ಮಿಗ್-21 ಬೈಸನ್ ನಲ್ಲಿ ವಾಯುಸೇನಾ ಮುಖ್ಯಸ್ಥರ ಹಾರಾಟ; ಕಾರ್ಯಾಚರಣೆಯ ಸನ್ನದ್ಧತೆ ಪರಿಶೀಲನೆ

ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಗಡಿ ಉದ್ವಿಗ್ನತೆಯ ನಡುವೆಯೇ, ಭಾರತೀಯ ವಾಯುಪಡೆಯ (ಐಎಎಫ್) ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಗುರುವಾರ ವೆಸ್ಟರ್ನ್ ಏರ್ ಕಮಾಂಡ್‌ನ ಮುಖ್ಯ ವಾಯುನೆಲೆಗೆ ಭೇಟಿ ನೀಡಿ ಮಿಗ್ -21 ಬೈಸನ್ ಹಾರಾಟ ನಡೆಸಿದ್ದಾರೆ.
ರಾಕೇಶ್ ಕುಮಾರ್ ಸಿಂಗ್ ಭದೌರಿಯಾ
ರಾಕೇಶ್ ಕುಮಾರ್ ಸಿಂಗ್ ಭದೌರಿಯಾ

ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಗಡಿ ಉದ್ವಿಗ್ನತೆಯ ನಡುವೆಯೇ, ಭಾರತೀಯ ವಾಯುಪಡೆಯ (ಐಎಎಫ್) ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಗುರುವಾರ ವೆಸ್ಟರ್ನ್ ಏರ್ ಕಮಾಂಡ್‌ನ ಮುಖ್ಯ ವಾಯುನೆಲೆಗೆ ಭೇಟಿ ನೀಡಿ ಮಿಗ್ -21 ಬೈಸನ್ ಹಾರಾಟ ನಡೆಸಿದ್ದಾರೆ.

“ಆರ್‌ಕೆಎಸ್ ಭದೌರಿಯಾ ವೆಸ್ಟರ್ನ್ ಏರ್ ಕಮಾಂಡ್ (ಡಬ್ಲ್ಯುಎಸಿ) ಯ ಮುಂಚೂಣಿಯ ವಾಯುನೆಲೆಗೆ ಭೇಟಿ ನೀಡಿದ್ದು, ಬೇಸ್‌ನ ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲಿಸಿದ್ದಾರೆ ಮತ್ತು ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ್ದಾರೆ ಎಂದು ವಾಯುಸೇನೆ ಅಧಿಕಾರಿಗಳು ತಿಳಿಸಿದ್ದಾರೆ.

ಏಕ ಇಂಜಿನ್ ಹಾಗೂ ಏಕ ಆಸನವನ್ನು ಹೊಂದಿರುವ ಮಿಗ್-21 ಬೈಸನ್ ಬಹುಮುಖ್ಯವಾದ ರಷ್ಯಾ ಮೂಲದ ಯುದ್ಧ ವಿಮಾನವಾಗಿದೆ. ಅನೇಕ ದಶಕಗಳ ಕಾಲ ಇದು ಭಾರತೀಯ ವಾಯುಪಡೆಯ ಬೆನ್ನೆಲುಬು ಆಗಿ ಕಾರ್ಯನಿರ್ವಹಿಸುತ್ತಿದೆ. 1971ರ ಭಾರತ- ಪಾಕಿಸ್ತಾನ ಯುದ್ಧದ ಸಂದರ್ಭದಲ್ಲೂ ಈ ಯುದ್ದ ವಿಮಾನ  ಪ್ರಮುಖವಾದ ಪಾತ್ರ ನಿರ್ವಹಿಸಿದೆ.

ಕಳೆದ ಬಾರಿ, ಬಾಲಕೋಟ್ ವೈಮಾನಿಕ ದಾಳಿಯ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಾಯುಸೇನಾ  ಮುಖ್ಯಸ್ಥರು ಫೆಬ್ರವರಿ 26 ರಂದು ರಷ್ಯಾ ಮೂಲದ ಮಿಗ್ -21 ಬೈಸನ್ ನಲ್ಲಿ  ಹಾರಾಟ ನಡೆಸಿದ್ದರು.

ಕಳೆದ ವಾರ ವೈಸ್ ಚೀಫ್ ಆಫ್ ಏರ್ ಸ್ಟಾಫ್ ಏರ್ ಮಾರ್ಷಲ್ ಹರ್ಜಿತ್ ಸಿಂಗ್ ಅರೊರಾ ಕೂಡಾ ಪೂರ್ವ ಲಡಾಖ್ ನ
ವಾಸ್ತವ ನಿಯಂತ್ರಣ ರೇಖೆಗೆ ಭೇಟಿ ನೀಡಿದ್ದು, ವಾಯುಪಡೆ ಸಿದ್ಧತೆಗಳನ್ನು ಪರಿಶೀಲಿಸಿದ್ದರು. ವಿಶ್ವದ ಎತ್ತರದ
ಸ್ಥಳಗಳಲ್ಲಿ ಒಂದಾಗಿರುವ ದೌಲತ್ ಬೇಗ್ ಓಲ್ಡಿಗೂ ಭೇಟಿ ನೀಡಿದ್ದರು. ಏರ್ ಬೇಸ್  16,600 ಅಡಿಗಳಷ್ಟು
 ಎತ್ತರದಲ್ಲಿದೆ.

ಪೂರ್ವ ಲಡಾಖ್ ನ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಕಳೆದ ಎರಡು ತಿಂಗಳಲ್ಲಿ ಸುಕೊಯ್ 30 ಎಂಕೆಐ, ಜಾಗ್ವರ್, ಮೀರಾಜ್ 2000 ವಿಮಾನ ಸೇರಿದಂತೆ ಬಹುತೇಕ ಎಲ್ಲಾ ಯುದ್ದದ ವಿಮಾನಗಳನ್ನು ಭಾರತೀಯ ವಾಯುಪಡೆ ನಿಯೋಜಿಸಿದೆ. ಸೈನಿಕರನ್ನು ಸಾಗಿಸುವ ಚಿನೂಕ್, ಅಪಾಚಿಯಂತಹ ಹೆಲಿಕಾಪ್ಟರ್ ಗಳನ್ನು ಕೂಡಾ ಅಲ್ಲಿ ನಿಯೋಜಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com