ಜನ್ಮಾಷ್ಠಮಿ ಸಂಭ್ರಮದ ನಡುವೆಯೇ ಶಾಕ್, ಅರ್ಚಕ ಸೇರಿದಂತೆ 22 ಮಂದಿಗೆ ಕೊರೋನಾ, ವೃಂದಾವನ ಇಸ್ಕಾನ್ ಟೆಂಪಲ್ ಸೀಲ್ ಡೌನ್!

ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದೇ ಉತ್ತರ ಪ್ರದೇಶದ ವೃಂದಾವನ ಇಸ್ಕಾನ್ ದೇಗುಲ ಆಘಾತಕ್ಕೊಳಗಾಗಿದ್ದು, ದೇಗುಲದ ಅರ್ಚಕ ಸೇರಿದಂತೆ 22 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಪರಿಣಾಮ ಇಡೀ ದೇಗುಲವನ್ನು ಸೀಲ್ ಡೌನ್ ಮಾಡಲಾಗಿದೆ.
ವೃಂದಾವನ ಇಸ್ಕಾನ್ ಸೀಲ್ ಡೌನ್
ವೃಂದಾವನ ಇಸ್ಕಾನ್ ಸೀಲ್ ಡೌನ್

ವೃಂದಾವನ: ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದೇ ಉತ್ತರ ಪ್ರದೇಶದ ವೃಂದಾವನ ಇಸ್ಕಾನ್ ದೇಗುಲ ಆಘಾತಕ್ಕೊಳಗಾಗಿದ್ದು, ದೇಗುಲದ ಅರ್ಚಕ ಸೇರಿದಂತೆ 22 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಪರಿಣಾಮ ಇಡೀ ದೇಗುಲವನ್ನು ಸೀಲ್ ಡೌನ್ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು, ಈ ಹಿಂದೆ ದೇಗುಲ ಓರ್ವ ಸಿಬ್ಬಂದಿಗೆ ಸೋಂಕು ತಗುಲಿತ್ತು. ಇದೀಗ ಅರ್ಚಕರೂ ಸೇರಿದಂತೆ 22 ಮಂದಿಯಲ್ಲಿ ಕೊರೋನಾ ಸೋಂಕು ದೃಢವಾಗಿದೆ, ಹೀಗಾಗಿ ಈ 22 ಮಂದಿಯ ಸಂಪರ್ಕ ಶೋಧ ಮಾಡುತ್ತಿದ್ದು, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು  ಪ್ರತ್ಯೇಕವಾಗಿರಿಸಲಾಗುತ್ತಿದೆ. ಅಲ್ಲದೆ ದೇಗಲವನ್ನು ಸೀಲ್ ಡೌನ್ ಮಾಡಲಾಗಿದ್ದು, ದೇಗಲದ ಸಮೀಪ ಜನರ ಓಡಾಟವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ,

ವೃಂದಾವನದಲ್ಲಿ ನಾಳೆ ಜನ್ಮಾಷ್ಠಮಿ ಆಚರಣೆಗೆ ಸಕಲ ಸಿದ್ಧತೆ ನಡೆಸಲಾಗಿತ್ತು, ಶ್ರೀಕೃಷ್ಣನ ಪೂಜೆ ಕ್ಷಣಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿ ದೇಗುಲದ 22 ಮಂದಿ ಸೋಂಕಿಗೆ ತುತ್ತಾಗಿರುವುದು ಇಡೀ ಕಾರ್ಯಕ್ರಮ ರದ್ದಾಗುವಂತೆ ಮಾಡಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com