ಮಣಿಪುರ: ವಿಶ್ವಾಸ ಮತಕ್ಕೆ ಗೈರಾಗಿದ್ದ 8 ಮಂದಿ ಪೈಕಿ ಆರು ಕಾಂಗ್ರೆಸ್ ಶಾಸಕರ ರಾಜಿನಾಮೆ

ಮಣಿಪುರ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಗೆ ಗೈರಾಗಿದ್ದ 8 ಮಂದಿ ಪೈಕಿ ಆರು ಶಾಸಕರು ಸ್ಪೀಕರ್ ಗೆ ರಾಜಿನಾಮೆ ನೀಡಿದ್ದಾರೆ
ಸಿಎಂ ಓಬೋಬಿ ಸಿಂಗ್
ಸಿಎಂ ಓಬೋಬಿ ಸಿಂಗ್

ಇಂಫಾಲ: ಮಣಿಪುರ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಗೆ ಗೈರಾಗಿದ್ದ 8 ಮಂದಿ ಪೈಕಿ ಆರು ಶಾಸಕರು ಸ್ಪೀಕರ್ ಗೆ ರಾಜಿನಾಮೆ ನೀಡಿದ್ದಾರೆ.

ವಿಶ್ವಾಸ ಮತ ಯಾಚನೆಗಾಗಿ ಒಂದು ದಿನದ ವಿಧಾನಸಭೆ ಅಧಿವೇಶನ ಕರೆಯಲಾಗಿತ್ತು. ಈ ವೇಳೆ ಕಾಂಗ್ರೆಸ್ ಶಾಸಕರಿಗೆ ವಿಪ್ ನೀಡಲಾಗಿತ್ತು.  ಈ ವೇಳೆ 8 ಶಾಸಕರು ಗೈರಾಗಿದ್ದರು. ಅದರಲ್ಲಿ ಅರು ಶಾಸಕರು ರಾಜಿನಾಮೆ ಸಲ್ಲಿಸಿದ್ದಾರೆ ಎಂದು ಶಾಸಕ ಓ ಹೆನ್ರಿ ಸಿಂಗ್ ಹೇಳಿದ್ದಾರೆ.

ವಾಂಗೋಯಿ ನ ಓನಮ್ ಲುಖೋಯ್, ಲಿಲಾಂಗ್‌ನ ಎಂಡಿ ಅಬ್ದುಲ್ ನಾಸಿರ್, ವಾಂಗ್ಜಿಂಗ್ ಟೆಂಥಾದ ಪಾವೊನಮ್ ಬ್ರೋಜೆನ್, ಸೈತುವಿನ ಎನ್‌ಗಮ್‌ಥಾಂಗ್ ಹಾಕಿಪ್ ಮತ್ತು ಸಿಂಘಾಟ್‌ನ ಗಿನ್ಸುವಾನ್ಹೌ ರಾಜಿನಾಮೆ ನೀಡಿದ ಶಾಸಕರಾಗಿದ್ದಾರೆ.

ಒ ಇಬೊಬಿ ಸಿಂಗ್ ಅವರ ನಾಯಕತ್ವದ ಮೇಲಿನ ನಂಬಿಕೆಯ ಕೊರತೆಯನ್ನು ಅವರು ಉಲ್ಲೇಖಿಸಿದರು ಮತ್ತು ಅವರ ಕಾರಣದಿಂದಾಗಿ ರಾಜಿನಾಮೆ ನೀಡಿದ್ದಾಗಿ ಹೇಳಿದ್ದಾರೆ. ರಾಜ್ಯದ ಏಕೈಕ ಅತಿದೊಡ್ಡ ಪಕ್ಷವಾಗಿದ್ದರೂ ಸಹ ಸರ್ಕಾರ ರಚಿಸಲು ಕಾಂಗ್ರೆಸ್ ವಿಫಲವಾಗಿದೆ.

ಸೋಮವಾರ ರಾತ್ರಿ ವಿಧಾನಸಭೆ ಅಧಿವೇಶನದ ನಂತರ ಅವರನ್ನು ಸ್ಪೀಕರ್ ಯುನ್ನಮ್ ಖೇಮಚಂದ್ ಸಿಂಗ್ ಅವರು ಕರೆಸಿದರು ಮತ್ತು ಅವರ ರಾಜೀನಾಮೆ ಪತ್ರಗಳನ್ನು ಪರಿಶೀಲಿಸಲಾಗಿದೆ ಎಂದು ಹೆನ್ರಿ ಸಿಂಗ್ ಹೇಳಿದ್ದಾರೆ. ರಾಜಿನಾಮೆ ಪತ್ರವನ್ನು ಇನ್ನೂ ಸ್ಪೀಕರ್ ಅಂಗೀಕರಿಸಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com