್ಥಳಾಂತರ

ಲೆಬನಾನ್ ರಾಜಧಾನಿ ಬೈರುತ್ ನಗರದ ಬಂದರಿನಲ್ಲಿ ಸಂಭವಿಸಿದ್ದ ಭೀಕರ ಸ್ಫೋಟಕ್ಕೆ ಕಾರಣವಾಗಿದ್ದ ಅಮೋನಿಯಂ ನೈಟ್ರೇಟ್  ಅನ್ನು ಚೆನ್ನೈ ಬಂದರಿನಿಂದ ಹೈದರಾಬಾದ್ ಗೆ ಸ್ಥಳಾಂತರ ಮಾಡಲಾಗಿದೆ.
ಚೆನ್ನೈ ಬಂದರು
ಚೆನ್ನೈ ಬಂದರು

ಚೆನ್ನೈ: ಲೆಬನಾನ್ ರಾಜಧಾನಿ ಬೈರುತ್ ನಗರದ ಬಂದರಿನಲ್ಲಿ ಸಂಭವಿಸಿದ್ದ ಭೀಕರ ಸ್ಫೋಟಕ್ಕೆ ಕಾರಣವಾಗಿದ್ದ ಅಮೋನಿಯಂ ನೈಟ್ರೇಟ್  ಅನ್ನು ಚೆನ್ನೈ ಬಂದರಿನಿಂದ ಹೈದರಾಬಾದ್ ಗೆ ಸ್ಥಳಾಂತರ ಮಾಡಲಾಗಿದೆ.

ಬೈರುತನ್ ಬಂದರು ಪ್ರದೇಶದಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟಕ್ಕೆ ಇಡೀ ಜಗತ್ತು ಬೆಚ್ಚಿ ಬಿದ್ದಿತ್ತು. ಈ ಸ್ಫೋಟಕ್ಕೆ ಬಂದರಿನಲ್ಲಿ ಶೇಖರಿಸಿಟ್ಟ ಅಮೋನಿಯಂ ನೈಟ್ರೇಟ್​ ಕಾರಣ ಎಂದು ಹೇಳಲಾಗಿತ್ತು. ಈ ಘಟನೆ ಬೆನ್ನಲ್ಲೇ ಭಾರತ ಸರ್ಕಾರ ಕೂಡ ಎಚ್ಚೆತ್ತುಕೊಂಡಿದ್ದು, ಚೆನ್ನೈ ಬಂದರಿನಲ್ಲಿ ಸೀಜ್​ ಮಾಡಿ ಇಟ್ಟಿದ್ದ ಸುಮಾರು 697 ಟನ್​ ಅಮೋನಿಯಂ ನೈಟ್ರೇಟ್ ಅನ್ನು ಈಗ ಹೈದರಾಬಾದ್​ಗೆ ಸ್ಖಳಾಂತರ ಮಾಡಲಾಗಿದೆ.

ಸುಮಾರು  ಕಂಟೈನರ್ ಗಳಲ್ಲಿ ಅಮೋನಿಯಂ ನೈಟ್ರೇಟ್ ರಾಸಾಯನಿಕವನ್ನು ಸ್ಥಳಾಂತರ ಮಾಡಲಾಗಿದೆ. 2015ರಲ್ಲಿ ಚೆನ್ನೈ ಬಂದರಿಗೆ 697 ಟನ್​ ಅಮೋನಿಯಂ ನೈಟ್ರೇಟ್​ ಹಡಗಿನಲ್ಲಿ ತರಲಾಗಿತ್ತು. ಇದು ತಮಿಳುನಾಡು ಮೂಲದ ಕಂಪೆನಿಯೊಂದಕ್ಕೆ ಸೇರಿದ್ದಾಗಿತ್ತು. ಆದರೆ ಸೂಕ್ತ ಪರವಾನಗಿ ಇಲ್ಲದೆ ಅಮೋನಿಯಂ ನೈಟ್ರೇಟ್​ ತಂದಿದ್ದರಿಂದ ಅದನ್ನು ಸೀಜ್​ ಮಾಡಲಾಗಿತ್ತು. ಚೆನ್ನೈನಿಂದ 20 ಕಿ.ಮೀ ದೂರದಲ್ಲಿ ಇದನ್ನು ಸಂಗ್ರಹಿಸಿ ಇಡಲಾಗಿತ್ತು.

ಆದರೆ ಕಳೆದ ಮಂಗಳವಾರ ಬೈರುತ್​ ಸ್ಫೋಟದ ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು ಇಲ್ಲಿ ಸಂಗ್ರಹಿಸಿಟ್ಟಿದ್ದ ಅಮೋನಿಯಂ ನೈಟ್ರೇಟ್ ಅನ್ನು ಆನ್ ಲೈನ್​ ಮೂಲಕ ಹರಾಜು ಹಾಕಿದ್ದಾರೆ. ಹೈದರಾಬಾದ್​ ಮೂಲದ ಉದ್ಯಮಿಯೊಬ್ಬರು ಇದನ್ನು ಖರೀದಿಸಿದ್ದಾರೆ. 12 ಕಂಟೇನರ್​ ಮೂಲಕ ಇವುಗಳನ್ನು ಹೈದರಾಬಾದ್​ಗೆ ರಫ್ತು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲೆಬನಾನ್ ರಾಜಧಾನಿ ಬೈರುತ್ ನಗರದ ಬಂದರು ಪ್ರದೇಶದಲ್ಲಿ ಆಗಸ್ಟ್​5 ರಂದು ಮಧ್ಯಾಹ್ನ ಸಂಭವಿಸಿರುವ ಭಾರೀ ಸ್ಟೋಟದಿಂದ ಅಲ್ಲಿನ ಜನರ ಬದುಕು ನುಚ್ಚು ನೂರಾಗಿದೆ. ಘಟನೆಯಲ್ಲಿ ಯಾವುದೇ ರೀತಿಯ ಸಾವು ಸಂಭವಿಸಿಲ್ಲವಾದರೂ 4 ಸಾವಿರ ಜನ ಗಾಯಗೊಂಡು ನೂರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಅಲ್ಲದೆ ಈ ಸ್ಫೋಟದಿಂದಾಗೆ ಲೆಬೆನಾನ್ ರಾಜಧಾನಿ ಬೈರುತ್ ನಗರ ಸಂಪೂರ್ಣ ಛಿದ್ರವಾಗಿತ್ತು. ಈ ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್​ ಕಾರಣವಾಗಿತ್ತು. 2013-14 ಸಂದರ್ಭದಲ್ಲಿ ಹಡಗೊಂದರಿಂದ ಸುಮಾರು 2,750 ಟನ್​ ಅಮೋನಿಯಂ ನೈಟ್ರೇಟ್ ವಶಕ್ಕೆ ಪಡೆಯಲಾಗಿತ್ತು.  ಅದನ್ನು ಬೈರುತ್​ ಬಂದರಿನಲ್ಲಿ ಶೇಖರಿಸಿಡಲಾಗಿತ್ತು. ಇದಕ್ಕೆ ಬೆಂಕಿ ತಾಗಿದ್ದರಿಂದ ಈ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com