ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಹೇಗಿರುತ್ತದೆ? 

74ನೇ ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಎರಡೇ ದಿನ ಬಾಕಿ. ಕೋವಿಡ್-19 ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಈ ವರ್ಷ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳು, ಸಭೆ-ಸಮಾರಂಭಗಳು ಇಲ್ಲದಿರುವುದರಿಂದ ಸ್ವಾತಂತ್ರ್ಯ ದಿನಾಚರಣೆ ಕೂಡ ದೇಶಾದ್ಯಂತ ಸರಳವಾಗಿ ನಡೆಯಲಿದೆ.

Published: 13th August 2020 09:56 AM  |   Last Updated: 13th August 2020 11:11 AM   |  A+A-


Rehearsal by Indian soldiers

ಕೆಂಪು ಕೋಟೆಯಲ್ಲಿ ಭಾರತೀಯ ಯೋಧರಿಂದ ತಾಲೀಮು

Posted By : Sumana Upadhyaya
Source : PTI

ನವದೆಹಲಿ:  74ನೇ ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಎರಡೇ ದಿನ ಬಾಕಿ. ಕೋವಿಡ್-19 ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಈ ವರ್ಷ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳು, ಸಭೆ-ಸಮಾರಂಭಗಳು ಇಲ್ಲದಿರುವುದರಿಂದ ಸ್ವಾತಂತ್ರ್ಯ ದಿನಾಚರಣೆ ಕೂಡ ದೇಶಾದ್ಯಂತ ಸರಳವಾಗಿ ನಡೆಯಲಿದೆ.

ಪ್ರತಿವರ್ಷ ಸ್ವಾತಂತ್ಯ ದಿನಾಚರಣೆ ದಿನ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿ ಪರೇಡ್ ಇರುತ್ತದೆ. ದೇಶದ ಪ್ರಧಾನಿ ದೇಶವಾಸಿಗಳನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ಆದರೆ ಈ ವರ್ಷ ಎಲ್ಲವೂ ಸರಳವಾಗಿ ನೆರವೇರಲಿದೆ. 

ಈ ವರ್ಷ ಸಾಮಾಜಿಕ ಅಂತರ ಕಾಯ್ದುಕೊಂಡು ದೆಹಲಿಯ ಕೆಂಪು ಕೋಟೆಯಲ್ಲಿ ಸಕಲ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಂದಿನಂತೆ ಧ್ವಜಾರೋಹಣ ಇರುತ್ತದೆ, ಆದರೆ ಸೀಮಿತ ಸಂಖ್ಯೆಯಲ್ಲಿ ಗಣ್ಯರು ಭಾಗವಹಿಸಲಿದ್ದಾರೆ, ಶಾಲಾ ಮಕ್ಕಳು ಭಾಗವಹಿಸುವುದಿಲ್ಲ. ಬದಲಾಗಿ 500 ಎನ್ ಸಿಸಿ ಕೆಡೆಟ್ ಗಳಿರುತ್ತಾರೆ.

ಸ್ವಾತಂತ್ರ್ಯ ದಿನಾಚರಣೆಗೆ ಸ್ವಚ್ಛತೆ ಮತ್ತು ಸಿದ್ಧತೆ ಮಾಡಿಕೊಳ್ಳಲು ಆಗಸ್ಟ್ 1ರಿಂದ ರೆಡ್ ಫೋರ್ಟ್ ಗೆ ಸಾರ್ವಜನಿಕ ಭೇಟಿಯನ್ನು ನಿಷೇಧಿಸಲಾಗಿತ್ತು. 

ಈ ಬಾರಿ ಸಾಮಾಜಿಕ ಅಂತರಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ.ಸಿಬ್ಬಂದಿ ಪಿಪಿಇ ಕಿಟ್ ಧರಿಸಬೇಕಾಗುತ್ತದೆ. ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ ವಾಯುಸೇನೆ, ಭೂ ಸೇನೆ ಮತ್ತು ನೌಕಾ ಸೇನೆಯ ಬ್ಯಾಂಡ್ ಪ್ರದರ್ಶನವಿರುತ್ತದೆ. ಸುಮಾರು 1,500 ಕೊರೋನಾ ವಾರಿಯರ್ಸ್ ಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಕೆಂಪು ಕೋಟೆಯ ಒಳಗೆ ಸುಮಾರು 300 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ದೆಹಲಿ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. 

ಗೌರವ ಸ್ವೀಕರಿಸಲಿರುವ ಸುಮಾರು 350 ಪೊಲೀಸ್ ಸಿಬ್ಬಂದಿಯನ್ನು ಕೋವಿಡ್-19 ಆರೋಗ್ಯ ಸುರಕ್ಷತೆ ಹಿನ್ನೆಲೆಯಲ್ಲಿ ದೆಹಲಿ ಕಂಟೋನ್ಮೆಂಟ್ ನ ಪೊಲೀಸ್ ಕಾಲೊನಿಯಲ್ಲಿ ಐಸೊಲೇಷನ್ ನಲ್ಲಿರಿಸಲಾಗಿದೆ. ಲೋಹದ ಪತ್ತೆ ಹತ್ತಿರ ನಿಲ್ಲುವ ಸೈನಿಕರು ಪಿಪಿಇ ಕಿಟ್ ಗಳನ್ನು ಧರಿಸಿರುತ್ತಾರೆ. ಹ್ಯಾಂಡ್ ಸ್ಯಾನಿಟೈಸರ್ ನ್ನು ಇರಿಸಲಾಗುತ್ತದೆ. ಎರಡು ಗಜ ಅಂತರದಲ್ಲಿ ಕುಳಿತುಕೊಳ್ಳಲು ಆಸನ ವ್ಯವಸ್ಥೆಯಿರುತ್ತದೆ. 

ಕಾರ್ಯಕ್ರಮದಲ್ಲಿ ಭಾಗವಹಿಸುವವರೆಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕಾಗುತ್ತದೆ. ಮೊಬೈಲ್ ನಲ್ಲಿ ಆರೋಗ್ಯ ಸೇತು ಆಪ್ ನ ಸ್ಥಿತಿಗತಿ ನೋಡಿಕೊಂಡು ರೆಡ್ ಫೋರ್ಟ್ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.

ರಾಜ್ಯಗಳಲ್ಲಿ ಹೇಗಿರುತ್ತದೆ?: ಈ ವರ್ಷದ ಸ್ವಾತಂತ್ರ್ಯೋತ್ಸವದ ಧ್ಯೇಯವಾಕ್ಯ ಸ್ವಾವಲಂಬಿ ಭಾರತ ಎಂದು ಇರಲಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ವರ್ಷ 9 ಗಂಟೆ ನಂತರ ಕಾರ್ಯಕ್ರಮವಿರುತ್ತದೆ. ಧ್ವಜಾರೋಹಣ, ಪೊಲೀಸರಿಂದ ಗೌರವ ಸಲ್ಲಿಕೆ, ಮುಖ್ಯಮಂತ್ರಿಗಳ ಭಾಷಣ ಮತ್ತು ನಂತರ ಕೊನೆಯಲ್ಲಿ ರಾಷ್ಟ್ರಗೀತೆಯಿರುತ್ತದೆ. 

Stay up to date on all the latest ರಾಷ್ಟ್ರೀಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp