ಕೋವಿಡ್-19: ಒಂದೇ ದಿನ 53,601 ಕೇಸ್ ಪತ್ತೆ; ಸೋಂಕಿತರ ಸಂಖ್ಯೆ 22.6 ಲಕ್ಷ, 45,257 ಮಂದಿ ಸಾವು

ಕೆಲವು ದಿನಗಳಿಂದ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದ ಕೊರೋನಾ ಪ್ರಕರಣಗಳು ಕೊಂಚ ಇಳಿಮುಖಗೊಂಡಿದೆ. ಮಂಗಳವಾರ 53,601 ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 22,68,676ಕ್ಕೆ ಏರಿಕೆಯಾಗಿದೆ.

Published: 11th August 2020 09:45 AM  |   Last Updated: 11th August 2020 12:29 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : ANI

ನವದೆಹಲಿ: ಕೆಲವು ದಿನಗಳಿಂದ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದ ಕೊರೋನಾ ಪ್ರಕರಣಗಳು ಕೊಂಚ ಇಳಿಮುಖಗೊಂಡಿದೆ. ಮಂಗಳವಾರ 53,601 ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 22,68,676ಕ್ಕೆ ಏರಿಕೆಯಾಗಿದೆ. 

ಇದೇ ವೇಳೆ ಕಳೆದ 24 ಗಂಟೆಗಳಲ್ಲಿ 870 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 45,257ಕ್ಕೆ ಹೆಚ್ಚಳವಾಗಿದೆ. ಈ ನಡುವೆ ಒಂದೇ ದಿನ 48,931 ಮಂದಿ ಚೇತರಿಸಿಕೊಂಡಿದ್ದು, ಗುಣಮುಖರಾದವರ ಸಂಖ್ಯೆ 15,83,490ಕ್ಕೆ ತಲುಪಿದೆ. ಪ್ರಸ್ತುತ ದೇಶದಲ್ಲಿನ್ನೂ 6,39,929 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. 

ಇನ್ನು ರಾಜ್ಯವಾರು ಸೋಂಕಿತ ಪ್ರಕರಣಗಳಿಗೆ ಬಂದರೆ, ಮಹಾರಾಷ್ಟ್ರದಲ್ಲಿ 9,181 ಕೇಸ್, 293 ಸಾವು, ದೆಹಲಿಯಲ್ಲಿ 707 ಕೇಸ್, 20 ಸಾವು, ಆಂಧ್ರಪ್ರದೇಶದಲ್ಲಿ 7,665 ಕೇಸ್ ಹಾಗೂ 80 ಸಾವು ಸಂಭವಿಸಿದೆ. 

Stay up to date on all the latest ರಾಷ್ಟ್ರೀಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp