ಗರ್ಭಿಣಿ ಮಹಿಳೆಯ ಹೆರಿಗೆ ಮಾಡಿಸಿ ತಾಯಿ-ಮಗುವಿನ ಜೀವ ಉಳಿಸಿದ ಮಿಜೋರಾಂ ಶಾಸಕ

ಮಿಜೋರಾಂ ಶಾಸಕರೊಬ್ಬರು ಪ್ರಯಾಣದ ನಡುವೆ ಸಿಕ್ಕಿದ್ದ ಗರ್ಭಿಣಿ ಮಹಿಳೆಯ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.
ಗರ್ಭಿಣಿ ಮಹಿಳೆಯ ಹೆರಿಗೆ ಮಾಡಿಸಿ ತಾಯಿ-ಮಗುವಿನ ಜೀವ ಉಳಿಸಿದ ಮಿಜೋರಾಂ ಶಾಸಕ

ಗುವಾಹತಿ: ಮಿಜೋರಾಂ ಶಾಸಕರೊಬ್ಬರು ಪ್ರಯಾಣದ ನಡುವೆ ಸಿಕ್ಕಿದ್ದ ಗರ್ಭಿಣಿ ಮಹಿಳೆಯ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.

ಮ್ಯಾನ್ಮಾರ್‌ನ ಗಡಿಯಲ್ಲಿರುವ  ಮಿಜೋರಾಂನ ದೂರದ ಚಂಪೈ ಜಿಲ್ಲೆಯ ಎನ್‌ಗೂರ್ ಗ್ರಾಮದ ಲಾಲ್ಮಂಗೈ ಹಸಂಗಿ ಎಂಬ ಮಹಿಳೆಗೆ ಸೋಮವಾರ ಹೆರಿಗೆ ನೋವು ಹಾಗೂ ರಕ್ತಸ್ರಾವ ಸಮಸ್ಯೆ ಕಾಣಿಸಿದೆ,  ಆದರೆ ಆ ಜಿಲ್ಲೆಯಲ್ಲಿದ್ದ ಜಿಲ್ಲಾಸ್ಪತ್ರೆಯ  ಏಕೈಕ ವೈದ್ಯರು ಅನಾರೋಗ್ಯದಿಂದ ಬಳಲುತ್ತಿದ್ದರು.

ಸ್ತ್ರೀರೋಗತಜ್ಞರಾಗಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ ಚಂಪೈ ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುವ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ಶಾಸಕ ಡಾ.ಝಡ್.ಆರ್. ಥಿಯಂಸಂಗಾ ಈ ಮಹಿಳೆಯ ಅನಾರೋಗ್ಯದ ಸ್ಥಿತಿ ಬಗ್ಗೆ ತಿಳಿದು ತಕ್ಷಣ ಆಸ್ಪತ್ರೆಗೆ ಧಾವಿಸಿದ್ದು ಆಕೆಯನ್ನು ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿ ಜೀವ ಉಳಿಸಿದ್ದಾರೆ.

ಡಾ. ಥಿಯಂಸಂಗಾ ಪತ್ರಿಕೆಯೊಡನೆ ಮಾತನಾಡಿ " ಮಹಿಳೆಯ ಸ್ಥಿತಿ ಗಂಭೀರವಾಗಿತ್ತು, ತಕ್ಷಣ ಶಸ್ತ್ರಚಿಕಿತ್ಸೆ ನಡೆಸನೇಕಿತ್ತು. ಶಸ್ತ್ರಚಿಕಿತ್ಸೆಯಲ್ಲಿ ಯಾವುದೇ ತೊಂದರೆಗಳಾಗಿಲ್ಲ.  ಮಹಿಳೆ ಮತ್ತು ಆಕೆಯ ಮಗು ಈಗ ಉತ್ತಮ ಆರೋಗ್ಯದಿಂದಿದೆ. " ಎಂದರು.

“ಚಂಪೈ ಆಸ್ಪತ್ರೆಯ ಸ್ತ್ರೀರೋಗತಜ್ಞ ಅನಾರೋಗ್ಯದ ಕಾರಣ ರಜೆಯಲ್ಲಿದ್ದರು. ಮಹಿಳೆ ಹೆರಿಗೆ ನೋವು ಮತ್ತು ರಕ್ತಸ್ರಾವದಿಂದ ಬಳಲುತ್ತಿದ್ದಳು,  ಆಕೆಗೆ ತಕ್ಷಣದ ಶಸ್ತ್ರಚಿಕಿತ್ಸೆ ಅಗತ್ಯವಿತ್ತಾಗಿ ನಾನು ಸ್ವಯಂಪ್ರೇರಿತವಾಗಿ ಈ ಕೆಲಸ ಮಾಡಿದ್ದೇನೆ."

ಲಾಲ್ಮಂಗೈ ಟುಂಬವು ಅವಳನ್ನು ರಾಜ್ಯ ರಾಜಧಾನಿ ಐಜಾಲ್ ಗೆ ಕರೆದೊಯ್ಯಲು ಯೋಜಿಸುತ್ತಿತ್ತು, ಆದರೆ ಆ ಹಳ್ಳಿಯಿಂಡ ಅಲ್ಲಿಗೆ ಸುಮಾರು 200 ಕಿ.ಮೀ  ಆಗುತ್ತಿತ್ತು. ಚಂಪೈನಿಂದ ಸುಮಾರು 10 ಗಂಟೆಗಳ ಪ್ರಯಾಣ ಮಾಡಬೇಕಿತ್ತು. ಒಂದೊಮ್ಮೆ ಕುಟುಂಬ ಅವಳನ್ನು ಐಜಾಲ್ ಗೆ ಕರೆದೊಯ್ದಿದ್ದರೆ ಮಹಿಳೆ ಮತ್ತು ಹುಟ್ಟಲಿರುವ ಮಗು ಬದುಕುಳಿಯುತ್ತಿರಲಿಲ್ಲ ಎಂದು ಡಾ ಥಿಯಂಸಂಗಾ ಹೇಳಿದ್ದಾರೆ.

