ಬಿಹಾರ: ಹೆಚ್ಚಿದ ಮಂಗಗಳ ಕಾಟ; ಕರಡಿ ವೇಷ ತೊಟ್ಟು ಕೋತಿಗಳ ಓಡಿಸಿದ ಗ್ರಾಮಸ್ಥರು!

ದಿನ ಬೆಳಗಾಗಿ ಕಣ್ಣು ಬಿಡುತ್ತಿದ್ದಂತೆಯೇ ಕೋತಿಗಳ ಕಾಟ ಶುರುವಾಗಿ ಬಿಡುತ್ತಿತ್ತು. ನೆಮ್ಮದಿಯಿಂದ ಬದುಕುವುದೇ ಕಷ್ಟಸಾಧ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡರೂ...
ಕರಡಿ ವೇಷ ತೊಟ್ಟಿರುವ ಗ್ರಾಮಸ್ಥ
ಕರಡಿ ವೇಷ ತೊಟ್ಟಿರುವ ಗ್ರಾಮಸ್ಥ

ಪಾಟ್ನ: ದಿನ ಬೆಳಗಾಗಿ ಕಣ್ಣು ಬಿಡುತ್ತಿದ್ದಂತೆಯೇ ಕೋತಿಗಳ ಕಾಟ ಶುರುವಾಗಿ ಬಿಡುತ್ತಿತ್ತು. ನೆಮ್ಮದಿಯಿಂದ ಬದುಕುವುದೇ ಕಷ್ಟಸಾಧ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗದ ಹಿನ್ನಲೆಯಲ್ಲಿ ರೋಸಿ ಹೋದ ಬಿಹಾರ ರಾಜ್ಯದ ಈ ಗ್ರಾಮದ ಜನತೆ ಹೊಸ ತಂತ್ರವೊಂದನ್ನು ಪ್ರಯೋಗಿಸಿ ಕೋತಿಗಳನ್ನು ಕಾಲ್ಕಿತ್ತುವಂತೆ ಮಾಡಿದ್ದಾರೆ. 

ಬಿಹಾರದ ಆವರಯ್ಯ-ಬಾರೈ ತೋಲಾ ಗ್ರಾಮದ ನಿವಾಸಿಗಳು ಕಳೆದ 20 ವರ್ಷಗಳಿಂದ ಕೋತಿಗಳ ಕಾಟದಿಂದ ತಬ್ಬಿಬ್ಬಾಗಿ ಹೋಗಿದ್ದರು. ಅಧಿಕಾರಿಗಳಿಂದ ಯಾವುದೇ ರೀತಿಯ ಸಹಾಯಗಳಾಗದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತರಾಗಿ ಕಾಟ ತಪ್ಪಿಸಿಕೊಳ್ಳಲು ಮುಂದಾಗಿದ್ದ ಗ್ರಾಮಸ್ಥರು ಕರಡಿ ವೇಶ ತೊಟ್ಟು ಕೋತಿಗಳನ್ನು ಬೆದರಿಸಿ ಓಡಿ ಹೋಗುವಂತೆ ಮಾಡುತ್ತಿದ್ದಾರೆ. 

ಬಿದಿರು ಕಡ್ಡಿಗಳಿಂದ ಮಾಡಿದ ಬೋನನ್ನು ಗ್ರಾಮಸ್ಥರು ನಿರ್ಮಿಸಿರುವ ಗ್ರಾಮಸ್ಥರು ಕರಡಿ ವೇಷ ಧರಿಸಿ ಬಂದು ಕೋತಿಗಳನ್ನು ಓಡಿಸಿ ಈ ಬೋನುಗಳಿಗೆ ನುಗ್ಗುವಂತೆ ಮಾಡುತ್ತಿದ್ದಾರೆ. ಇದೇ ರೀತಿ ಈವರೆಗೂ ಗ್ರಾಮಸ್ಥರು ಒಟ್ಟು 85 ಕೋತಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸೆರೆ ಹಿಡಿದ ಮಂಗಗಳನ್ನು ಅರಣ್ಯ ಇಲಾಖೆ ವಶಕ್ಕೆ ನೀಡಿದ್ದಾರೆ. 

ಗ್ರಾಮದಲ್ಲಿರುವ ಪ್ರತೀಯೊಬ್ಬರಿಂದ ಹಣ ಪಡೆದು ರೂ.12,000 ಸಂಗ್ರಹಿಸಿ ಉತ್ತರಪ್ರದೇಶದಲ್ಲಿರುವ ಶಹಜಹಾನ್ ಪುರದಲ್ಲಿ ನಾಲ್ಕು ಸೆಟ್ ಕರಡಿಗಳ ಬಟ್ಟೆಗಳನ್ನು ಖರೀದಿ ಮಾಡಲಾಗಿದೆ. ಕಳೆದ 20 ವರ್ಷಗಳಲ್ಲಿ ಗ್ರಾಮದಲ್ಲಿ ಕೋತಿಗಳ ಸಂತತಿ 2000ಕ್ಕೆ ಏರಿಕೆಯಾಗಿದೆ. ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿರುವ ಈ ಕೋತಿಗಳು ಪ್ರತೀನಿತ್ಯ ಜನರ ಮೇಲೆ, ಬೆಳೆಗಳ ಮೇಲೆ ದಾಳಿ ಮಾಡುತ್ತಿದ್ದವು ಎಂದು ಗ್ರಾಮದ ನಿವಾಸಿ ಮಿಲನ್ ಕುಮಾರ್ ಅವರು ಹೇಳಿದ್ದಾರೆ. 

ಕೋತಿಗಳ ಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ಸ್ಥಳೀಯ ರಾಜಕೀಯ ನಾಯಕರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳಲ್ಲಿ ಮನವಿ ಮಾಡಿಕೊಂಡಿದ್ದೆವು. ಆದರೆ, ಅದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ. ಬೇಸತ್ತು ಕೋತಿಗಳ ವಿರುದ್ಧ ನಾವೇ ಕ್ರಮ ಕೈಗೊಳ್ಳಲು ಮುಂದಾಗಿದ್ದೆವು ಎಂದು ತಿಳಿಸಿದ್ದಾರೆ. 

ಕೋತಿಗಳ ಕಾಟಕ್ಕೆ ದೆಹಲಿ ರೈತರು ಕಬ್ಬು ಹಾಗೂ ಇತರೆ ಬೆಳೆಗಳನ್ನು ಬೆಳೆಯುವುದನ್ನೇ ನಿಲ್ಲಿಸಿದ್ದರು. ಮಹಿಳೆಯರು ಮಕ್ಕಳು ಸೇರಿದಂತೆ ನೂರಾರು ಜನರ ಮೇಲೂ ಈ ಕೋತಿಗಳು ದಾಳಿ ಮಾಡಿ ಗಾಯಗೊಳಿಸಿತ್ತು ಎಂದಿದ್ದಾರೆ. 

ಇನ್ನು ಕರಡಿ ವೇಷ ಧರಿಸಿದ ವೇಳೆ ಜನನಿಬಿಡ ಪ್ರದೇಶದಲ್ಲಿದ್ದ ಬೀದಿ ನಾಯಿಗಳು ಇವರ ಮೇಲೆ ದಾಳಿ ಮಾಡಲು ಆರಂಭಿಸಿದ್ದು, ನಾಯಿಗಳ ಕಾಟ ತಪ್ಪಿಸಿಕೊಳ್ಳಲು ಜನರು ಕೋಲುಗಳನ್ನು ತಮ್ಮೊಂದಿಗಿಟ್ಟುಕೊಳ್ಳುತ್ತಿದ್ದಾರೆಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com