ನೋಟು ನಿಷೇಧ, ಜಿಎಸ್ ಟಿ, ಲಾಕ್ ಡೌನ್ ನಿಂದ ಭಾರತದ ಆರ್ಥಿಕತೆಯ ರಚನೆ ನಾಶ: ರಾಹುಲ್ ಗಾಂಧಿ

ಕೇಂದ್ರ ಸರ್ಕಾರ ಪ್ರತಿ ವರ್ಷ 2 ಕೋಟಿ ಯುವಕರಿಗೆ ಉದ್ಯೋಗ ನೀಡುವ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ, ಜಿಎಸ್ ಟಿ ತಪ್ಪು ಅನುಷ್ಠಾನ, ನೋಟು ನಿಷೇಧ ಮತ್ತು ಲಾಕ್ ಡೌನ್ ನಿಂದ ಭಾರತದ ಆರ್ಥಿಕ ರಚನೆಯೇ ನಾಶವಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಕೇಂದ್ರ ಸರ್ಕಾರ ಪ್ರತಿ ವರ್ಷ 2 ಕೋಟಿ ಯುವಕರಿಗೆ ಉದ್ಯೋಗ ನೀಡುವ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ, ಜಿಎಸ್ ಟಿ ತಪ್ಪು ಅನುಷ್ಠಾನ, ನೋಟು ನಿಷೇಧ ಮತ್ತು ಲಾಕ್ ಡೌನ್ ನಿಂದ ಭಾರತದ ಆರ್ಥಿಕ ರಚನೆಯೇ ನಾಶವಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ರಾಹುಲ್ ಗಾಂಧಿ ತಮ್ಮ ಟ್ವೀಟ್‌ ಖಾತೆಯಲ್ಲಿ 90 ಸೆಕೆಂಡ್‌ ವಿಡಿಯೋ ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ “ರೊಜ್‌ಗಾರ್‌ ದೊ" (ಉದ್ಯೋಗವನ್ನು ಒದಗಿಸಿ) ಅಭಿಯಾನವನ್ನು ಆರಂಭಿಸಿರುವ ರಾಹುಲ್ ಗಾಂಧಿ, “ಉದ್ಯೋಗವಿಲ್ಲದ ಯುವಜನರು ಮತ್ತು ಇತರರು ದನಿ ಎತ್ತಿ ಸರ್ಕಾರವನ್ನು ಜಾಗೃತಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ. ದೇಶದ ಕೋಟ್ಯಾಂತರ ಯುವ ಜನರು ನಿರುದ್ಯೋಗಿಗಳಾಗಿದ್ದಾರೆ. ಅಲ್ಲದೆ, ದೇಶದ ಆರ್ಥಿಕ ರಚನೆಯನ್ನೇ ಬಿಜೆಪಿ ಸರ್ಕಾರ ನಾಶಪಡಿಸಿದೆ ಎಂದು ರಾಹುಲ್ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ನರೇಂದ್ರ ಮೋದಿ ಪ್ರಧಾನಿಯಾದಾಗ ಈ ದೇಶದ ಯುವಕರಿಗೆ ಪ್ರತಿ ವರ್ಷ ಎರಡು ಕೋಟಿ ಜನರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಈ ಮೂಲಕ ಯುವ ಜನರಲ್ಲಿ ದೊಡ್ಡ ಕನಸೊಂದನ್ನು ಮೂಡಿಸಿದ್ದರು. ಆದರೆ, ವಾಸ್ತವದಲ್ಲಿ ಮೋದಿ ಅವರ ನೀತಿಯಿಂದಾಗಿ 14 ಕೋಟಿ ಜನ ಇದೀಗ ಉದ್ಯೋಗ ರಹಿತರಾಗಿದ್ದಾರೆ.

ನೋಟು ರದ್ದತಿ, ಜಿ ಎಸ್ ಟಿ ಮತ್ತು ತಯಾರಿಯಿಲ್ಲದ ಕೊರೋನಾ ಲಾಕ್‌ಡೌನ್ ನಂತಹ ಅವೈಜ್ಞಾನಿಕ ನೀತಿಗಳಿಂದಾಗಿ ಸರ್ಕಾರವು ಭಾರತದ ಆರ್ಥಿಕ ರಚನೆಯನ್ನು ನಾಶಪಡಿಸಿದೆ. ಈಗ ಭಾರತವು ತನ್ನ ಯುವಜನರಿಗೆ ಉದ್ಯೋಗಗಳನ್ನು ನೀಡಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ನಿರುದ್ಯೋಗದ ಸಮಸ್ಯೆಯನ್ನು ಕೈಗೆತ್ತಿಕೊಂಡಿರುವ ತಮ್ಮ ಪಕ್ಷದ ಯುವ ವಿಭಾಗವಾದ ಭಾರತೀಯ ಯುವ ಕಾಂಗ್ರೆಸ್ “ರೋಜ್‌ಗಾರ್ ದೋ” ಚಳವಳಿಯ ಪ್ರಚಾರಕ್ಕಾಗಿ ಕಾರ್ಯಕ್ರಮಗಳನ್ನು ನಡೆಸುತ್ತದೆ” ಎಂದು ಅವರು ತಿಳಿಸಿದ್ದಾರೆ. ಕೊರೋನಾ ವೈರಸ್ ಬಿಕ್ಕಟ್ಟನ್ನು ಸರ್ಕಾರ ನಿಭಾಯಿಸುವ ಬಗ್ಗೆ ‘ಕೇಂದ್ರ ಸರ್ಕಾರದ ಆರ್ಥಿಕತೆಯ ನಿರ್ವಹಣೆಯು ಲಕ್ಷಾಂತರ ಕುಟುಂಬಗಳನ್ನು ನಾಶಪಡಿಸುವ ದುರಂತ’ ಎಂದು ರಾಹುಲ್  ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com