ಪೂರ್ವ ಲಡಾಕ್ ನಲ್ಲಿ ದೀರ್ಘಕಾಲದ ಸಂಘರ್ಷಕ್ಕೆ ಭಾರತೀಯ ಸೇನೆ ಸಿದ್ದವಾಗಿದೆ: ರಕ್ಷಣಾ ಪಡೆ ಮುಖ್ಯಸ್ಥ ಜ.ಬಿಪಿನ್ ರಾವತ್

ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯಲ್ಲಿ ಉದ್ವಿಗ್ನ ಸ್ಥಿತಿಯನ್ನು ಜೀವಂತವಾಗಿಡಲು ಚೀನಾ ಯತ್ನಿಸುತ್ತಿದೆ ಎಂದು ಹೇಳಿರುವ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ದೀರ್ಘಾವಧಿಯ ಯುದ್ಧ ಸ್ಥಿತಿಯ ವಾತಾವರಣವನ್ನು ಎದುರಿಸಲು ಭಾರತೀಯ ಸೇನೆ ಸಜ್ಜಾಗಿದೆ ಎಂದು ಅರೆಸೇನಾಪಡೆ ತಂಡಕ್ಕೆ ಹೇಳಿದ್ದಾರೆ.
ಲಡಾಕ್ ಗಡಿಯಲ್ಲಿ ಭಾರತೀಯ ಯೋಧ ಕಾವಲು ಕಾಯುತ್ತಿರುವುದು
ಲಡಾಕ್ ಗಡಿಯಲ್ಲಿ ಭಾರತೀಯ ಯೋಧ ಕಾವಲು ಕಾಯುತ್ತಿರುವುದು

ನವದೆಹಲಿ: ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯಲ್ಲಿ ಉದ್ವಿಗ್ನ ಸ್ಥಿತಿಯನ್ನು ಜೀವಂತವಾಗಿಡಲು ಚೀನಾ ಯತ್ನಿಸುತ್ತಿದೆ ಎಂದು ಹೇಳಿರುವ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ದೀರ್ಘಾವಧಿಯ ಯುದ್ಧ ಸ್ಥಿತಿಯ ವಾತಾವರಣವನ್ನು ಎದುರಿಸಲು ಭಾರತೀಯ ಸೇನೆ ಸಜ್ಜಾಗಿದೆ ಎಂದು ಅರೆಸೇನಾಪಡೆ ತಂಡಕ್ಕೆ ಹೇಳಿದ್ದಾರೆ.

ನಿನ್ನೆ ದೇಶದ ಅರೆಸೇನಾಪಡೆ ತಂಡಕ್ಕೆ ಗಡಿಯಲ್ಲಿನ ಇಂದಿನ ಪರಿಸ್ಥಿತಿ ಬಗ್ಗೆ ವಿವರಿಸಿದ ಅವರು, ಗಡಿಯಿಂದ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವ ಪ್ರಕ್ರಿಯೆಗೆ ಸಮಯ ಹಿಡಿಯಬಹುದು. ಅವಕಾಶದ ಕ್ಷಣಕ್ಕಾಗಿ ಚೀನಾ ಎದುರು ನೋಡುತ್ತಿರುವುದರಿಂದ ಸೇನೆ ನಿಲುಗಡೆ ಮುಂದೆ ಹೋಗಲೂಬಹುದು. ಚೀನಾದ ಸೇನಾಪಡೆಯನ್ನು ಬೃಹತ್ ಪ್ರಮಾಣದಲ್ಲಿ ಅಲ್ಲಲ್ಲಿ ನಿಯೋಜಿಸಿರುವುದರಿಂದ ಮತ್ತು ಸೇನಾಪಡೆಯನ್ನು ಹಿಂತೆಗೆದುಕೊಳ್ಳುವ ಮಾತುಕತೆಯಲ್ಲಿ ತನ್ನ ಬೇಡಿಕೆಗಳು ಈಡೇರದಿರುವುದರಿಂದ ಚೀನಾ ಈ ತಕ್ಷಣವೇ ಸೇನೆಯನ್ನು ವಾಪಸ್ ಪಡೆಯಬಹುದು ಎಂದು ಹೇಳಲು ಸಾಧ್ಯವಿಲ್ಲ ಎಂದು ರಕ್ಷಣಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com