"ಅಡ್ಡಿಯ ಕಾರಣ ಅಲ್ಲಿಗೆ ಆಕೆ ತಲುಪಲು ಸಾಧ್ಯವಾಗಿಲ್ಲ. . ಕುಟುಂಬವು ಅವಳನ್ನು ಐಜಾಲ್ ಗೆ  ಕರೆದೊಯ್ಯಿದ್ದರೆ, ಅವಳು ಮತ್ತು ಮಗು ಸಹ ಸಾವನ್ನಪ್ಪಬಹುದಿತ್ತು. ರಸ್ತೆಯ ಸ್ಥಿತಿ ಉತ್ತಮವಾಗಿಲ್ಲದ ಕಾರಣ ಇದು ದೀರ್ಘ ಮತ್ತು ಪ್ರಯಾಸಕರವಾದ ಪ್ರಯಾಣವಾಗುತ್ತಿತ್ತುಜ್" ಅವರು ಹೇಳಿದರು.

"ಇದು ದೇವರ ಆಶೀರ್ವಾದ  ಅವಳು ತುಂಬಾ ಅದೃಷ್ಟಶಾಲಿಯಾಗಿದ್ದಳು. ನಾನು ಚಂಪೈನಲ್ಲಿದ್ದೆ. ತೆ ನಾನೂ ಅದೃಷ್ಟಶಾಲಿಯಾಗಿದ್ದೆ ”ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂಡಳಿಯ ಉಪಾಧ್ಯಕ್ಷರಾಗಿರುವ ಶಾಸಕ ಹೇಳಿದ್ದಾರೆ.  ಮಿಜೋರಾಮ್ ನಲ್ಲಿ ಸ್ತ್ರೀರೋಗತಜ್ಞರ ಸಂಖ್ಯೆ ಕಡಿಮೆ ಇದೆ, ಅದೆಷ್ಟರ ಮಟ್ಟಿಗೆ ಎಂದರೆ ಪ್ರತಿ ಜಿಲ್ಲೆಯ ಒಬ್ಬ ಸ್ತ್ರೀರೋಗತಜ್ಞರನ್ನು ಸಹ ಹೊಂದಲು ಸಾಧ್ಯವಾಗುವುದಿಲ್ಲ, ಅರಿವಳಿಕೆ ತಜ್ಞರು ಕೂಡ ಕಡಿಮೆ. ಸಂಖ್ಯೆಯಲ್ಲಿದ್ದು ರಾಜ್ಯವು 11 ಜಿಲ್ಲೆಗಳನ್ನು ಹೊಂದ್ದು ಐಜಾಲ್ ಮತ್ತು ಲುಂಗ್ಲೆ ನಗರಗಳಲ್ಲಿ ಮಾತ್ರವೇ ಖಾಸಗಿ ಆಸ್ಪತ್ರೆಗಳಿದೆ, . ಲುಂಗ್ಲೇಯಲ್ಲಿರುವ ಏಕೈಕ ಖಾಸಗಿ ಆಸ್ಪತ್ರೆಯನ್ನು ಚರ್ಚ್ ಒಂದು ನಡೆಸುತ್ತಿದೆ,

ಡಾ.ಥಿಯಂಸಂಗಾ  ಅವರು ತಾವು ಸ್ವಯಂಪ್ರೇರಿತ ನಿವೃತ್ತಿ ಪಡೆದುಕೊಂಡು ಶಾಸಕರಾಗಿದ್ದಾರೆ. ಆದರೆ ಸ್ಟೆತೊಸ್ಕೋಪ್ ಧರಿಸಿ ಆಗಾಗ ಹಳ್ಳಿಗಳ ಕಡೆ ಪ್ರಯಾಣಿಸುವ ಈ ಶಾಸಕ ಜೂನ್‌ನಲ್ಲಿ, ಮ್ಯಾನ್ಮಾರ್‌ನೊಂದಿಗಿನ ಅಂತರರಾಷ್ಟ್ರೀಯ ಗಡಿಯ ಸಮೀಪ ಅನಾರೋಗ್ಯ ಪೀಡಿತ ಪೋಲೀಸರಿಗೆ ಚಿಕಿತ್ಸೆ ನೀಡಲು ಏಳು ಕಿ.ಮೀ ಸಂಚರಿಸಿದ್ದರು “ನಾನು ಶಾಸಕ ಮತ್ತು ನನ್ನ ಜನರ ಕಲ್ಯಾಣವನ್ನು ನೋಡಿಕೊಳ್ಳುವುದು ನನ್ನ ಕರ್ತವ್ಯ. ಮತ್ತು ನಾನು ವೈದ್ಯನಾಗಿರುವುದರಿಂದ, ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರುವ ಜನರಿಗೆ ಚಿಕಿತ್ಸೆ ನೀಡುವ ಬಗ್ಗೆ ನನ್ನ ಕ್ಷೇತ್ರದ ಪ್ರಾದೇಶಿಕ ನ್ಯಾಯದ ಬಗ್ಗೆ ನಾನು ಗಮನ ನೀಡುವುದಿಲ್ಲ.  ”ಎಂದು  ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com